ಕೋಟ: ಕೋಡಿ ಗ್ರಾ.ಪಂ.ಗ್ರಾಮಸಭೆ ಅ.19ರಂದು ಕೋಡಿ ಸ.ಹಿ.ಪ್ರಾ.ಶಾಲೆ ಸಭಾಂಗಣದಲ್ಲಿ ಜರಗಿತು. ಗ್ರಾ.ಪಂ. ಅಧ್ಯಕ್ಷ ಪ್ರಭಾಕರ ಮೆಂಡನ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಕೋಡಿತಲೆ ಪ್ರದೇಶದಲ್ಲಿ ಸ್ಮಶಾನದ ವ್ಯವಸ್ಥೆ ಇಲ್ಲ. ಸಾರ್ವಜನಿಕ ಸ್ಥಳವೊಂದರಲ್ಲಿ ಎಲ್ಲರೂ ಶವ ದಹನ ಮಾಡುತ್ತಾರೆ. ಹೀಗಾಗಿ ವ್ಯವಸ್ಥಿತ ಶಶಾನ ನಿರ್ಮಿಸಬೇಕು ಎಂದು ಗ್ರಾಮಸ್ಥರು ಬೇಡಿಕೆ ಸಲ್ಲಿಸಿದರು. ಬೀದಿ ನಾಯಿಗಳಿಂದ ಸಾಕಷ್ಟು ಸಮಸ್ಯೆಯಾಗುತ್ತಿದೆ. ಇವುಗಳ ನಿಯಂತ್ರಣಕ್ಕೆ ಸೂಕ್ತ ಕ್ರಮಕೈಗೊಳ್ಳಬೇಕು ಎನ್ನುವ ವಿಚಾರ ವ್ಯಕ್ತವಾಯಿತು.
ಹಕ್ಕು ಪತ್ರಕ್ಕಾಗಿ ಕಂದಾಯ ಹಣ ಪಾವತಿಸಿದವರಿಗೆ ಶೀಘ್ರವಾಗಿ ಪತ್ರ ವಿತರಿಸುವ ವ್ಯವಸ್ಥೆಯಾಗಬೇಕು ಎನ್ನುವ ಬೇಡಿಕೆ ಕೇಳಿಬಂತು. ಕೋಡಿಬೆಂಗ್ರೆ,ಕೋಡಿ ಕನ್ಯಾಣ ಅಂಗನವಾಡಿಗಳಿಗೆ ಸ್ವಂತ ಕಟ್ಟಡ ನಿರ್ಮಿಸಬೇಕೆಂಬ ಬೇಡಿಕೆ, ಗೃಹಲಕ್ಷ್ಮೀ ಯೋಜನೆ ಸಮಸ್ಯೆಯ ಬಗ್ಗೆ ಚರ್ಚೆ ನಡೆಯಿತು. ವಿವಿಧ ಇಲಾಖೆಗಳ ಅಧಿಕಾರಿಗಳು, ಇಲಾಖೆ ಮಾಹಿತಿ ನೀಡಿದರು. ಮಾರ್ಗದರ್ಶಿ ಅಧಿಕಾರಿಯಾಗಿ ರಮೇಶ್ ಕಾರ್ಯನಿರ್ವಹಿಸಿದರು. ಪಿಡಿಒ ರವೀಂದ್ರ ರಾವ್ ನಿರೂಪಿಸಿದರು. ಕೋಡಿ ಗ್ರಾ.ಪಂ.ಗ್ರಾಮಸಭೆ ಅ.19ರಂದು ಕೋಡಿ ಸ.ಹಿ.ಪ್ರಾ.ಶಾಲೆ ಸಭಾಂಗಣದಲ್ಲಿ ಜರಗಿತು.