ಅವಿನಾಶ್ ಶೆಟ್ಟಿ ಹೊಸಂಗಡಿ ಗ್ರಾಮ ಪಂಚಾಯತ್ ಸದಸ್ಯರ ಕೂಟಕ್ಕೆ ಗ್ರಾಮ ಲೆಕ್ಕಿಗ ರೂವಾರಿ 94 ಸಿ ಅಡಿಯಲ್ಲಿ ಮನೆಯೆಂದು ಹೋಟೆಲ್ ಅನ್ನೇ ಮಂಜೂರಾತಿ ಮಾಡಿಕೊಟ್ಟ ಚಂದ್ರಶೇಖರ್ ಮೂರ್ತಿ.
ಅವಿನಾಶ ಶೆಟ್ಟಿ ಬಿನ್ ಭಾಸ್ಕರ ಶೆಟ್ಟಿ ಗೇರುಸಾಲು ಹೊಸಂಗಡಿ ಗ್ರಾಮ ಕುಂದಾಪುರ ತಾಲೂಕು ಇವರಿಗೆ 94ಸಿ ಯಡಿ ಮನೆ ನೀವೆಶನ ಖಾಯಂ ಮಾಡಿ ಆದೇಶ ಮಾಡಿದ್ದು, ಲೋಪ ದೋಷದಿಂದ ಕೂಡಿದೆ. ಆದೇಶ ನಂಬ್ರ ಹೆಚ್ ಎಸ್ ಟಿ/94ಸಿ/ಸಿ ಆರ್/228/17-18 ಮನೆ ನಿವೇಶನವು ಗ್ರಾಮ ಲೆಕ್ಕಿಗರ ವರದಿಯಲ್ಲಿ ಹೊಟೇಲು ಮತ್ತು ಮನೆ ಎಂದು ನಮೂದಿಸಿ ಭೂ ಮಂಜುರಾತಿ ಮಾಡಲಾಗಿದೆ. ವಾಸ್ತವ್ಯೆತರ ವಿಷಯಕ್ಕೆ ಭೂ ಮಂಜೂರಾತಿ 94ಸಿ ನಿಯಮದಡಿಯಲ್ಲಿ ಇಲ್ಲ. ಹೊಟೇಲು ಕಟ್ಟಡದ ಪಕ್ಕದಲ್ಲಿ ಒಂದು ಕೋಣೆ ತೋರಿಸಿ ವಾಸದ ಮನೆ ಎಂದು ಗ್ರಾಮ ಲೆಕ್ಕಿಗರು ತಪ್ಪು ಮಾಡಿ ನೀಡಿ ಭೂ ಮಂಜೂರಾತಿ ಮಾಡಿಸಿದ್ದಾರೆ.
ಸದ್ರಿ ಅವಿನಾಶ ಶೆಟ್ಟಿರವರಿಗೆ ಭೂ ಮಂಜೂರಾತಿ ಮಾಡಿದ ಮನೆ ನಿವೇಶನ ರಸ್ತೆ ಮಾರ್ಜಿನ್ ನಲ್ಲಿ ಬರುತ್ತದೆ. ಗ್ರಾಮ ಲೆಕ್ಕಿಗರು ಮತ್ತು ಕಂದಾಯ ನೀರಿಕ್ಷರು ವರದಿಯಲ್ಲಿ ರಸ್ತೆ ಮಾರ್ಜಿನ್ ಸ್ಥಳ ಅಲ್ಲ ಎಂದು ತಪ್ಪು ಮಾಹಿತಿ ದಾಖಲಿಸಿರುದ್ದಾರೆ. ಗ್ರಾಮ ಲೆಕ್ಕಿಗರು ವರದಿಯಲ್ಲಿ ವಾಸದ ಮನೆ ಆರ್ಧ ಎಂದು ತೋರಿಸಿ ತಪ್ಪು ದಾರಿಗೆಳೆಯುವ ಕೆಲಸ ಗ್ರಾಮ ಲೆಕ್ಕಿಗರು ಮಾಡಿದ್ದಾರೆ. 94ಸಿ ನಿಯಮದಂತೆ ವಾಸದ ಮನೆ ಹೊರತು ಬೇರೆ ಯಾವ ಉದ್ದೇಶಕ್ಕೆ ಬಳಸ ತಕ್ಕದ್ದಲ್ಲ ಎಂದು ನಿಯಮ ಇದ್ದರು ಹೋಟೆಲ್ ಕಟ್ಟಡಕ್ಕೆ ವಾಸದ ಮನೆ ಎಂದು ತೋರಿಸಿ ಗ್ರಾಮ ಲೆಕ್ಕಿಗರು ಅವಿನಾಶ ಶೆಟ್ಟಿಯವರಿಗೆ ಅನುಕೂಲ ಮಾಡಿಕೊಡುವ ಕೆಲಸ ಮಾಡಿದ್ದಾರೆ.
ಹೊಸಂಗಡಿ ಗ್ರಾಮ ಪಂಚಾಯಿತಿಯ ಟ್ಯಾಕ್ಸ್ ರಿಸಿಟ್ ನಲ್ಲಿ ಅವಿನಾಶ್ ಶೆಟ್ಟಿ ಕೆರೆಕಟ್ಟೆ ಎಂದು ಟ್ಯಾಕ್ಸ್ ರಿಸಿಟ್ ನಮೂದಾದರೂ ಹೊಸಂಗಡಿಯಲ್ಲಿ ಹೋಟೆಲ್ ಅನ್ನೇ ಮಂಜೂರಾತಿ ಮಾಡಿಕೊಟ್ಟ ಈ ಗ್ರಾಮ ಲಕ್ಕಿಗನಿಗೆ ಏನು ಹೇಳಬೇಕು ನೀವೇ ಹೇಳಿ?? ಹಣಕ್ಕಾಗಿ ಏನು ಮಾಡಲು ಸೈ ಎನ್ನುವ ಈ ಆಸಾಮಿ.
ಚಂದ್ರಶೇಖರ್ ಮೂರ್ತಿಯವರು ಸಾಕಷ್ಟು ಕಾನೂನೂ ಬಾಹಿರ ಚಟುವಟಿಕೆಯನ್ನು ಮಾಡಿದ್ದು ಅಕ್ರಮ ಸಕ್ರಮ ಮತ್ತು 94ಸಿಯಲ್ಲಿ ಅಕ್ರಮ ಮಂಜೂರಾತಿ ಮಾಡಿರುವ ಕುರಿತು ಹಲವು ದೂರು ನಮಗೆ ಬಂದಿರುತ್ತದೆ. ಈ ಕೂಡಲೇ ಕಂದಾಯ ಸಚಿವರು ಇವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾಗಿ ಸಾರ್ವಜನಿಕರು ಅಗ್ರಹಿಸಿದ್ದಾರೆ.
ಮುಂದಿನ ಸಂಚಿಕೆಯಲ್ಲಿ ಇನ್ನಷ್ಟು ಸ್ಪೋಟಕ ಮಾಹಿತಿಯನ್ನು ನಿಮ್ಮ ಮುಂದೆ ಬಯಲು ಮಾಡಲಿದೆ ಹೊಸಕಿರಣ ನ್ಯೂಸ್, ಸ್ಪೋಟಕ ಸುದ್ದಿಗಾಗಿ ವೀಕ್ಷಿಸಿ ಹೊಸ ಕಿರಣ ನ್ಯೂಸ್
Notice: Undefined variable: post in /home/hosakira/public_html/wp-content/themes/newses/inc/ansar/hooks/hook-single-page.php on line 180