• Mon. Jul 15th, 2024

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ಪೆರ್ಡೂರು : 14 ನೇ ಶತಮಾನದ ಶಾಸನ ಅಧ್ಯಯನ

ByKiran Poojary

Nov 6, 2023

ಉಡುಪಿ ತಾಲೂಕಿನ ಪೆರ್ಡೂರು ಗ್ರಾಮದ ಗೊರೆಲ್ – ನೆಲ್ಯಾರುಬೆಟ್ಟು ಇಲ್ಲಿನ ಗುಲಾಬಿ ಮರಕಾಲ್ತಿ ಇವರ ಗದ್ದೆಯಲ್ಲಿ ಇರುವ ಶಾಸನವನ್ನು ಪ್ರಾಚ್ಯಸಂಚಯ ಸಂಶೋಧನಾ ಕೇಂದ್ರ – ಉಡುಪಿ ಇದರ ಅಧ್ಯಯನ ನಿರ್ದೇಶಕ ಪ್ರೊ ಎಸ್.ಎ. ಕೃಷ್ಣಯ್ಯ, ಯು. ಕಮಲಾಬಾಯಿ ಪ್ರೌಢ ಶಾಲೆಯ ನಿವೃತ್ತ ಅಧ್ಯಾಪಕ ಕೆ. ಶ್ರೀಧರ್ ಭಟ್ ಹಾಗೂ ಇತಿಹಾಸ ಮತ್ತು ಪುರಾತತ್ವ ಸಂಶೋಧನಾರ್ಥಿ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಇವರ ಮಾರ್ಗದರ್ಶನದಲ್ಲಿ ಶಿರ್ವ ಎಂ.ಎಸ್.ಆರ್.ಎಸ್ ಕಾಲೇಜಿನ ತೃತೀಯ ಬಿ.ಎ ವಿದ್ಯಾರ್ಥಿಗಳಾದ ವಿಶಾಲ್ ರೈ ಕೆ ಮತ್ತು ದಿಶಾಂತ್ ದೇವಾಡಿಗ ಅಧ್ಯಯನಕ್ಕೆ ಒಳಪಡಿಸಿದ್ದಾರೆ.

ಈ ಶಾಸನವು 3 ಅಡಿ ಎತ್ತರ ಹಾಗೂ 2 ಅಡಿ ಅಗಲವನ್ನು ಹೊಂದಿದ್ದು, ಮೇಲ್ಭಾಗದಲ್ಲಿ ಸೂರ್ಯ – ಚಂದ್ರ, ಶಿವಲಿಂಗ ಮತ್ತು ಇದರ ಇಕ್ಕೆಲಗಳಲ್ಲಿ ರಾಜಕತ್ತಿ, ನಂದಿ, ದೀಪಸ್ತಂಭದ ಕೆತ್ತನೆ ಇದೆ. ಕನ್ನಡ ಲಿಪಿ ಮತ್ತು ಭಾಷೆಯನ್ನು ಒಳಗೊಂಡಿರುವ ಈ ಶಾಸನದ ಹೆಚ್ಚಿನ ಸಾಲುಗಳು ತೃಟಿತಗೊಂಡಿದ್ದು, ಶಾಸನವು ಶ್ರೀ ಗಣಾಧಿಪತಿಂ ನಮಃ ಎಂಬ ಶುಭ ಸೂಚಕದಿಂದ ಪ್ರಾರಂಭವಾಗಿದೆ. ಗೋಚರಿಸುವ ಸಾಲುಗಳಲ್ಲಿ ದಿಕ್ಕುಗಳ ಉಲ್ಲೇಖ ಇರುವುದರಿಂದ ಇದೊಂದು ದಾನ ಶಾಸನವಾಗಿರಬಹುದೆಂದು ಹಾಗೂ ಲಿಪಿಯ ಆಧಾರದ ಮೇಲೆ ಈ ಶಾಸನವು 14 ನೇ ಶತಮಾನಕ್ಕೆ ಸೇರಿದೆ ಎಂದು ಸಂಶೋಧನಾರ್ಥಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಕ್ಷೇತ್ರಕಾರ್ಯ ಶೋಧನೆಯಲ್ಲಿ ಸ್ಥಳೀಯರಾದ ದಿನೇಶ್ ಕುಂದರ್, ಸುಂದರ ಮತ್ತು ನಿತ್ಯಾನಂದ ಅವರು ಸಹಕರಿಸಿದ್ದಾರೆ.

Leave a Reply

Your email address will not be published. Required fields are marked *