
ಸ್ವಚ್ಚತಾ ಹೀ ಸೇವಾ ಅಂಗವಾಗಿ ಅಂಬಲಪಾಡಿ ಗ್ರಾಮ ಪಂಚಾಯತ್ ನಲ್ಲಿ ಶ್ರಮದಾನ “ಸ್ವಚ್ಚತಾ ಹೀ ಸೇವಾ” ಅಂಗವಾಗಿ ಅಕ್ಟೊಬರ್ 1 ಆದಿತ್ಯವಾರದಂದು ಬೆಳಿಗ್ಗೆ ಗಂಟೆ 9.00ರಿಂದ ಅಂಬಲಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಖ್ಯ ರಸ್ತೆಗಳಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಜಾತ ಶೆಟ್ಟಿ ಅವರ ನೇತೃತ್ವದಲ್ಲಿ ಸ್ವಚ್ಚತಾ ಶ್ರಮದಾನ ಮಾಡಲಾಯಿತು.

ಈ ಸಂಧರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಸುಜಾತ ಸುಧಾಕರ್, ಗ್ರಾಮ ಪಂಚಾಯತ್ ನ ನಿಕಟ ಪೂರ್ವ ಅಧ್ಯಕ್ಷರಾದ ರೋಹಿಣಿ S ಪೂಜಾರಿ ಸದಸ್ಯರುಗಳಾದ ರಾಜೇಶ್ ಸುವರ್ಣ, ಪ್ರಮೋದ್ ಸಾಲಿಯಾನ್, ಶಶಿಧರ್ ಸುವರ್ಣ, ಉಷಾ ಶೆಟ್ಟಿ, ಸಬಿತಾ, ಲಕ್ಷ್ಮಣ ಪೂಜಾರಿ, ಪಂಚಾಯತ್ ಅಭಿವೃಧ್ದಿ ಅಧಿಕಾರಿ ವಸಂತಿ ಮೇಡಮ್, ಪಂಚಾಯತ್ ಸಿಬ್ಬಂದಿಗಳಾದ ವಿಶ್ವನಾಥ್, ಸನಿಲ್, ಸುಮನ್, ಹರಿಣಿ, ಸುಜಾತ, ಮಧು, ಅಂಬಲಪಾಡಿ ಗ್ರಾಮ ಪಂಚಾಯತ್ ಉಜ್ವಲ ಸಂಜೀವಿನಿ ಒಕ್ಕೂಟ ಸದಸ್ಯರಾದ MBK ಪ್ರಮೀಳಾ, ಉಪಾಧ್ಯಕ್ಷೆ ಉಷಾ, LCRP ಇಂದಿರಾ & ಶಮಿತಾ, ಅಂಗನಾಡಿ ಕಾರ್ಯಕರ್ತೆಯರಾದ ಲಕ್ಷ್ಮೀ, ಸುಪ್ರೀತಾ, ಲಕ್ಷ್ಮಿ , ಆಶಾ ಕಾರ್ಯಕರ್ತೆಯರು ಹಾಗೂ ಘನ ತ್ಯಾಜ್ಯ ನಿರ್ವಹಣಾ ಘಟಕದ ಸತೀಶ್, ಉಷಾ, ವಾರಿಜಾ, ಸುಮತಿ ಉಪಸ್ಥಿತರಿದ್ದರು.
ಪಂಚಾಯತ್ ಅಭಿವೃಧ್ಧಿ ಅಧಿಕಾರಿ ಕಾರ್ಯಕ್ರಮ ನಿರೂಪಿಸಿ ಶ್ರಮದಾನದಲ್ಲಿ ಭಾಗವಹಿಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸಿದರು. ಅಕ್ಷತಾ ಹೋಟೆಲ್ ವತಿಯಿಂದ ಶ್ರಮದಾನದಲ್ಲಿ ಭಾಗವಹಿಸಿದ ಎಲ್ಲರಿಗೂ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು.
Leave a Reply