
ಕೋಟ: ಕಿನಾರ ಮೀನುಗಾರರ ಉತ್ಪಾದಕ ಕಂಪನಿ ನಿಯಮಿತ ಉಡುಪಿ , ಮಹಿಳಾ ಮೀನುಗಾರ ಷೇರುದಾರರಿಗೆ ಪಚ್ಚಿಲೇ ಕೃಷಿ ಬಗ್ಗೆ ಮಾಹಿತಿ ನೀಡಿ ಮಹಿಳೆಯರಲ್ಲಿ ಸ್ವಉದ್ಯಮದ ಬಗ್ಗೆ ಇನ್ನು ಹೆಚ್ಚಿನ ಒಲವು ಮೂಡಿಸಲು ಗ್ರಾಮ ಭೇಟಿ ಕಾರ್ಯಕ್ರಮ ಇತ್ತೀಚಿಗೆ ಕೋಡಿ ಪರಿಸರದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಮಾಹಿತಿ ನೀಡಿದ ಉಡುಪಿಕಿನಾರ ಮೀನುಗಾರರ ಉತ್ಪಾದಕ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಾಯತ್ರಿ ವಿಜಯ್ ವರ್ಷದ ಗುರಿ ಕರಾವಳಿಯ ಪ್ರತಿಯೊಂದು ಮನೆಯಲ್ಲಿ ಪಚ್ಚಿಲೇ ಕೃಷಿಯನ್ನು ಸ್ವಉದ್ಯಮ ಮಾಡುವ ಸಲುವಾಗಿ ಕರಾವಳಿಯ ಪ್ರತಿಯೊಂದು ಮನೆಗೆ ಭೇಟಿ ನೀಡಿ ಸ್ವಉದ್ಯಮಕ್ಕೆ ಪ್ರೇರಣೆ ನೀಡಿತ್ತಿದ್ದೇವೆ. ಹಾಗೆಯೇ ಪ್ರಧಾನ ಮಂತ್ರಿ ಮತ್ಸ÷್ಯ ಸಂಪದ ಯೋಜನೆಯಡಿಯಲ್ಲಿ ಪಚ್ಚಿಲೇ ಕೃಷಿಗೆ ದೊರಕುವ ಸೌಲಭ್ಯ ಬಗ್ಗೆ ಮಾಹಿತಿ ನೀಡಿ ಮಹಿಳೆಯರಿಗೆ ಕೃಷಿ ಬಗ್ಗೆ ಆಸಕ್ತಿ ಹೊಂದಲು ಉತ್ತೇಜನ ನೀಡಲು ಕಂಪನಿ ಬದ್ಧವಾಗಿದೆ ಎಂದು ತಿಳಿಸಿದರು.
ಈ ವೇಳೆ ಡಾಟಾ ಎಂಟ್ರಿ ಆಪರೇಟರ್ ವಿದೀಕ್ಷಾ ಪೂಜಾರಿ, ಸ್ಥಳೀಯ ಸಂಪನ್ಮೂಲ ವ್ಯಕ್ತಿ ಭೂಮಿಕಾ ಶೆಟ್ಟಿ ಮತ್ತು ಮಹಿಳಾ ಮೀನುಗಾರರು ಉಪಸ್ಥಿತರಿದ್ದರು.
ಕಿನಾರ ಮೀನುಗಾರರ ಉತ್ಪಾದಕ ಕಂಪನಿ ನಿಯಮಿತ ಉಡುಪಿ , ಮಹಿಳಾ ಮೀನುಗಾರ ಷೇರುದಾರರಿಗೆ ಪಚ್ಚಿಲೇ ಕೃಷಿ ಬಗ್ಗೆ ಮಾಹಿತಿ ನೀಡಿ ಮಹಿಳೆಯರಲ್ಲಿ ಸ್ವಉದ್ಯಮದ ಬಗ್ಗೆ ಇನ್ನು ಹೆಚ್ಚಿನ ಒಲವು ಮೂಡಿಸಲು ಗ್ರಾಮ ಭೇಟಿ ಕಾರ್ಯಕ್ರಮ ಇತ್ತೀಚಿಗೆ ಕೋಡಿ ಪರಿಸರದಲ್ಲಿ ನಡೆಯಿತು.
Leave a Reply