ಬೀದರ್ : ಜಿಲ್ಲೆಯ ಪೆÇಲೀಸ್ ರಿಂದ 6 ಕಡೆ ಮಟಕಾ ದಾಳಿ, ಒಂದು ಇಸ್ಪೀಟ್ ಜೂಜಾಟದ ಮೇಲೆ ದಾಳಿ ಮಾಡಿ 33 ಸಾವಿರಕ್ಕೂ ಅಧಿಕ ಮೊತ್ತವನ್ನು ಜಪ್ತಿ ಮಾಡಲಾಗಿದೆ. ಭಾಲ್ಕಿ ನಗರ ಪೊಲೀಸ್ ಠಾಣೆಯ ಅಮರೇಶ ಪಿ.ಐ ಹಾಗೂ ಸಿಬ್ಬಂದಿ ಪಾಪವ್ಯಾ ಕ್ರಾಸ್, ಎಪಿಎಮ್‍ಸಿ ಹತ್ತಿರ ಮತ್ತು ಪಶು ಆಸ್ಪತ್ರೆಯ ಹತ್ತಿರ ಮಟಕಾ ಜೂಜಾಟದಲ್ಲಿ ತೊಡಗಿದವರ ಮೇಲೆ ದಾಳಿ ಮಾಡಿ 3 ಪುಕರಣದಲ್ಲಿ ನಗದು ಹಣ 3,150 ಮತ್ತು ಮಟಕಾ ಚೀಟಿ ಜಪ್ತಿ ಮಾಡಿಕೊಂಡಿದ್ದಾರೆ.
ಮನ್ನಾಏಖೇಳಿ ಪೊಲೀಸ್ ಠಾಣೆಯ ಬಸವರಾಜ, ಪಿಎಸ್‍ಐ ಏಕನಾಥ ಸಿಬ್ಬಂದಿಯೊಂದಿಗೆ ಹಳೆ ಐಬಿ ಹತ್ತಿರ ಮತ್ತು ತಾಳಮಡಗಿ ಗ್ರಾಮದಲ್ಲಿ ಪ್ರತ್ಯೇಕವಾಗಿ ಮಟಕಾ ಜೂಜಾಟದ ಮೇಲೆ ದಾಳಿ ಮಾಡಿ 2,130 ರೂ ಮತ್ತು ಮಟಕಾ ಚೀಟಿ ಜಪ್ತಿ ಮಾಡಿದ್ದಾರೆ. ಧನ್ನೂರ ಪೆÇಲೀಸ್ ಠಾಣೆಯ ಪಿಎಸ್‍ಐ ವಿಶ್ವರಾಧ್ಯಾ ನೇತೃತ್ವದಲ್ಲಿ ನಿಟ್ಟೂರ-ಬಿ ಮತ್ತು ಕಣಜಿ ಗ್ರಾಮದಲ್ಲಿ ಮಟಕಾ ಜೂಜಾಟ ಆಡುತ್ತಿದ್ದವರ ಮೇಲೆ ದಾಳಿ ಮಾಡಿ 3,700 ರೂಪಾಯಿ ಹಾಗೂ ಮಟಕಾ ಚೀಟಿ ವಶಪಡಿಸಿಕೊಂಡಿದ್ದಾರೆ. ಅಷ್ಟೆ ಅಲ್ಲದೇ ಹಳ್ಳಿಖೇಡ್-ಬಿ ಪೆÇಲೀಸ್ ಠಾಣೆಯ ಪಿಎಸ್‍ಐ ಅಯ್ಯಪ್ಪ ನೇತೃತ್ವದಲ್ಲಿ ಅಲ್ಲೂರ ಗ್ರಾಮದಲ್ಲಿ ಜೂಜಾಟ ಆಡುತ್ತಿದ್ದವರ ಮೇಲೆ ದಾಳಿ ಮಾಡಿ 16,040 ರೂಪಾಯಿ ಜಪ್ತಿ ಮಾಡಿಕೊಂಡಿದ್ದಾರೆ.