ಕೋಟ : ಮಕ್ಕಳ ಎಳೆ ವಯಸ್ಸಿನಲ್ಲಿ ಹೊಸ ಚಿಂತನೆಯ ಅವಕಾಶ ಕಲ್ಪಿಸಿ ಅವರಲ್ಲಿನ ಪ್ರತಿಭೆಯ ಅನಾವರಣಕ್ಕೆ ಸೂಕ್ತ ವೇದಿಕೆ ಯುವಕ ಮಂಡಲದಂತಹ ಸಂಘ ಸಂಸ್ಥೆಗಳು ನೆರವಾಗಬೇಕು, ಸಂಘಟನೆಗಳಿಂದ ಗ್ರಾಮೀಣ ಪ್ರದೇಶಗಳಲ್ಲೂ ಸಾಂಸ್ಕøತಿಕ ಚಿಂತನೆಯ ಜೊತೆಗೆ ಮಕ್ಕಳ ಸುಪ್ತ ಪ್ರತಿಭೆ ಅನಾವರಣಕ್ಕೆ ಅವಕಾಶ ಕಲ್ಪಸುತ್ತಿರುವುದು ಶ್ಲಾಘನೀಯ ಎಂದು ಸಾಹಿತಿ ಶಿಕ್ಷಕ ಅಲ್ತಾರು ನಾಗರಾಜ್ ಅವರು ಹೇಳಿದರು.
ಅವರು ಶ್ರೀ ವಿನಾಯಕ ಯುವಕ ಮಂಡಲ ಸಾಹೇಬರಕಟ್ಟೆ ಯಡ್ತಾಡಿ ಇದರ 12ನೇ ವರ್ಷದ ಸಾರ್ವಜನಿಕ ಶ್ರೀ ಶಾರದ ಮಹೋತ್ಸವದ ಪ್ರಯುಕ್ತ ನಡೆದ ಮುದ್ದು ಕೃಷ್ಣ ವೇಷ ಸ್ಪರ್ದೆಯ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಯುವಕ ಮಂಡಲದ ಅಧ್ಯಕ್ಷ ನಂದೀಶ ನಾಯ್ಕ, ಭರತನಾಟ್ಯ ಶಿಕ್ಷಕರಾದ ವಿದುಷಿ ಅಮೃತ ಉಪಾಧ್ಯಾಯ, ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಯುವಕ ಮಂಡಲದ ಸದಸ್ಯ ಅಜಿತ್ ಕುಮಾರ್ ನಿರೂಪಿಸಿದರು.
ಶ್ರೀ ವಿನಾಯಕ ಯುವಕ ಮಂಡಲ ಸಾಹೇಬರಕಟ್ಟೆ ಯಡ್ತಾಡಿ ಇದರ 12ನೇ ವರ್ಷದ ಸಾರ್ವಜನಿಕ ಶ್ರೀ ಶಾರದ ಮಹೋತ್ಸವದ ಪ್ರಯುಕ್ತ ಮುದ್ದು ಕೃಷ್ಣ ವೇಷ ಸ್ಪರ್ದೆಯ ಕಾರ್ಯಕ್ರಮ ಜರಗಿತು.