ಸಿದ್ದಾಪುರ : ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಸಿದ್ದಾಪುರ ಗ್ರಾಮದ ಹಿಂದಿನ ಗ್ರಾಮ ಲೆಕ್ಕಿಗ (V. A) ಸ್ಥಳೀಯ ಪ್ರಭಾವಿ ವ್ಯಕ್ತಿಗಳ ಅಕ್ರಮಗಳ ಜೊತೆ ಕೈಜೋಡಿಸಿದ್ದಾನೆ ಎಂದು ಸಾರ್ವಜನಿಕರಿಂದ ದಾಖಲೆಗಳು ದೊರೆತಿದೆ. ಈತ ಹಣ ನೀಡಿದ್ದಾರೆ ಸಾಕು ಯಾವುದು ಕೆಲಸವನ್ನು ಮಾಡಿ ಕೊಡುತ್ತಾನೆ. ಇತ್ತೀಚಿಗೆ ನಡೆದ ಸಿದ್ದಾಪುರ ಗ್ರಾಮ ಸಭೆಯಲ್ಲಿ ಈತನ ಹಲವು ಕರ್ಮ ಕಾಂಡ ಬಯಲಿಗೆ ಬಂದಿದ್ದು, ಅಲ್ಲಿಂದ ಎತ್ತಂಗಡಿ ಮಾಡಿದ್ದಾರೆ. ಈತ ಮೂಲತಃ ಚಾಮರಾಜನಗರ ಕೊಳ್ಳಲಗಾಲದ ವ್ಯಕ್ತಿ ಈತ ಮಾಡಿದ ಅಕ್ರಮ ಒಂದೇ ಎರಡೇ? ಪ್ರಭಾವಿ ವ್ಯಕ್ತಿಗಳ ಕೈ ಗೊಂಬೆಯಾಗಿ ಕಾನೂನು ಬಾಹಿರ ಕೆಲಸಕ್ಕೆ ಸಾಥ್ ನೀಡಿದವನೇ ಪ್ರಸ್ತುತ ಯಾಡಮೊಗೆ, ಹೊಸಂಗಡಿ, ಉಳ್ಳೂರು 74 ರಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮಲೆಕ್ಕಿಗ (V. A) ಚಂದ್ರಶೇಖರ್ ಮೂರ್ತಿ?
ಹೊಸಂಗಡಿ, ಸಿದ್ದಪುರ ಮುಖ್ಯ ರಸ್ತೆಯಲ್ಲಿ ವಾಸದ ಮನೆ ಕಟ್ಟಡ ರಚನೆಯಲ್ಲಿ ಮತ್ತು ವಾಣಿಜ್ಯ ಕಟ್ಟಡದ ರಚನೆಯ ವೇಳೆ ಭೂ ಪರಿವರ್ತನೆಗೆ ಸಹಾಯ ಮಾಡುವ ದುರುದ್ದೇಶಕ್ಕಾಗಿ ರಸ್ತೆ ಮಾರ್ಜಿನ ವಿಸ್ತೀರ್ಣದ ಜಾಗದ ದೂರವನ್ನು ಮೇಲಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿದ ಗ್ರಾಮದ ಆಡಳಿತಧಿಕಾರಿ ಚಂದ್ರಶೇಖರ್ ಮೂರ್ತಿ ಸಹಾಯ ಮಾಡಿರುತ್ತಾರೆ.
ಈತ ಗ್ರಾಮಲೆಕ್ಕಿಗನೋ? ಇಲ್ಲ ಪ್ರಭಾವಿ ವ್ಯಕ್ತಿಗಳ ಕೈಗೊಂಬೆಯೋ? 2023ರಲ್ಲಿ ಸರ್ಕಾರದ ಆಶ್ರಯ ನಿಯಮಾವಳಿ ಪ್ರಕಾರ ಗ್ರಾಮಸ್ಥರಿಗೆ ನಿರ್ಮಿಸಿರುವ ಮನೆಗಳಿಗೆ 94 ಸಿ ಅಡಿಯಲ್ಲಿ ಹಳೆ ಅರ್ಜಿಯಲ್ಲಿ 94 ಸಿ ಹಕ್ಕು ಪತ್ರ ನೀಡುವ ಬಗ್ಗೆ ವರದಿ ಮಾಡಿಕಳ್ಳಿಸಿದ ಕೆಲಸ ಗ್ರಾಮಲೆಕ್ಕಿಗ ಚಂದ್ರಶೇಖರ್ ಮೂರ್ತಿ ಮಾಡಿದ್ದಾರೆ.
ಗ್ರಾಮಲೆಕ್ಕಿಗ(V. A) ಚಂದ್ರಶೇಖರ್ ಮೂರ್ತಿಯವರು ಮೇಲೆ ತಿಳಿಸಿದ ಎಲ್ಲಾ ಗ್ರಾಮಗಳಲ್ಲಿ ಸರಿಸುಮಾರು 10-12 ವರುಷಗಳಿಂದ ಕಾರ್ಯ ನಿರ್ವಹಿಸಿದ್ದು ಇಂತಹ ಅನೇಕ ರೀತಿಯ ಕಾನೂನು ಬಾಹಿರ ಚಟುವಟಿಕೆಗೆ ಸಾಥ್ ನೀಡಿದ್ದಾರೆ ಎಂದು ಸಾರ್ವಜನಿಕ ಮೂಲದಿಂದ ತಿಳಿದು ಬಂದಿರುತ್ತದೆ. ಸಂಬಂಧ ಪಟ್ಟ ದಾಖಲೆಗಳು ನಮ್ಮ ಕೈ ಸೇರಿದೆ. ಈ ಕೂಡಲೇ ಈತನ ವಿರುದ್ಧ ಸಕ್ಷಮ ಪ್ರಾಧಿಕಾರದಲ್ಲಿ ದೂರು ದಾಖಲಿಸಿ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ಹಿರಿಯ ಅಧಿಕಾರಿಗಳಿಗೆ ಗ್ರಾಮದ ಜನರು ಮನವಿ ಮಾಡಿದ್ದಾರೆ.
ಮುಂದಿನ ಸಂಚಿಕೆಯಲ್ಲಿ ಇನ್ನಷ್ಟು ಸ್ಪೋಟಕ ಮಾಹಿತಿಯನ್ನು ನಿಮ್ಮ ಮುಂದೆ ಬಯಲು ಮಾಡಲಿದೆ ಹೊಸಕಿರಣ ನ್ಯೂಸ್, ಸ್ಪೋಟಕ ಸುದ್ದಿಗಾಗಿ ವೀಕ್ಷಿಸಿ ಹೊಸ ಕಿರಣ ನ್ಯೂಸ್
Notice: Undefined variable: post in /home/hosakira/public_html/wp-content/themes/newses/inc/ansar/hooks/hook-single-page.php on line 180