ಜಗನ್ನಾಥ ಪೂಜಾರಿ ಅಂಬಲಪಾಡಿ ನಿಧನ
ಅಂಬಲಪಾಡಿ ಮಹಾಕಾಳಿ ಮಾರ್ಗ, ಶ್ರೀ ವಿಠೋಬ ಭಜನಾ ಮಂದಿರ ಪರಿಸರದ ನಿವಾಸಿ, ಅಂಬಲಪಾಡಿ ಶ್ರೀ ಮಹಾಕಾಳಿ ಜನರಲ್ ಸ್ಟೋರ್ ನ ಸಂಸ್ಥಾಪಕ ಜಗನ್ನಾಥ ಪೂಜಾರಿ (78 ವರ್ಷ) ಇವರು ಅಲ್ಪ ಕಾಲದ ಅಸೌಖ್ಯದಿಂದ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಇಂದು (ನ.15) ನಿಧನ ಹೊಂದಿದರು.
ಇವರು ಅಂಬಲಪಾಡಿ ಬಿಲ್ಲವ ಸೇವಾ ಸಂಘದ ಹಿರಿಯ ಸದಸ್ಯರಾಗಿದ್ದು ಪತ್ನಿ, ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.