ಕೋಟ: ವಡ್ಡರ್ಸೆ ಗ್ರಾಮಪಂಚಾಯತ್‌ನ ವಿಸ್ಮಯ ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳ ಬದಲಾವಣೆಯು ವಡ್ಡರ್ಸೆ ಶ್ರೀ ಮಹಾಲಿಂಗೇಶ್ವರ ಸಭಾಭವನದಲ್ಲಿ ಇತ್ತೀಚಿಗೆ ನಡೆಯಿತು.
ಈ ಸಂದರ್ಭದಲ್ಲಿ ಒಕ್ಕೂಟ ಮಾಜಿ ಅಧ್ಯಕ್ಷೆ ರೇಖಾ ಶರತ್ ಶೆಟ್ಟಿ ಇವರು, ತಮ್ಮ ಅಧಿಕಾರವಧಿಯಲ್ಲಿ, ತಮ್ಮ ಶ್ರದ್ಧೆ ,ತಾಳ್ಮೆ, ಪರಿಶ್ರಮದಿಂದ ಒಕ್ಕೂಟವನ್ನು ಜಿಲ್ಲಾ ಮಟ್ಟದಲ್ಲಿ ಗುರುತಿಸುವಲ್ಲಿ ಶ್ರಮಿಸಿದ ಹಿನ್ನಲ್ಲೆಯಲ್ಲಿ ಒಕ್ಕೂಟದ ವತಿಯಿಂದ ಸನ್ಮಾನಿಸಲಾಯಿತು.
ಹಾಗೂ ಇತರೆ ಮಾಜಿ ಪದಾಧಿಕರಿಗಳಿಗೂ ಕಿರು ಕಾಣಿಕೆ ನೀಡಿ ಗೌರವಿಸಲಾಯಿತು.
ಇದೇ ವೇಳೆ ನೂತನ ಅಧ್ಯಕ್ಷರಾಗಿ ಸವಿತಾ, ಉಪಾಧ್ಯಕ್ಷರಾಗಿ ಲಕ್ಷ್ಮಿ .ಕೆ.,ಕಾರ್ಯದರ್ಶಿಯಾಗಿ ಮಮತಾ, ಸಹ ಕಾರ್ಯದರ್ಶಿಯಾಗಿ ಸ್ವಾತಿ, ಕೋಶಾಧಿಕಾರಿಯಾಗಿ ಸಂಧ್ಯಾ ಇವರನ್ನು ಆಯ್ಕೆಗೊಳಿಸಲಾಯಿತು. ವಲಯ ಮೇಲ್ವಿಚಾರಕರಾದ ಸ್ವಾತಿ, ಬಿಆರ್‌ಪಿ ಅನಿತಾ, ವಡ್ಡರ್ಸೆ ಗ್ರಾಮ ಪಂಚಾಯತ್‌ನ ದ್ವಿತೀಯ ದರ್ಜೆ ಲೆಕ್ಕ ಸಹಾಯಕರಾದ ಗಿರಿಜಾ.ಪಿ. , ಸಂಜೀವಿನಿ ಸದಸ್ಯರು ಉಪಸ್ಥಿತರಿದ್ದರು.
ವಡ್ಡರ್ಸೆ ಗ್ರಾಮಪಂಚಾಯತ್‌ನ ವಿಸ್ಮಯ ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳ ಕಾರ್ಯಕ್ರಮದಲ್ಲಿ ಒಕ್ಕೂಟ ಮಾಜಿ ಅಧ್ಯಕ್ಷೆ ರೇಖಾ ಶರತ್ ಶೆಟ್ಟಿ ಸನ್ಮಾನಿಸಲಾಯಿತು. ವಲಯ ಮೇಲ್ವಿಚಾರಕರಾದ ಸ್ವಾತಿ, ಬಿಆರ್‌ಪಿ ಅನಿತಾ, ವಡ್ಡರ್ಸೆ ಗ್ರಾಮ ಪಂಚಾಯತ್‌ನ ದ್ವಿತೀಯ ದರ್ಜೆ ಲೆಕ್ಕ ಸಹಾಯಕರಾದ ಗಿರಿಜಾ.ಪಿ. , ಸಂಜೀವಿನಿ ಸದಸ್ಯರು ಉಪಸ್ಥಿತರಿದ್ದರು.