• Fri. Jul 19th, 2024

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ಶ್ರೀ ವಿನಾಯಕ ಯುವಕ ಮಂಡಲ ಸಾೈಬ್ರಕಟ್ಟೆ- ಯಡ್ತಾಡಿ
12 ನೇ ವರ್ಷದ ಶ್ರೀ ಶಾರದ ಮಹೋತ್ಸವ

ByKiran Poojary

Oct 18, 2023

ಕೋಟ : ಶ್ರೀ ವಿನಾಯಕ ಯುವಕ ಮಂಡಲ ಸಾೈಬ್ರಕಟ್ಟೆ- ಯಡ್ತಾಡಿ ಇವರ ಆಶ್ರಯದಲ್ಲಿ 12 ನೇ ವರ್ಷದ ಸಾರ್ವಜನಿಕ ಶ್ರೀ ಶಾರದ ಮಹೋತ್ಸವ ಕಾರ್ಯಕ್ರಮವು ಸಾೈಬ್ರಕಟ್ಟೆ ಮಹಾತ್ಮ ಗಾಂಧಿ ಫ್ರೌಡಶಾಲೆಯ ಸಭಾಭವನದಲ್ಲಿ ವೇದಮೂರ್ತಿ ರಾಜೇಶ್ ಐತಾಳ್ ಅವರ ಪೂಜಾ ಮಾರ್ಗದರ್ಶನದಲ್ಲಿ 20 ರಿಂದ 23 ತನಕ ನಡೆಯಲಿದೆ.

20ರಂದು ಬೆಳಿಗ್ಗೆ 8 ಗಂಟೆಯಿಂದ ಸಂಭ್ರಮದ ಮೆರವಣಿಗೆಯ ಮೂಲಕ ಶ್ರೀ ಶಾರದ ದೇವಿಯ ಪೂರ್ಣ ಕುಂಭ ಕಲಶದೊಂದಿಗೆ ವೈಭವದ ಪುರಪ್ರವೇಶ ಹಾಗೂ ಶ್ರೀ ಶಾರದಾಂಬೆಯ ವಿಗ್ರಹ ಪ್ರತಿಷ್ಠಾಪನೆ, 6 ಕಾಯಿ ಗಣಹೋಮ ಸಂಜೆ 6 ರಿಂದ ಶಾಲಾ ವಿದ್ಯಾರ್ಥಿಗಳ ಸಾಂಸ್ಕøತಿಕ ಕಾರ್ಯಕ್ರಮ, ಸಂಜೆ 7.30ಕ್ಕೆ ಸಾಧಕನ ಸಾಧನೆಯ ಹೆಜ್ಜೆ ಗುರುತು ಅನಾವರಣ ‘ ಶ್ರೀ ವಿನಾಯಕ ಸಾಧನ ಶ್ರೀ ಪುರಸ್ಕಾರ’ ಈಶ್ವರ್ ಮಲ್ಪೆ ಅವರಿಗೆ ಗಣ್ಯಾತಿ ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದ್ದು, ತುಳುನಾಡ ಗಾನ ಗಂಧರ್ವ ಬಿರುದಾಂಕಿತ ಶ್ರೀ ಪುತ್ತೂರು ಜಗದೀಶ್ ಆಚಾರ್ಯ ಮತ್ತು ಬಳಗದವರಿಂದ “ಸಂಗೀತ ಗಾನ ಸಂಭ್ರಮ” ನಡೆಯಲಿದೆ. 21 ಬೆಳಿಗ್ಗೆ 9.30 ರಿಂದ ಸತ್ಯನಾರಾಯಣ ಪೂಜೆ , ದುರ್ಗಾ ಹೋಮ, ಸಂಜೆ 8.30ಕ್ಕೆ ಓಂಕಾರ ಕಲಾವಿದರು ಕನ್ನುಕೆರೆ ತೆಕ್ಕಟ್ಟೆ ಅವರಿಂದ ಸಾಮಾಜಿಕ ಹಾಸ್ಯಮಯ ಸಾಮಾಜಿಕ ನಗೆನಾಟಕ “ ಅಗೋಚರ” ನಡೆಯಲಿದ್ದು, 22-10-2023ನೇ ಆದಿತ್ಯವಾರ 9.30ಕ್ಕೆ ಚಂಡಿಕಾಹೋಮ , ಮಧ್ಯಾಹ್ನ 2.30 ಕ್ಕೆ ಮುದ್ದು ಪುಟಾಣಿಗಳಿಗಾಗಿ “ ಮುದ್ದು ಕೃಷ್ಣ ಸ್ಪರ್ಧೆ” 6.30 ಕ್ಕೆ ಭಕ್ತಿಸುಧೆ ಭಜನಾ ಕಾರ್ಯಕ್ರಮ, 7.30 ಕ್ಕೆ ದುರ್ಗಾದೀಪ ನಮಸ್ಕಾರ ಪೂಜೆ ನಡೆಯಲಿದೆ. 23 ರಂದು ಬೆಳಿಗ್ಗೆ ಚಂಡಿಕಾಹೋಮ , ಅಕ್ಷರ ಅಭ್ಯಾಸ ಮಧ್ಯಾಹ್ನ 12.30 ಕ್ಕೆ ಮಹಾ ಅನ್ನ ಸಂತರ್ಪಣೆ 1.30ಕ್ಕೆ ಸ್ಥಳೀಯ ಪ್ರತಿಭೆಗಳ ಸಾಂಸ್ಕøತಿಕ ಕಾರ್ಯಕ್ರಮ, 3.00 ರಿಂದ ಮಹಿಳೆಯರಿಗಾಗಿ ಮನೋರಂಜನಾ ಆಟೋಟ ಸ್ಪರ್ಧೆ, ಮೊಸರು ಕುಡಿಕೆ ನಡೆಯಲಿದ್ದು ಸಂಜೆ 6.00 ಗಂಟೆಗೆ ಶ್ರೀ ದೇವಿಯ ವೈಭವದ ಶೋಭಾಯಾತ್ರೆಯ ಮೂಲಕ ಜಲಸ್ಥಂಬನ ವಿಶೇಷ ಆಕರ್ಷಣೆಯಾಗಿ ಕೀಲು ಕುದುರೆ, ಗೊಂಬೆ ಕುಣಿತ, ಹಾಗೂ ಸ್ಥಬ್ದ ಚಿತ್ರಗಳು, ಶ್ರೀ ಗುರು ಕುಣಿತ ಭಜನಾ ತಂಡ ಅಂಬಲಪಾಡಿ, ಉಡುಪಿ ಇವರಿಂದ ಮೆರೆವಣಿಗೆಯಲ್ಲಿ ಕುಣಿತ ಭಜನೆ ಇರಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *