ಇಂದು ಇಡೀ ಕರ್ನಾಟಕ ನಾಡ ಹಬ್ಬವನ್ನು ಆಚರಿಸುತ್ತಿರುವಾಗ ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ಕನ್ನಡ ರಾಜ್ಯೋತ್ಸವ ದಿನಕ್ಕೆ ಅವಮಾನವಾಗಿದೆ.
ಬೈಂದೂರು ತಾಲೂಕು ಆಡಳಿತ ವತಿಯಿಂದ ಎಲ್ಲೂ ಸಹ ಕನ್ನಡ ಧ್ವಜ ಹಾಕದೆ ಪ್ರವಾಸಿ ಮಂದಿರ ಆವರಣದಲ್ಲಿ ಕೇವಲ ಕಾಟಾಚಾರಕ್ಕೋಸ್ಕರ ಕನ್ನಡ ರಾಜ್ಯೋತ್ಸವ ದಿನಾಚರಣೆಯನ್ನು ಆಚರಿಸಿರುತ್ತಾರೆ. ಇದರ ಬಗ್ಗೆ ತಹಸಿಲ್ದಾರರನ್ನು ವಿಚಾರಿಸಿದಾಗ ಬೈಂದೂರು ವಿಕಾಸಸೌಧ ಆವರಣ ಬಿಸಿಲು ಬಹಳ ಹೆಚ್ಚಾಗಿರುವುದರಿಂದ ನಾವು ಪ್ರವಾಸಿ ಮಂದಿರ ಆವರಣದಲ್ಲಿ ಕಾರ್ಯಕ್ರಮವನ್ನು ಆಯೋಜಿಸಿರುತ್ತೇವೆ ಎಂಬ ಬೇಜಾಬ್ದಾರಿತನದ ಉತ್ತರವನ್ನು ನೀಡಿರುತ್ತಾರೆ.
ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಬೈಂದೂರು ತಾಲೂಕು ತಹಸಿಲ್ದಾರರ ಮೇಲೆ ಶೀಘ್ರ ಕಾನೂನು ಕ್ರಮವನ್ನು ಜರುಗಿಸಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಕನ್ನಡ ರಾಜ್ಯೋತ್ಸವದ ಅಗೌರವ ತೋರಿದ ತಹಸಿಲ್ದಾರರ ವಿರುದ್ಧ ಪ್ರತಿಭಟನೆಯನ್ನು ಹಮ್ಮಿಕೊಳ್ಳುವುದು ಅನಿವಾರ್ಯವಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣ ಉಡುಪಿ ಜಿಲ್ಲಾಧ್ಯಕ್ಷರಾದ ಅನ್ಸಾರ್ ಅಹ್ಮದ್ ರವರು ಉಡುಪಿ ಜಿಲ್ಲಾ ಉಸ್ತುವಾರಿ ಮಂತ್ರಿ ಹಾಗೂ ಉಡುಪಿ ಜಿಲ್ಲಾಧಿಕಾರಿ ಯವರಲ್ಲಿ ಮನವಿ ಮಾಡಿಕೊಂಡಿರುತ್ತಾರೆ.