ಉಡುಪಿ : ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ನಾರಾಯಣ ಗೌಡರ ಬಣದ ಉಡುಪಿ ಜಿಲ್ಲಾ ಘಟಕದ ವತಿಯಿಂದ ಕರವೇ ಜಿಲ್ಲಾ ಕಛೇರಿಯ ಆವರಣದಲ್ಲಿ 68ನೇ ಕರ್ನಾಟಕ ರಾಜ್ಯೋತ್ಸವವನ್ನು ಗೌರವಾಧ್ಯಕ್ಷರಾದ ಸುಂದರ್ ಎ. ಬಂಗೇರ ರವರು ದೀಪ ಬೆಳಗಿಸಿ ಚಾಲನೆ ನೀಡಿ ಕನ್ನಡಕ್ಕಾಗಿ ಹೋರಾಡುವ ಕನ್ನಡ ಸೇನಾನಿಗಳನ್ನು ಸ್ಮರಿಸಿ ಶುಭ ಹಾರೈಸಿದರು.
ಜಿಲ್ಲಾಧ್ಯಕ್ಷರಾದ ಸುಜಯ್ ಪೂಜಾರಿಯವರು ದ್ವಜಾರೋಹಣ ಗೈದು ಶುಭ ಹಾರೈಸಿದರು. ಜಿಲ್ಲಾಧ್ಯಕ್ಷರು ಹಾಗೂ ಮಹಿಳಾ ಅಧ್ಯಕ್ಷರು ರಾಜ್ಯೋತ್ಸವವನ್ನು ಉದ್ದೇಶಿಸಿ ಮಾತನಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ರಾಘವೇಂದ್ರ ನಾಯಕ್ ರವರು ಸ್ವಾಗತಿಸಿ ನಿರೂಪಿಸಿ ಧನ್ಯವಾದ ಸಮರ್ಪಿಸಿದರು.
ಈ ಸಂಧರ್ಭದಲ್ಲಿ ಜಿಲ್ಲಾ ಮಹಿಳಾ ಅಧ್ಯಕ್ಷರಾದ ಗೀತಾ ಪಂಗಳ.ಜಿಲ್ಲಾ ಸಲಹೆಗಾರರಾದ ಜಯ ಸಾಲ್ಯಾನ್, ಜಿಲ್ಲಾ ಉಪಾಧ್ಯಕ್ಷರಾದ ಕುಶಲ್ ಅಮೀನ್ ಬೆಂಗ್ರೆ, ಜಿಲ್ಲಾ ಮಹಿಳಾ ಘಟಕದ ಉಪಾಧ್ಯಕ್ಷರಾದ ದೇವಕಿ ಬಾರ್ಕೂರ್, ಜಿಲ್ಲಾ ಕಾರ್ಮಿಕ ಘಟಕದ ಪ್ರಧಾನ ಕಾರ್ಯದರ್ಶಿ ಸಂತೋಷ ಕುಲಾಲ್, ಕಾರ್ಮಿಕ ಘಟಕದ ಉಪಾಧ್ಯಕ್ಷ ಸಿದ್ದಣ್ಣ ಎಸ್. ಪುಜಾರಿ, ಜಿಲ್ಲಾ ಮಹಿಳಾ ಕಾರ್ಯದರ್ಶಿ ಅನುಷಾ ಆಚಾರ್ಯ ಪಳ್ಳಿ ಮತ್ತು ಸರಿತಾ, ಜಿಲ್ಲಾ ಸಾಂಸ್ಕೃತಿಕ ಕಾರ್ಯದರ್ಶಿ ಕೃಷ್ಣ ಪಾಂಗಾಳ, ಜಿಲ್ಲಾ ಮಹಿಳಾ ಸಂಘಟನಾ ಕಾರ್ಯದರ್ಶಿ ಜ್ಯೋತಿ, ಜಿಲ್ಲಾ ಮಹಿಳಾ ಸಹ-ಸಂಘಟನಾ ಕಾರ್ಯದರ್ಶಿಯಾದ ವಿಶಾಲಾಕ್ಷಿ, ಜಿಲ್ಲಾ ಮಹಿಳಾ ಸಾಂಸ್ಕೃತಿಕ ಕಾರ್ಯದರ್ಶಿ ಸುಲತಾ ಆಚಾರ್ಯ, ಜಿಲ್ಲಾ ಸಹ ಸಾಂಸ್ಕೃತಿಕ ಕಾರ್ಯದರ್ಶಿ ಪ್ರಮೋದ್ ಕುಲಾಲ್, ಜಿಲ್ಲಾ ಮಹಿಳಾ ಸಹ ಸಾಂಸ್ಕೃತಿಕ ಕಾರ್ಯದರ್ಶಿ ಜ್ಯೋತಿ ಆರ್. ಉಡುಪಿ ತಾಲೂಕು ಅಧ್ಯಕ್ಷರಾದ ಪ್ರಭಾಕರ್ ಪೂಜಾರಿ. ಉಡುಪಿ ತಾಲೂಕು ಮಹಿಳಾ ಅಧ್ಯಕ್ಷರಾದ ಮಮತಾ, ಉಡುಪಿ ತಾಲೂಕು ಮಹಿಳಾ ಪ್ರಧಾನ ಕಾರ್ಯದರ್ಶಿ ಅಶ್ವಿನಿ, ಉಡುಪಿ ತಾಲೂಕು ಮಹಿಳಾ ಉಪಾಧ್ಯಕ್ಷೆ ಪವಿತ್ರ ಶೆಟ್ಟಿ, ಜಿಲ್ಲಾ ಸದಸ್ಯರಾದ ಕವಿತಾ ಉಡುಪಿ ತಾಲೂಕು ಸದಸ್ಯರಾದ ಪ್ರಮೀಳಾ, ಜ್ಯೋತಿ ಗಿರೀಶ್ ಪೂಜಾರಿ, ಮೀನಾಕ್ಷಿ ಮೊದಲಾದವರು ಉಪಸ್ಥಿತರಿದ್ದರು.