ಕೋಟ: ಭಜನೆ ಎಂಬುವುದು ದೇವರನ್ನು ಒಲಿಸಿಕೊಳ್ಳುವ ಅತಿ ಸುಲಭ ಸಾಧನ ಆ ಮೂಲಕ ಮನಸ್ಸಿನಲ್ಲಿ ಶಾಂತಿ ನೆಮ್ಮದಿ ಪ್ರಾಪ್ತಿ ಗಳಿಸಲು ಸಾಧ್ಯ ಎಂದು ಕುಂದಾಪುರ ಬಾರ್ ಅಸೋಸಿಯೇಷನ್ ಅಧ್ಯಕ್ಷ ಬನ್ನಾಡಿ ಸೋಮನಾಥ್ ಹೆಗ್ಡೆ ಹೇಳಿದರು.
ಗುರುವಾರ ಪಾಂಡೇಶ್ವರದ ಕಳಿಬೈಲು ಶ್ರೀ ಕ್ಷೇತ್ರ ತುಳುಸಿ ಅಮ್ಮ ಸ್ವಾಮೀ ಕೊರಗಜ್ಜ ಪರಿವಾರ ದೈವಸ್ಥಾನದಲ್ಲಿ ಶರನ್ನವರಾತ್ರಿ ಅಂಗವಾಗಿ ಹಮ್ಮಿಕೊಂಡ ಭಜನಾಮೃತ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಆಗಿನ ಕಾಲಘಟ್ಟದಲ್ಲಿ ಶ್ರೀ ರಾಮ ಭಜನೆ ಮೂಲಕ ಭಜನೆಗೆ ಹೆಚ್ಚಿನ ಆಯಾಮ ನೀಡಲಾಗುತ್ತಿತ್ತು ಅದರ ಮೂಲಕ ಸಂಸ್ಕಾರಭರಿತ ಧರ್ಮ ಜಾಗೃತಿಗೆ ವೇದಿಕೆಯನ್ನು ಕಲ್ಪಿಸಿದೆ.
ಭಜನೆ ಈ ಕಲಿಯುಗದಲ್ಲಿ ಕ್ರಾಂತಿಯನ್ನೆ ಪಸರಿಸಿದೆ. ಯಾವುದೇ ಕ್ಷೇತ್ರ ಇರಬಹುದು ಅಲ್ಲಿ ನಿರಂತರ ಕ್ರೀಯಾಶೀಲತೆ ಇದ್ದರೆ ಆ ಕ್ಷೇತ್ರ ಭಕ್ತರ ಮೂಲಕ ಧಾರ್ಮಿಕ ಪ್ರಜ್ಞೆ ಬೆಳೆಯಲು ಸಹಕಾರಿಯಾಗುತ್ತದೆ ಎಂದರು. ಈ ಸಂದರ್ಭದಲ್ಲಿ ದೈವಸ್ಥಾನದ ಮುಕ್ತೇಸರ ಎಂ.ಸಿ ಚಂದ್ರಶೇಖರ್, ಪಾಂಡೇಶ್ವರ ಗ್ರಾಮಪಂಚಾಯತ್ ಸದಸ್ಯ ಚಂದ್ರಮೋಹನ್ ಪೂಜಾರಿ, ನಿವೃತ್ತ ಬ್ಯಾಂಕ್ ಅಧಿಕಾರಿ ಪಂಜು ಪೂಜಾರಿ, ಮೀನುಗಾರ ಮುಖಂಡ ರಾಜು ಶ್ರೀಯಾನ್, ಕಂಬಳದ ಒಟಗಾರ ಗಣೇಶ್ ಪಾಂಡೇಶ್ವರ, ಶ್ರೀ ಸಿದ್ಧಿವಿನಾಯಕ ಭಜನಾ ತಂಡದ ಮುಖ್ಯಸ್ಥೆ ಬೇಬಿ ಇದ್ದರು. ದೈವಸ್ಥಾನದ ಪ್ರದಾನ ಅರ್ಚಕ ಅಭಿಜಿತ್ ಪಾಂಡೇಶ್ವರ ಸ್ವಾಗತಿಸಿದರು.ಶ್ರೀಶ ಆಚಾರ್ ಕಾರ್ಯಕ್ರಮ ನಿರೂಪಿಸಿದರು. ನಂತರ ಭಜನಾ ಕಾರ್ಯಕ್ರಮ ಜರಗಿತು.
ಪಾಂಡೇಶ್ವರದ ಕಳಿಬೈಲು ಶ್ರೀ ಕ್ಷೇತ್ರ ತುಳುಸಿ ಅಮ್ಮ ಸ್ವಾಮೀ ಕೊರಗಜ್ಜ ಪರಿವಾರ ದೈವಸ್ಥಾನದಲ್ಲಿ ಶರನ್ನವರಾತ್ರಿ ಅಂಗವಾಗಿ ಹಮ್ಮಿಕೊಂಡ ಭಜನಾಮೃತ ಕಾರ್ಯಕ್ರಮವನ್ನು ಕುಂದಾಪುರ ಬಾರ್ ಅಸೋಸಿಯೇಷನ್ ಅಧ್ಯಕ್ಷ ಬನ್ನಾಡಿ ಸೋಮನಾಥ್ ಹೆಗ್ಡೆ ಉದ್ಘಾಟಿಸಿದರು.
Notice: Undefined variable: post in /home/hosakira/public_html/wp-content/themes/newses/inc/ansar/hooks/hook-single-page.php on line 180