
ಹನೂರು : ಚಿಕಿತ್ಸೆ ಪಡೆಯಲೆಂದು ಆಸ್ಪತ್ರೆಗೆ ಬಂದ ರೋಗಿಗಳಿಗೆ ವೈದ್ಯರಿಲ್ಲದೆ ಕಾದು ಕಾದು ಪರದಾಡುವಂತಹ ಸ್ಥಿತಿ ತಾಲೂಕಿನ ಬಂಡಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಿರ್ಮಾಣವಾಗಿದೆ.
ಹನೂರು ತಾಲೂಕಿನ ಬಂಡಳ್ಳಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂಡಳ್ಳಿ ಮತ್ತು ಸುತ್ತಮುತ್ತಲ ಸುಮಾರು 10 ರಿಂದ 15 ಗ್ರಾಮಗಳಿಂದ ಜನರು ದಿನನಿತ್ಯ ಆಸ್ಪತ್ರೆಗೆ ಬರುತ್ತಾರೆ. ಆದರೆ ಸಕಾಲದಲ್ಲಿ ಚಿಕಿತ್ಸೆ ಸಿಗದೆ ಜನರು ಪರದಾಡುವಂತಾಗಿದೆ.
ಆಸ್ಪತ್ರೆ ಇರುವುದು ಸಾರ್ವಜನಿಕರ ಸೇವೆಗಾಗಿ. ಆದರೆ ಇಲ್ಲಿಗೆ ಚಿಕಿತ್ಸೆಗಾಗಿ ಬಂದರೆ ವೈದ್ಯರೆ ಇರುವುದಿಲ್ಲ. ಇಲ್ಲಿನ ಸಿಬ್ಬಂದಿಗಳನ್ನು ಕೇಳಿದರೆ ವೈದ್ಯರು ಮೀಟಿಂಗ್ ಅಥವಾ ಡಿ ಎಚ್ ಓ ಕಚೇರಿಗೆ ಹೋಗಿದ್ದಾರೆ ಎಂದು ಹೇಳುತ್ತಾರೆ. ಈ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರು ಸುಮಾರು ಒಂದು ವಾರದಿಂದ ಆಸ್ಪತ್ರೆಗೆ ಬಂದಿರುವುದಿಲ್ಲ. ಅಲ್ಲದೆ ಈ ಆರೋಗ್ಯ ಕೇಂದ್ರದಲ್ಲಿ ಕೇವಲ ಒಬ್ಬರೇ ಶುಶ್ರೂಶಕಿ ಮಾತ್ರ ಇದ್ದಾರೆ. ಎಂಬುದಾಗಿ ಇಲ್ಲಿನ ಸ್ಥಳೀಯ ರೋಗಿಗಳು ಮತ್ತು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

ಇನ್ನು ಈ ವಿಚಾರವಾಗಿ ಕರ್ನಾಟಕ ರಕ್ಷಣಾ ವೇದಿಕೆ ಹನೂರು ತಾಲೂಕು ಪ್ರಧಾನ ಕಾರ್ಯದರ್ಶಿ ರಾಹಿಲ್ ರವರು ಸರ್ಕಾರ ಸಾರ್ವಜನಿಕ ಆರೋಗ್ಯ ಸೇವೆಗಾಗಿ ನಿರ್ಮಿಸುವ ಆಸ್ಪತ್ರೆಗಳು ಹೀಗೆ ನಿಷ್ಪ್ರಯೋಜಕವಾದರೆ ಬಡಜನರು ಎಲ್ಲಿಗೆ ಹೋಗಬೇಕು.
ಆದ್ದರಿಂದ ಸಂಬಂಧ ಪಟ್ಟ ಜಿಲ್ಲಾ ಅರೋಗ್ಯ ಇಲಾಖೆ ಸಾರ್ವಜನಿಕರಿಗೆ ತೊಂದರೆ ಆಗದಂತೆ ಸೂಕ್ತ ಕ್ರಮ ವಹಿಸಬೇಕು. ಆರೋಗ್ಯ ಕೇಂದ್ರಕ್ಕೆ ನೇಮಕವಾಗಿರುವ ವೈದ್ಯರು ಪ್ರತಿದಿನ ತಪ್ಪದೆ ಕೇಂದ್ರ ಸ್ಥಾನದಲ್ಲಿ ಇರುವಂತೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ಹನೂರು ತಾಲೂಕು ವೈದ್ಯಧಿಕಾರಿಯಾಗಿರುವ ಪ್ರಕಾಶ್ ಅವರೇ ಬಂಡಳ್ಳಿ ಅರೋಗ್ಯ ಕೇಂದ್ರದ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬುದು ಮತ್ತೊಂದು ದುರದೃಷ್ಟಕರ ಸಂಗತಿಯಾಗಿದೆ.
ತಾಲೂಕು ಮಟ್ಟದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿ ಇರುವ ವೈದ್ಯರೆ ಇರೀತಿ ಕರ್ತವ್ಯಲೋಪ ಎಸಗಿದರೆ, ತಾಲೂಕಿನಲ್ಲಿರುವ ಉಳಿದ ಆಸ್ಪತ್ರೆಗಳ ಗತಿ ಏನಾಗಬೇಕು ? ಎಂದು ಸ್ಥಳೀಯ ಪ್ರಜ್ಞಾವಂತರ ನಾಗರಿಕರ ಪ್ರಶ್ನೆಯಾಗಿದೆ.