
ಕೋಟ: 2024ರ ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿಯಾಗಬೇಕು ಅನ್ನೋ ಉದ್ದೇಶದಿಂದ ನಮೋ ಬ್ರಿಗೇಡ್ ಪ್ರಮುಖ ಚಕ್ರವರ್ತಿ ಸೂಲಿಬೆಲೆ ನೇತೃತ್ವದಲ್ಲಿ ಜನ ಗಣ ಮನ ಬೆಸೆಯೋಣ ಬೈಕ್ ಯಾತ್ರೆ ಸೋಮವಾರ ಸಾಸ್ತಾನಕ್ಕೆ ಆಗಮಿಸಿತು.
ಈ ಸಂದರ್ಭದಲ್ಲಿ ನಮೋ ಬ್ರಿಗೇಡ್ ಪ್ರಮುಖ ಚಕ್ರವರ್ತಿ ಸೂಲಿಬೆಲೆ ಹಾಗೂ ತಂಡದವರಿಗೆ ಮಾಜಿ ತಾ.ಪಂ ಅಧ್ಯಕ್ಷೆ ಜ್ಯೋತಿ ಉದಯ್ ಕುಮಾರ್, ಪ್ರತಿಮಾ ಅನಂತ್ ನಾಯಕ್ ಹಾಗೂ ಸಂದ್ಯಾ ರಿಷಿರಾಜ್ ಆರತಿ ಬೆಳಗಿ ಹಣೆಗೆ ತಿಲಕ ಇರಿಸಿ ಶುಭಹಾರೈಸಿದರು.

ಈ ವೇಳೆ ಬಿಜೆಪಿ ಹಿಂದುಳಿದ ಮೋರ್ಚಾ ರಾಜ್ಯ ಕಾರ್ಯದರ್ಶಿ ಐರೋಡಿ ವಿಠ್ಠಲ್ ಪೂಜಾರಿ ಹಾಗೂ ಕೋಟ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಸುರೇಶ್ ಕುಂದರ್, ಸಾಲಿಗ್ರಾಮ ಪಟ್ಟಣ ಪಂಚಾಯತ್ ಸದಸ್ಯ ರಾಜು ಪೂಜಾರಿ ಕಾರ್ಕಡ, ಪಾಂಡೇಶ್ವರ ಪಂಚಾಯತ್ ಸದಸ್ಯರಾದ ಪ್ರತಾಪ್ ಶೆಟ್ಟಿ, ಐರೋಡಿ ಪಂಚಾಯತ್ ಸದಸ್ಯರಾದ ಅಶ್ವಿನ್ ಕುಮಾರ್, ನಟರಾಜ್ ಗಾಣಿಗ, ಸಾಸ್ತಾನ ಸಿ ಎ ಬ್ಯಾಂಕ್ ನಿರ್ದೇಶಕರಾದ ಕಿರಣ್ ತೋಮಸ್, ರಮೇಶ್ ಕಾರಂತ್, ಕೊಡಿ ಶಕ್ತಿಕೇಂದ್ರ ಅಧ್ಯಕ್ಷ ಮಹಾಬಲ ಕುಂದರ್ ಕೊಡಿ, ಪಂಚಾಯತ್ ಸದಸ್ಯರಾದ ಕೃಷ್ಣ ಪೂಜಾರಿ, ಕೋಟತಟ್ಟು ಪಂಚಾಯತ್ ಸದಸ್ಯರಾದ ಪ್ರಕಾಶ್ ಪೂಜಾರಿ, ಹಾಗೂ ಪ್ರಮುಖರಾದ ಅನಂತ್ ನಾಯಕ್, ಶಂಕರ್ ಕುಲಾಲ್ ಐರೋಡಿ , ರವಿಕಿರಣ್ ಪೂಜಾರಿ ಪಾಂಡೇಶ್ವರ, ಕುಮಾರ ಪೂಜಾರಿ ಪಾಂಡೇಶ್ವರ , ರಾಘವೇಂದ್ರ ಪೂಜಾರಿ ಮೂಡಹಡು, ಸಚಿನ್ ಶ್ರೀಯಾನ್ ಮೂಡಹಡು, ಸಂತೋಷ್ ಪೂಜಾರಿ, ರಾಘವೇಂದ್ರ ಮಡಿವಾಳ ಐರೋಡಿ, ಸಂತೋಷ ಕುಲಾಲ್ ಐರೋಡಿ ಮುಂತಾದವರು ಉಪಸ್ಥಿತರಿದ್ದರು.
ಸಾಸ್ತಾನಕ್ಕೆ ಆಗಮಿಸಿದ ನಮೋ ಬ್ರಿಗೇಡ್ ಪ್ರಮುಖ ಚಕ್ರವರ್ತಿ ಸೂಲಿಬೆಲೆ ನೇತೃತ್ವದಲ್ಲಿ ಜನ ಗಣ ಮನ ಬೆಸೆಯೋಣ ಬೈಕ್ ಯಾತ್ರೆ ತಂಡವನ್ನು ಸ್ವಾಗತಿಸಲಾಯಿತು.
Leave a Reply