ಕೋಟ: ಕಾರ್ಕಡ ಪರಿಸರ ಸಮಾಜಮುಖಿ ,ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಇತ್ತೀಚಿಗೆ ನಿಧನರಾದ ಲೀಲಾವತಿ ಎನ್ ಕಾಮತ್ ಇವರ ಶ್ರದ್ಧಾಂಜಲಿ ಸಭೆ ಕಾರ್ಕಡ ಶಾಲೆಯಲ್ಲಿ ನಡೆಯಿತು. ಶ್ರದ್ಧಾಂಜಲಿ ಸಭೆಯಲ್ಲಿ ಕಾರ್ಕಡ ಗೆಳೆಯರ ಬಳಗದ ಅಧ್ಯಕ್ಷ ಕೆ. ತಾರಾನಾಥ ಹೊಳ್ಳ ಲೀಲಾವತಿ ಶಾಲಾ ಅಭಿವೃದ್ಧಿ ಬಗ್ಗೆ ಸದಾ ಚಿಂತನಾಶೀಲರು. ಸರಳ ಸಜ್ಜನಿಕೆಯ ಸ್ವಭಾವದವರಾಗಿದ್ದು , ಎಲ್ಲರ ಮಾರ್ಗದರ್ಶನ ಪಡೆದು ಶಾಲೆಯ ಸರ್ವತೋಮುಃಖ ಅಭಿವೃದ್ಧಿಗೆ ಕಾರಣೀಭೂತರಾಗಿದ್ದಾರೆ ಇವರ ನಿಧನ ಊರಿಗೆ ಸಾಕಷ್ಟು ನೋವು ತಂದಿದೆ ಇವರ ಆತ್ಮಕ್ಕೆ ಚಿರಶಾಂತಿ ಕೋರಿದರು.
ಸಭೆಯಲ್ಲಿ ಕಾರ್ಕಡ ಶಾಲಾ ಅಧ್ಯಾಪಕ ನಾರಾಯಣ ಆಚಾರ್ಯ ಹಾಗೂ ಸತ್ಯನಾರಾಯಣ, ಸಾಲಿಗ್ರಾಮ ಪ.ಪಂ ಸಂಜೀವ ದೇವಾಡಿಗ, ಸ್ಥಳೀಯರಾದ ಕೆ.ವಿಶ್ವನಾಥ ಹೊಳ್ಳ, ಕೆ. ಚಂದ್ರಶೇಖರ ಸೋಮಯಾಜಿ, ಕಾರ್ಕಡ ಹೊಸ ಹಿರಿಯ ಪ್ರಾಥಮಿಕ ಶಾಲೆ ಕಾರ್ಕಡ,ಶಾಲಾಭಿವೃದ್ಧಿ ಸಮತಿ ಹಾಗೂ ಮೇಲುಸ್ತುವಾರಿ ಸಮಿತಿ,ವಿದ್ಯಾರಥ ಸಮಿತಿ, ಶಿಶುಕಲ್ಯಾಣ ಸಮಿತಿಯ ಸದಸ್ಯರು,
ಅಧ್ಯಾಪಕ ವೃಂದಹಾಗೂ ಗೆಳೆಯರ ಬಳಗದ ಸದಸ್ಯರು ಶ್ರದ್ಧಾಂಜಲಿ ಸಭೆಯಲ್ಲಿ ಉಪಸ್ಥಿತರಿದ್ದರು.
ಲೀಲಾವತಿ ಎನ್ ಕಾಮತ್ ಸಾರ್ವಜನಿಕ ಶ್ರದ್ಧಾಂಜಲಿ ಸಭೆ ಕಾರ್ಕಡ ಶಾಲೆಯ ಸಭಾಂಗಣದಲ್ಲಿ ನಡೆಯಿತು. ಕಾರ್ಕಡ ಗೆಳೆಯರ ಬಳಗದ ಅಧ್ಯಕ್ಷ ಕೆ. ತಾರಾನಾಥ ಹೊಳ್ಳ, ಕಾರ್ಕಡ ಶಾಲಾ ಅಧ್ಯಾಪಕ ನಾರಾಯಣ ಆಚಾರ್ಯ ಹಾಗೂ ಸತ್ಯನಾರಾಯಣ, ಸಾಲಿಗ್ರಾಮ ಪ.ಪಂ ಸಂಜೀವ ದೇವಾಡಿಗ ಮತ್ತಿತರರು ಇದ್ದರು.