• Mon. Jul 15th, 2024

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ಕೋಟತಟ್ಟು ಗ್ರಾಮ ಪಂಚಾಯತ್‍ಗೆ ದ್ವಿತೀಯ ಸ್ಥಾನ

ByKiran Poojary

Nov 6, 2023

ಕೋಟ: ಬ್ರಹ್ಮಾವರ ತಾಲೂಕಿನಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಅಕ್ಟೋಬರ್ ತಿಂಗಳಲ್ಲಿ 960 ಮಾನವ ದಿನಗಳನ್ನು ಸೃಜಿಸಿ ತಾಲೂಕಿನ 27 ಗ್ರಾಮ ಪಂಚಾಯತ್‍ನಲ್ಲಿ ದ್ವಿತೀಯ ಸ್ಥಾನವನ್ನು ತನ್ನದಾಗಿಸಿಕೊಂಡಿದೆ.

993 ಮಾನವ ದಿನ ಸೃಜನೆಯೊಂದಿಗೆ ವಡ್ದರ್ಸೆ ಪ್ರಥಮ ಸ್ಥಾನದಲ್ಲಿದ್ದರೆ, 688 ಮಾನವ ದಿನಗಳ ಸೃಜನೆಯೊಂದಿಗೆ ಬಿಲ್ಲಾಡಿ ತೃತೀಯ ಸ್ಥಾನದಲ್ಲಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ, ಗ್ರಾಮಸ್ಥರಿಗೆ ವೈಯಕ್ತಿಕ ಅನುದಾನ ಒದಗಿಸುವಲ್ಲಿ ಅತ್ಯುತ್ತಮ ಯೋಜನೆಯಾಗಿದ್ದು ಕೃಷಿಭಾವಿ ದನದ ಹಟ್ಟಿ, ಕೋಳಿಗೂಡು, ಗೊಬ್ಬರದ ಗುಂಡಿ, ಎರೆಹುಳು ತೊಟ್ಟಿ, ಬಚ್ಚಲು ಗುಂಡಿ, ಪೌಷ್ಟಿಕ ತೋಟ ಇತ್ಯಾದಿಗಳ ರಚನೆಗೆ ಅವಕಾಶವಿದ್ದು ಗ್ರಾಮಸ್ಥರು 2024-25 ಸಾಲಿನ ಕ್ರಿಯಾ ಯೋಜನೆಗೆ ಅರ್ಜಿ ಸಲ್ಲಿಸುವುದರ ಮೂಲಕ ಈ ಯೋಜನೆ ಲಾಭ ಪಡೆಯಲು ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಕೆ ಸತೀಶ್ ಕುಂದರ್ ರವರು ಪ್ರಕಟಣೆಯಲ್ಲಿ ತಿಳಿಸಿದರು.

Leave a Reply

Your email address will not be published. Required fields are marked *