ಕೋಟ: ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ ಇದರ ಆಶ್ರಯದಲ್ಲಿ ಹಿರಿಯಡೆಗೆ ಸಾಹಿತ್ಯ ನಡಿಗೆ ಎಂಬ ಶಿರ್ಷಿಕೆಯಡಿ ಕಾರ್ಯಕ್ರಮ ಕೋಡಿ ಹೊಸಬೇಂಗ್ರೆಯ ಹಿರಿಯ ಮುತ್ಸದ್ಧಿ ಲಕ್ಷ್ಮಣ್ ಸುವರ್ಣ ಇವರನ್ನು ಸ್ವಗೃಹಕ್ಕೆ ತೆರಳಿ ಗೌರವಿಸಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ಬ್ರಹ್ಮಾವರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರಾಮಚಂದ್ರ ಐತಾಳ್, ಕೋಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗೀತಾ ಖಾರ್ವಿ, ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರದ ಕಾರ್ಯದರ್ಶಿ ರಾಜಶೇಖರ್ ಹೆಬ್ಬಾರ್, ಕೋಟ ಮೂರ್ತೆದಾರರ ಸಂಘದ ಅಧ್ಯಕ್ಷ ಕೊರಗ ಪೂಜಾರಿ, ಪಂಚಶಕ್ತಿ ಸಂಘದ ಅಧ್ಯಕ್ಷ ಸಂದೇಶ ಖಾರ್ವಿ ಮತ್ತು ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಬ್ರಹ್ಮಾವರ ತಾಲೂಕು ಕಸಾಪದ ಕಾರ್ಯದರ್ಶಿ ಶಿಕ್ಷಕಿ ಜ್ಯೋತಿ ಸ್ವಾಗತಿಸಿ,ವಂದಿಸಿದರು. ಬ್ರಹ್ಮಾವರ ವಲಯದ ಕಸಾಪದ ಕೋಶಾಧ್ಯಕ್ಷ ಮಡಿ ವಿಶ್ವನಾಥ ಖಾರ್ವಿ ಕಾರ್ಯಕ್ರಮವನ್ನು ನಿರೂಪಿಸಿದರು.
ಜಿಲ್ಲಾ ಕ.ಸಾ.ಪದಿಂದ ಹಿರಿಯಡೆಗೆ ಸಾಹಿತ್ಯ ನಡಿಗೆ ಕಾರ್ಯಕ್ರಮದಲ್ಲಿ ಕೋಡಿ ಹೊಸಬೇಂಗ್ರೆಯ ಲಕ್ಷ್ಮಣ್ ಸುವರ್ಣರಿ ಇವರನ್ನು ಗೌರವಿಸಲಾಯಿತು. ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ಬ್ರಹ್ಮಾವರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರಾಮಚಂದ್ರ ಐತಾಳ್ ಮತ್ತಿತರರು ಇದ್ದರು.