• Sun. Apr 20th, 2025

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ಕೋಟ ಪಂಚವರ್ಣದ ಆಶ್ರಯದಲ್ಲಿ ಸಾಮೂಹಿಕ ಗೋ ಪೂಜೆ
ಗೋವುಗಳಿಗೆ ಧಾರ್ಮಿಕವಾಗಿ ಮಹತ್ವದ ಸ್ಥಾನ -ಪೂಜಾ ಪ್ರಸಾದ್

ByKiran Poojary

Nov 13, 2023

ಕೋಟ: ಗೋವುಗಳ ಮಹತ್ವ ಪ್ರತಿಯೊಬ್ಬರು ಅರಿತು ಅದಕ್ಕೆ ವಿಶೇಷ ಸ್ಥಾನ ನೀಡಬೇಕು ಎಂದು ಕೋಟತಟ್ಟು ಗ್ರಾಮಪಂಚಾಯತ್ ಸದಸ್ಯೆ ಪೂಜಾ ಪ್ರಸಾದ್ ಹೇಳಿದರು.
ಸೋಮವಾರ  ಹಂದಟ್ಟು ಹಾಲು ಡೈರಿಯಲ್ಲಿ ಪಂಚವರ್ಣ ಯುವಕ ಮಂಡಲ  ಕೋಟ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ಕೋಟ ಇದರ ನೇತೃತ್ವದಲ್ಲಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ಹಂದಟ್ಟು, ಮಹಿಳಾ ಬಳಗ ಹಂದಟ್ಟು ಇವರ ಸಹಯೋಗದೊಂದಿಗೆ ಸಾಮೂಹಿಕ ಗೋ ಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿ ಧಾರ್ಮಿಕವಾಗಿ ಗೋವುಗಳಿಗೆ ವಿಶೇಷ ಸ್ಥಾನ ನೀಡಲಾಗಿದೆ, ಅಂತಹ ಗೋವುಗಳ ಹತ್ಯೆಯನ್ನು ನಿರ್ದಾಕ್ಷಿಣ್ಯವಾಗಿ ನಿಲ್ಲಿಸಬೇಕಾಗಿದೆ.ಈ ಭರತಖಂಡದಲ್ಲಿ ಮುಕ್ಕೋಟಿ ದೇವತೆಗಳು ಗೋವುಗಳಲ್ಲಿ ಲೀನವಾಗಿದೆ ಆದ್ದರಿಂದ ಪ್ರತಿಯೊಬ್ಬರು ಅದರ ಆರಾಧರಕಾಗಿ ಪೂಜ್ಯನೀಯ ಕಾರ್ಯದಲ್ಲಿ ತೊಡಗಿ ಕೊಳ್ಳುವಂತರಾಗಬೇಕು ಎಂದು ಕರೆಇತ್ತರಲ್ಲದೆ ಪಂಚವರ್ಣ ಸಂಸ್ಥೆಯ ಸಾಮೂಹಿಕ ಗೋ ಪೂಜಾ ಕಾರ್ಯವನ್ನು ಪ್ರಶಂಸಿಸಿದರು.ಇದೇ ವೇಳೆ ಧಾರ್ಮಿಕ ವಿಧಿವಿಧಾನಗಳನ್ನು ಪುರೋಹಿತರಾದ ಮನೋಜ್ ಕುಮಾರ್ ನೆರವೆರಿಸಿದರು. ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಹಂದಟ್ಟು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಜಾನಕಿ ಹಂದೆ ,ಹಂದಟ್ಟು ಮಹಿಳಾ ಬಳಗದ ಅಧ್ಯಕ್ಷ ರತ್ನ ಕೃಷ್ಣ ಪೂಜಾರಿ, ,ಸ್ಥಾಪಾಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ,ಮಹಿಳಾ ಮಂಡಲದ ಕಾರ್ಯದರ್ಶಿ ಲಲಿತಾ ಪೂಜಾರಿ,ಗೋವಿಗಾಗಿ ಮೇವು ಕೋಟ ಸಾಲಿಗ್ರಾಮ ವಲಯದ ಅಧ್ಯಕ್ಷ ಕೃಷ್ಣಮೂರ್ತಿ ಮರಕಾಲ ಉಪಸ್ಥಿತರಿದ್ದರು.

ಹಂದಟ್ಟು ಮಹಿಳಾ ಬಳಗದ ಸ್ಥಾಪಾಕಾಧ್ಯಕ್ಷೆ ಪುಷ್ಭಾ ಕೆ ಹಂದಟ್ಟು ವಂದಿಸಿದರು. ಕಾರ್ಯಕ್ರಮವನ್ನು ಹಂದಟ್ಟು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಸುಜಾತ ಬಾಯರಿ ನಿರೂಪಿಸಿದರು.ಪಂಚವರ್ಣದ ಕಾರ್ಯಾಧ್ಯಕ್ಷ ರವೀಂದ್ರ ಕೋಟ ಸಂಯೋಜಿಸಿದರು.

ಹAದಟ್ಟು ಹಾಲು ಡೈರಿಯಲ್ಲಿ ಪಂಚವರ್ಣ ಯುವಕ ಮಂಡಲ  ಕೋಟ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ಕೋಟ ಇದರ ನೇತೃತ್ವದಲ್ಲಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ಹಂದಟ್ಟು, ಮಹಿಳಾ ಬಳಗ ಹಂದಟ್ಟು ಇವರ ಸಹಯೋಗದೊಂದಿಗೆ ಸಾಮೂಹಿಕ ಗೋ ಪೂಜೆ ಕಾರ್ಯಕ್ರಮ ನಡೆಯಿತು. ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್ಯ, ಹಂದಟ್ಟು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಜಾನಕಿ ಹಂದೆ ,ಹಂದಟ್ಟು ಮಹಿಳಾ ಬಳಗದ ಅಧ್ಯಕ್ಷ ರತ್ನ ಕೃಷ್ಣ ಪೂಜಾರಿ, ಕೋಟತಟ್ಟು ಗ್ರಾಮಪಂಚಾಯತ್ ಸದಸ್ಯೆ ಪೂಜಾ ಪ್ರಸಾದ್ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *