ಕೋಟ: ಶ್ರೀ ಕ್ಷೇತ್ರ ಮಣೂರು ಹೇರಂಬ ಮಹಾಗಣಪತಿ ಹಾಗೂ ಮಹಾಲಿಂಗೇಶ್ವರ,ಪಾರ್ವತಿ ದೇವಿ ದೇಗುಲದಲ್ಲಿ ಶರನ್ನವರಾತ್ರಿ ಅಂಗವಾಗಿ ಪ್ರತಿದಿನ ಸಪ್ತಶತಿ ಚಂಡಿಕಾ ಪಾರಾಯಣ,ಹೂವಿನ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ,ವಿವಿಧ ತಂಡಗಳಿಂದ ಭಜನೆ,ಅನ್ನಸಂತರ್ಪಣಾ ಕಾರ್ಯಕ್ರಮಗಳು ಸಂಪನ್ನಗೊಂಡಿತು.
ವಿಜಯದಶಮಿ ಅಂಗವಾಗಿ ಸಾಮೂಹಿಕ ದುರ್ಗಾ ಹೋಮ ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಸತೀಶ್ ಕುಂದರ್ ದಂತಿಗಳು ಪೂಜಾ ವಿಧಿವಿಧಾನದಲ್ಲಿ ಭಾಗಿಯಾದರು. ಧಾರ್ಮಿಕ ವಿಧಿವಿಧಾನಗಳನ್ನು ವೇ.ಮೂ ವಾದಿರಾಜ ಐತಾಳ್ ನೇತ್ರತ್ವದಲ್ಲಿ ಜರಗಿತು. ಶ್ರೀ ರಾಮ ಭಜನಾ ಮಹಿಳಾ ಮಂಡಳಿ ಸಾಲಿಗ್ರಾಮ, ಸ್ನೇಹಕೂಟ ಮಣೂರು ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ಜರಗಿದವು
ಶ್ರೀ ಕ್ಷೇತ್ರದ ಆಡಳಿತ ಮಂಡಳಿಯ ಸದಸ್ಯರಾದ ಅಶೋಕ್ ಶೆಟ್ಟಿ ಕೊಯ್ಕೂರು, ದಿನೇಶ್ ಆಚಾರ್, ಬಾಬು , ಅಚ್ಯುತ್ ಹಂದೆ, ಕೃಷ್ಣ ದೇವಾಡಿಗ, ಸುಫಲ ಶೆಟ್ಟಿ, ದಿವ್ಯ ಎಂ ಪ್ರಭು,
ಅರ್ಚಕ ಪ್ರತಿನಿಧಿ ರವಿ ಐತಾಳ್, ಜೀರ್ಣೋದ್ಧಾರ ಸಮಿತಿಯ ಅರುಣಾಚಲ ಮಯ್ಯ, ವಿಷ್ಣುಮೂರ್ತಿ ಮಯ್ಯ, ಶಿವರಾಮ ಶೆಟ್ಟಿ,ನಾಗರಾಜ್ ಅಮೀನ್, ಗೋಪಾಲ್ ಪೈ, ಎಂ.ಎನ್ ಮಧ್ಯಸ್ಥ,ಭಾರತೀ ಮಯ್ಯ, ದೇಗುಲದ ಸಿಬ್ಬಂದಿ ಸುಶ್ಮಿತಾ ಉಪಸ್ಥಿತರಿದ್ದರು.
ಮಣೂರು ದೇಗುಲದಲ್ಲಿ ಶರನ್ನವರಾತ್ರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ದೇಗುಲದ ಆಡಳಿತ ಮಂಡಳಿ ಅಧ್ಯಕ್ಷ ಸತೀಶ್ ಕುಂದರ್ ದಂತಿಗಳು ಪೂಜಾ ವಿಧಿವಿಧಾನಗಳಲ್ಲಿ ಭಾಗಿಯಾದರು.