• Mon. Jul 15th, 2024

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ಹುಲಿವೇಷ ನೃತ್ಯ ಪ್ರದರ್ಶನ

ByKiran Poojary

Oct 21, 2023

ಕುಂದಾಪುರ: ನವರಾತ್ರಿಯಲ್ಲಷ್ಟೇ ವಿಶೇಷವಾಗಿ ಬಣ್ಣ ಹಚ್ಚಿ ಹೆಜ್ಜೆ ಹಾಕುವ ಪಾರಂಪರಿಕ ಹುಲಿವೇಷ ನೃತ್ಯ ಕುಂದಾಪುರದ ವೈಶಿಷ್ಟ್ಯವಾಗಿದೆ. ವಾದ್ಯ, ತಾಸ್ಮಾರ ಡೋಲು ಮೌರಿಯ ನಾದಕ್ಕೆ ಗೊಂಡೆಯಾಡಿಸುತ್ತಾ ಅದಕ್ಕೆ ತಕ್ಕಂತೆ ಹೆಜ್ಜೆ ಹಾಕುವ ಹುಲಿವೇಷಗಳ ನೃತ್ಯ ನೋಡುವುದೇ ಕಣ್ಣಿಗೆ ಹಬ್ಬ.

ಅಳಿವಿನಂಚಿಗೆ ತೆರಳಿರುವ ಈ ಕಲೆಯನ್ನು ಮತ್ತೆ ಮೇಲೆತ್ತಲು, ಬೆಳೆಸಲು ಕಲಾಕ್ಷೇತ್ರ-ಕುಂದಾಪುರ ಟ್ರಸ್ಟ್ ಹುಲಿವೇಷದಾರಿಗಳ ತಂಡದೊಂದಿಗೆ ಬಹುವರ್ಷಗಳಿದ ಕೈಜೋಡಿಸಿದೆ. ಈ ಹಿನ್ನೆಲೆಯಲ್ಲಿ ಪ್ರತೀ ವರ್ಷವೂ ವಿಶೇಷ ವೇದಿಕೆ ಸಿದ್ದಪಡಿಸಿ ವರ್ಣರಂಜಿತ ಬೆಳಕಿನಲ್ಲಿ ಬಿನ್ನವಾದ ಶೈಲಿಯಲ್ಲಿ ನೃತ್ಯ ಪ್ರದರ್ಶನವನ್ನು ಆಯೋಜಿಸುತ್ತಿದೆ.

ಈ ಬಾರಿ ಆಕ್ಟೋಬರ್ 22 ರಂದು ಭಾನುವಾರ ಸಂಜೆ 7.00 ಕ್ಕೆ ಕುಂದಾಪುರದ ಬೋರ್ಡ್ ಹೈಸ್ಕೂಲಿನ ಬಯಲು ರಂಗ ವೇದಿಕೆಯಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು ಕುಂದಾಪುರ ಪರಿಸರದ ವಿವಿಧ ಹುಲಿವೇಷಧಾರಿಗಳ ತಂಡ ಇಲ್ಲಿ ಭಾಗವಹಿಸಿ ಕಲಾಸಕ್ತರನ್ನು ರಂಜಿಸಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಹುಲಿವೇಷದಾರಿಗಳನ್ನು ಪ್ರೋತ್ಸಾಹಿಸಬೇಕು ಎಂದು ಸಂಸ್ಥೆಯ ಅಧ್ಯಕ್ಷ ಬಿ. ಕಿಶೋರ್ ಕುಮಾರ್ ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Leave a Reply

Your email address will not be published. Required fields are marked *