ಕುಂದಾಪುರ: ಉಡುಪಿ ಜಿಲ್ಲೆಯ ಸಿದ್ದಾಪುರ, ಹೊಸಂಗಡಿ, ಯಡಮೊಗೆ ಗ್ರಾಮಲೆಕ್ಕಿಗ ಚಂದ್ರಶೇಖರ್ ಮೂರ್ತಿಯವರು ಸರಕಾರಿ ಜಾಗವನ್ನು ಪ್ರಭಾವಿ ವ್ಯಕ್ತಿಗಳಿಗೆ 94ಸಿ ಅಡಿಯಲ್ಲಿ ಮಂಜೂರು ಮಾಡಿ ಸರಕಾರಕ್ಕೆ ತಪ್ಪು ದಾಖಲೆ ನೀಡಿ, ವಾಸದ ಮನೆ ಕಟ್ಟಡ ರಚನೆಯಲ್ಲಿ ಮತ್ತು ವಾಣಿಜ್ಯ ಕಟ್ಟಡದ ರಚನೆಯ ವೇಳೆ ಭೂ ಪರಿವರ್ತನೆಗೆ ಸಹಾಯ ಮಾಡುವ ದುರುದ್ದೇಶಕ್ಕಾಗಿ ರಸ್ತೆ ಮಾರ್ಜಿನ ಜಾಗದ ದೂರವನ್ನು ತಪ್ಪು ಮಾಹಿತಿ ನೀಡಿದ ರಾಜಸ್ವ ಅಧಿಕಾರಿ(ಆರ್.ಐ) ವಂಡ್ಸೆ ರಾಘವೇಂದ್ರ ಪಿ.ಡಬ್ಲೂ. ಸ್ವತ್ತನ್ನೇ ರೋಡ್ ಮಾರ್ಜಿನ್ ಅಲ್ಲಿ ಇರುವುದಿಲ್ಲ ಎಂದು ಸುಳ್ಳು ವರದಿ ನೀಡುವಲ್ಲಿ ಕೈ ಜೋಡಿಸಿರುವುದು ಕಂಡುಬAದಿದೆ. ಅಲ್ಲದೇ ಈ ಅಕ್ರಮದಲ್ಲಿ ಇನ್ನು ಕೆಲವು ಸರಕಾರಿ ಅಧಿಕಾರಿಗಳ ಪಾತ್ರವು ಇರಬಹುದು ಎನ್ನಲಾಗಿದೆ. ಈ ಎಲ್ಲ ದಾಖಲೆಗಳಿಗೆ ಸಹಕರಿಸಿದ ಅಂದಿನ ತಹಸಿಲ್ದಾರರು, ರಾಜಸ್ವ ಅಧಿಕಾರಿಗಳ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ.