
ಸರಕಾರಿ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢಶಾಲೆ, ಕೆಮ್ಮಣ್ಣು, ಉಡುಪಿ ಜಿಲ್ಲೆ ಇಲ್ಲಿನ 9ನೇ ತರಗತಿಯ ವಿದ್ಯಾರ್ಥಿನಿಯಾದ ಕುಮಾರಿ ಚಿತ್ರ ಮೈಸೂರು ವಿಭಾಗ ಮಟ್ಟದ ಕ್ರಿಕೆಟ್ ಪಂದ್ಯಾಟದಲ್ಲಿ ಭಾಗವಹಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ಇದೀಗ ಬಿಹಾರದಲ್ಲಿ ನಡೆಯಲಿರುವ ರಾಷ್ಟ್ರೀಯ ಮಟ್ಟದ 17 ವರ್ಷ ವಯೋಮಾನದೊಳಗಿನ ಬಾಲಕಿಯರ ಕ್ರಿಕೆಟ್ ಕ್ರೀಡಾ ಕೂಟಕ್ಕೆ ಆಯ್ಕೆ ಆಗಿರುತ್ತಾಳೆ. ಈಕೆ ಬಡಾನಿಡಿಯೂರು ಗ್ರಾಮದ ಶ್ರೀ ಸುಧಾಕರ ಹಾಗೂ ಶ್ರೀಮತಿ ಹರಿಣಾಕ್ಷಿ ಇವರ ಪುತ್ರಿಯಾಗಿರುತ್ತಾಳೆ.