ಕೋಟ: ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಹಿರಿಯ ಹವ್ಯಾಸಿ ಕಲಾವಿದ ಚಿತ್ರಪಾಡಿ ಕೃಷ್ಣಮೂರ್ತಿ ಉರಾಳರನ್ನು ಯಶಸ್ವೀ ಕಲಾವೃಂದ ಕೊಮೆ, ತೆಕ್ಕಟ್ಟೆ ಆಯೋಜಿಸುವ ಅರ್ಥಾಂಕುರ 5ನೇ ಅಧ್ಯಾಯ ಕಾರ್ಯಕ್ರಮದಲ್ಲಿ ನ.19, ಭಾನುವಾರ ಅಭಿನಂದಿಸಲಾಗುವುದು. ಮುಖ್ಯ ಅತಿಥಿಗಳಾಗಿ ತಾಳಮದ್ದಳೆಯ ನಿರ್ದೇಶಕರಾಗಿ ಆಗಮಿಸುವ ಧನಂಜಯ ಛಾತ್ರ ಕಲ್ಸಂಕ ಉಪಸ್ಥಿತರಿರಲಿದ್ದಾರೆ. ಅರ್ಥಾಂಕುರ ಕಾರ್ಯಕ್ರಮದಲ್ಲಿ ‘ಸಂಜಯ ರಾಯಭಾರ’ ಕೃಷ್ಣ ಸಂಧಾನದ ಒಂದು ಭಾಗವನ್ನು ಉದಯೋನ್ಮುಖ ಕಲಾವಿದರಾದ ಶಂಕರನಾರಾಯಣ ಉಪಾಧ್ಯಾಯ ಕೊರ್ಗಿ, ಸುಧಾ ರಸರಂಗ ಕದ್ರಿಕಟ್ಟು, ಉಪನ್ಯಾಸಕ ರಾಘವೇಂದ್ರ ತುಂಗ, ಪ್ರಶಾಂತ್ ಆಚಾರ್ ಕೆಳಕಳಿ, ಸುಹಾಸ ಕರಬ, ಕೀರ್ತನ್ ಮಿತ್ಯಂತ ಹಾಲಾಡಿ ಕಾಣಿಸಿಕೊಳ್ಳಲಿದ್ದಾರೆ ಎಂದು ಯಶಸ್ವೀ ಕಲಾವೃಂದದ ಅಧ್ಯಕ್ಷ ಮಲ್ಯಾಡಿ ಸೀತಾರಾಮ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.