• Mon. Jul 15th, 2024

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ಕೋಟ- ರೋಟರಿ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ

ByKiran Poojary

Nov 2, 2023

ಕೋಟ: ಕೋಟ ಸಾಲಿಗ್ರಾಮ ರೋಟರಿ ಕ್ಲಬ್‍ಗೆ ರೋಟರಿ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ ಇತ್ತೀಚಿಗೆ ನೀಡಿದರು.
ಇತ್ತೀಚಿಗೆ ಕೋಟದ ಸಮುದ್ಯತಾ ಸಭಾಂಗಣಲ್ಲಿ ನಡೆದ ಸಭೆಯಲ್ಲಿ ಕ್ಲಬ್‍ನ ಕಾರ್ಯ ಚಟುವಟಿಕೆಗಳ, ದಾಖಲೆಗಳನ್ನು ಪರಿಶೀಲಿಸಿ ಕ್ಲಬ್‍ನ ಕಾರ್ಯ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸಭೆಯ ಅಧ್ಯಕ್ಷತೆಯನ್ನು ಕೋಟ ಸಾಲಿಗ್ರಾಮ ರೋಟರಿ ಕ್ಲಬ್‍ನ ಅಧ್ಯಕ್ಷ ದೇವಪ್ಪ ಪಟಗಾರ ವಹಿಸಿದ್ದರು.

ರೋಟರಿ ರಾಜ್ಯಪಾಲರಾದ ಗೀತಾ, ವಲಯ ಸೇನಾನಿ ಮಂಜುನಾಥ್ ಕಾಂಚನ್, ಕಾರ್ಯದರ್ಶಿ ತಿಮ್ಮ ಪೂಜಾರಿ ವೇದಿಕೆಯಲ್ಲಿದ್ದರು. ಇದೇ ವೇಳೆ ಸಮಾಜ ಸೇವೆಯಲ್ಲಿ ನಿರತರಾದ ಗೆಳೆಯರ ಬಳಗ ಕಾರ್ಕಡ ಅಧ್ಯಕ್ಷ ಕೆ.ತಾರಾನಾಥ್ ಹೊಳ್ಳ ಇವರನ್ನು ಸನ್ಮಾನಿಸಲಾಯಿತು.

ಅಲ್ಲದೆ ಅನಾರೋಗ್ಯದಿಂದ ಬಳಲುತ್ತಿರುವ ಪರಿಸರದ ಮೂವರಿಗೆ ಸಹಾಯಧನದ ಚೆಕ್ ಮತ್ತು ಮನೆ ನಿರ್ಮಾಣಕ್ಕಾಗಿ ಒರ್ವರಿಗೆ ಸಹಾಯಧನದ ಚೆಕ್ಕನ್ನು ಗೀತಾನಂದ ಫೌಂಡೇಶನ್ ಕೋಟ ಇವರ ಸಹಕಾರದೊಂದಿಗೆ ರಾಜ್ಯಪಾಲರ ಮೂಲಕ ಹಸ್ತಾಂತರಿಸಲಾಯಿತು.

ಐವರು ಹೊಸ ಸದಸ್ಯರಿಗೆ ಸದಸ್ಯತ್ವವನ್ನು ನೀಡಲಾಯಿತು. ಅಸಿಸ್ಟೆಂಟ್ ಗವರ್ನರ್ ರೊಟೇರಿಯನ್ ನರಸಿಂಹ ಪ್ರಭು ಅವರು ಮಾರ್ಗದರ್ಶಿಯನ್ನು ಬಿಡುಗಡೆಗೊಳಿಸಿದರು. ರೋಟರಿ ಫೌಂಡೇಶನ್‍ಗೆ ನೂರು ಶೇ.ದೇಣಿಗೆಯನ್ನು ರಾಜ್ಯಪಾಲರಿಗೆ ಹಸ್ತಾಂತರಿಸಲಾಯಿತು. ಕಾರ್ಯದರ್ಶಿ ತಿಮ್ಮ ಪೂಜಾರಿ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.

ಕೋಟ ಸಾಲಿಗ್ರಾಮ ರೋಟರಿ ಕ್ಲಬ್‍ಗೆ ರೋಟರಿ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ ಕಾರ್ಯಕ್ರಮದಲ್ಲಿ ಸಮಾಜ ಸೇವೆಯಲ್ಲಿ ನಿರತರಾದ ಗೆಳೆಯರ ಬಳಗ ಕಾರ್ಕಡ ಅಧ್ಯಕ್ಷ ಕೆ.ತಾರಾನಾಥ್ ಹೊಳ್ಳ ಇವರನ್ನು ಸನ್ಮಾನಿಸಲಾಯಿತು.

Leave a Reply

Your email address will not be published. Required fields are marked *