ಕೋಟ: ರೋಟರಿ ಕ್ಲಬ್ ಕೋಟ ಸಾಲಿಗ್ರಾಮದ ವತಿಯಿಂದ ವಲಯ ಮಟ್ಟದ ಸಾಂಸ್ಕೃತಿಕ ಮಿಲನ ಇಂಪನ ಕಾರ್ಯಕ್ರಮವನ್ನು ವಿವೇಕ ಜೂನಿಯರ್ ಕಾಲೇಜು ಕೋಟ ಇಲ್ಲಿ ಇತ್ತೀಚಿಗೆ ಜರಗಿತು. ಕಾರ್ಯಕ್ರಮವನ್ನು 2024 -25ರ ರೋಟರಿ ರಾಜ್ಯಪಾಲ ಪಿಹೆಚ್‍ಎಫ್ ದೇವಾನಂದ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೋಟ ಸಾಲಿಗ್ರಾಮ ರೋಟರಿ ಕ್ಲಬ್‍ನ ಅಧ್ಯಕ್ಷ ದೇವಪ್ಪ ಪಟಗಾರ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ವಿವೇಕ ಜೂನಿಯರ್ ಕಾಲೇಜಿನ ಪ್ರಾಂಶುಪಾಲ ಜಗದೀಶ್ ನಾವಡ ,ಅಸಿಸ್ಟೆಂಟ್ ಗವರ್ನರ್ ನರಸಿಂಹ ಪ್ರಭು, ವಲಯ ತರಬೇತುದಾರರಾದ ಗಜೇಂದ್ರ ಶೆಟ್ಟಿ, ಡಿಸ್ಟ್ರಿಕ್ಟ್ ಸ್ಪೋರ್ಟ್ಸ್ ಚರ್ಮನ್ ಗಣೇಶ್ ಶೆಟ್ಟಿ, ಮಂಜುನಾಥ್ ಕಾಂಚನ್ ,ಆನಂದ ಆಚಾರ್ ,ಮಮತಾ ಶೆಟ್ಟಿ ವಲಯದ ಕಲ್ಚರಲ್ ಚೇರ್ಮೆನ್ ಮಾಧವ ಪೂಜಾರಿ, ಹಾಗೂ ರೋಟರಿ ಕ್ಲಬ್ ಕೋಟ ಸಾಲಿಗ್ರಾಮ ಕಾರ್ಯದರ್ಶಿ ತಿಮ್ಮ ಪೂಜಾರಿ ಉಪಸ್ಥಿತರಿದ್ದರು.
ವಲಯದ ಆರು ಕ್ಲಬ್‍ಗಳು ಎಲ್ಲಾ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದು ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪಾರಿತೋಷಕವನ್ನು ನೀಡಲಾಯಿತು. ಅಂಪಾರು ರೋಟರಿ ಕ್ಲಬ್ ಸಮಗ್ರ ಚಾಂಪಿಯನ್ ಪಟ್ಟ ಅಲಂಕರಿಸಿತು. ಕೋಟ ಸಾಲಿಗ್ರಾಮ ರೋಟರಿ ಕ್ಲಬ್‍ಗೆ ನಾಲ್ಕು ಪ್ರಶಸ್ತಿಗಳು ತನ್ನದಾಗಿಸಿಕೊಂಡಿತು.ಇದೇ ವೇಳೆ ಮಾಧವ ಪೂಜಾರಿ ಮತ್ತು ಗಾಯಿತ್ರಿ ಅವರು ಜಿಲ್ಲಾ ಕಲ್ಚರಲ್ ಕಾರ್ಯಕ್ರಮಕ್ಕೆ ಸ್ಪರ್ಧಿಸುವ ಅರ್ಹತೆಯನ್ನು ಪಡೆದುಕೊಂಡರು.
ರೋಟರಿ ಕ್ಲಬ್ ಕೋಟ ಸಾಲಿಗ್ರಾಮದ ವತಿಯಿಂದ ವಲಯ ಮಟ್ಟದ ಸಾಂಸ್ಕೃತಿಕ ಮಿಲನ ಇಂಪನ ಕಾರ್ಯಕ್ರಮವನ್ನು ರೋಟರಿ ರಾಜ್ಯಪಾಲ ಪಿಹೆಚ್‍ಎಫ್ ದೇವಾನಂದ ಉದ್ಘಾಟಿಸಿದರು.