• Mon. Sep 9th, 2024

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ಉಡುಪಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷರಾಗಿ ಮಹೇಶ್ ಠಾಕೂರ್ ಆಯ್ಕೆ

ByKiran Poojary

Nov 21, 2023

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ 14ನೇ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆ ಮಣಿಪಾಲ ಸರಳಬೆಟ್ಟು ಶಿವಪ್ಪಾಡಿ ಉಮಾಮಹೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ನೆರವೇರಿತು. ಊರಿನ ಹಿರಿಯರು, ಸಾಹಿತ್ಯಾಭಿಮಾನಿಗಳು, ಸಾಹಿತಿಗಳು, ಕಲಾವಿದರು, ಭಾಗವಹಿಸಿದ್ದ ಈ ಸಭೆಯಲ್ಲಿ ಸಮ್ಮೇಳನದ ಸ್ವಾಗತ ಸಮಿತಿಯನ್ನು ರಚಿಸಲಾಯಿತು.

ಕಸಾಪ ಉಡುಪಿ ತಾಲೂಕು ಘಟಕದ ಅಧ್ಯಕ್ಷ ರವಿರಾಜ್ ಹೆಚ್. ಪಿ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷರಾಗಿ ಮಹೇಶ್ ಠಾಕೂರ್ ಅವರನ್ನು ಸರ್ವಾನುಮತದಿಂದ ಆಯ್ಕಮಾಡಲಾಯಿತು. ಇದರೊಂದಿಗೆ ವಿವಿಧ ಸಮಿತಿಗಳನ್ನು ರಚಿಸಲಾಯಿತು. ಸಮ್ಮೇಳನವನ್ನು ಊರಿನವರೆಲ್ಲರನ್ನು ಸೇರಿಸಿಕೊಂಡು ಡಿಸೆಂಬರ್ 30 ರಂದು ಬಹಳ ಅದ್ದೂರಿಯಾಗಿ ನಡೆಸಲಾಗುವುದು ಎಂದು ಸಮಿತಿಯ ಕಾರ್ಯಧ್ಯಕ್ಷ ಮಹೇಶ್ ಠಾಕೂರ್ ತಿಳಿಸಿದರು.

ಈ ಸಂದಭ೯ದಲ್ಲಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಮಾಜಿ ತಾಲೂಕು ಅಧ್ಯಕ್ಷ ಗಣನಾಥ್ ಎಕ್ಕಾರು, ಅಶೋಕ್ ಕಾಮತ್, ಜಿಲ್ಲಾ ಘಟಕದ ಸಹ ಕಾರ್ಯದರ್ಶಿ ಮೋಹನ್ ಉಡುಪ ಹಂದಾಡಿ, ತಾಲೂಕು ಘಟಕದ ಕೋಶಾಧ್ಯಕ್ಷ ರಾಜೇಶ್ ಭಟ್ ಪಣಿಯಾಡಿ ಉಪಸ್ಥಿತರಿದ್ದರು. ಗೌರವ ಕಾರ್ಯದರ್ಶಿ ಜನಾರ್ದನ್ ಕೊಡವೂರು ನಿರೂಪಿಸಿದರು.

ಸ್ವಾಗತ ಸಮಿತಿ: ಗೌರವಾಧ್ಯಕ್ಷರು ಯಶಪಾಲ್ ಸುವರ್ಣ, ಶಾಸಕರು. ಕಬಿಯಾಡಿ ಜಯರಾಮ ಆಚಾರ್ಯ ಪರ್ಕಳ, ಶ್ರೀನಿವಾಸ ಉಪಾಧ್ಯ ಪರ್ಕಳ, ಮಂಜುನಾಥ ಉಪಾಧ್ಯ ಪರ್ಕಳ, ಸುಮಿತ್ರಾ ನಾಯಕ್, ನಿಕಟ ಪೂರ್ವ ನಗರ ಸಭಾಧ್ಯಕ್ಷರು, ಉಡುಪಿ.

ಕಾರ್ಯಾಧ್ಯಕ್ಷ: ಮಹೇಶ್ ಠಾಕೂರ್ ಪರ್ಕಳ, ಪ್ರಧಾನ ಕಾರ್ಯದರ್ಶಿ ಗುರುರಾಜ ಭಂಡಾರಿ, ಸರಳಬೆಟ್ಟು. ಜೊತೆ ಕಾರ್ಯದರ್ಶಿಗಳು, ಚೇತನಾ ಗಣೇಶ್ ಸರಳಬೆಟ್ಟು, ಅಕ್ಷತಾ ಶೆಟ್ಟಿಗಾರ್ ಸರಳಬೆಟ್ಟು, ಗೌರವ ಸಲಹೆಗಾರರು ನೀಲಾವರ ಸುರೇಂದ್ರ ಅಡಿಗ. ದಿಲೀಪ್ ರಾಜ್ ಹೆಗ್ಡೆ ಪರ್ಕಳ, ಆತ್ರಾಡಿ ದಿನೇಶ್ ಹೆಗ್ಡೆ, ಪರ್ಕಳ, ಬಾಲಕೃಷ್ಣ ಮದ್ದೋಡಿ ಮಣಿಪಾಲ, ದೇವೇಂದ್ರ ಪ್ರಭು, ಮಾಜಿ ನಗರ ಸಭಾ ಸದಸ್ಯರು ಮಣಿಪಾಲ, ಗ್ರೇಸಿ ರೆಬೆಲ್ಲೋ ಪರ್ಕಳ, ವಿನಯ ಸರೋಜಾ ಕುಮಾರಿ ಪರ್ಕಳ, ಆನಂದ್ ನಾಯ್ಕ ಎಂ. ಪರ್ಕಳ

ಉಪಾಧ್ಯಕ್ಷರು: ನೆಂಪು ನರಸಿಂಹ ಭಟ್ ಸಾಹಿತಿ, ದಿನಕರ ಶೆಟ್ಟಿ ಹೆರ್ಗ, ಅಂಶುಮಾಲಿ ಸಾಹಿತಿ ಮಣಿಪಾಲ, ಭುವನ ಪ್ರಸಾದ ಹೆಗ್ಡೆ ಮಣಿಪಾಲ, ಮರವಂತೆ ನಾಗರಾಜ ಹೆಬ್ಬಾರ್ ಉಡುಪಿ, ಜಯರಾಜ್ ಹೆಗ್ಡೆ ಪರ್ಕಳ, ಉದಯ ಶಂಕರ್ ಪರ್ಕಳ, ಅಶ್ವಿನಿ ಪೂಜಾರಿ ನಗರಸಭಾ ಸದಸ್ಯರು, ವಿಜಯಲಕ್ಷ್ಮೀ ನಗರಸಭಾ ಸದಸ್ಯರು, ಮಂಜುನಾಥ ಮಣಿಪಾಲ ನಗರಸಭಾ ಸದಸ್ಯರು, ಕಲ್ಪನಾ ಸುಧಾಮ ನಗರ ಸಭಾ ಸದಸ್ಯರು, ಸುಖೇಶ್ ಕುಂದರ್ ಮಾಜಿ ನಗರಸಭಾ ಸದಸ್ಯರು, ಮಣಿಪಾಲ.

ವೇದಿಕೆ ಸಮಿತಿ: ಜಯಕರ ಮಣಿಪಾಲ್, ಸುಶಾಂತ್ ಕೆರೆಮಠ, ಊಟೋಪಚಾರ ಸಮಿತಿ: ಪ್ರಕಾಶ್ ಶೆಣೈ ಪರ್ಕಳ, ಪುರುಷೋತ್ತಮ ಸರಳಬೆಟ್ಟು, ಹರೀಶ್ ಜೋಶಿ ಮಣಿಪಾಲ, ಅನೂಪ್ ಸರಳಬೆಟ್ಟು, ಸ್ವಯಂಸೇವಕ ಸಮಿತಿ: ಆಶಾ ಪಾಟೀಲ್ ಪರ್ಕಳ, ವಿದ್ಯಾ ಸರಸ್ವತಿ ಉಡುಪಿ, ಪ್ರಭಾವತಿ ಉಡುಪಿ

ನೋಂದಣಿ ಕೌಂಟರ್: ದೀಪಿಕಾ ಪಾಟೀಲ್ ಸರಳಬೆಟ್ಟು, ವಿದ್ಯಾ ವಿಜಯನಗರ, ಸುನಿಷಾ ಶಾನುಭೋಗ್, ಗ್ರೀಷ್ಮ ವಿಜಯನಗರ, ಪ್ರಚಾರ ಸಮಿತಿ: ಮೋಹನ ಉಡುಪ ಹಂದಾಡಿ ಪತ್ರಕರ್ತರು, ಶಿವಪ್ರಸಾದ್ ರಾವ್ “ಯು” ಚಾನಲ್, ಡಾ. ರಶ್ಮಿ ಅಮ್ಮೆ೦ಬಳ ಮಣಿಪಾಲ್ ರೇಡಿಯೋ, ಪ್ರಥ್ವಿರಾಜ್ ಕವತ್ತಾರ್, ಸಾಂಸ್ಕೃತಿಕ ಸಮಿತಿ: ಶಿಲ್ಪಾ ಜೋಶಿ ಮಣಿಪಾಲ, ಉಮಾಶಂಕರಿ ಪರ್ಕಳ, ಸುಮಾ ಕಿರಣ್ ಪರ್ಕಳ.

ಅಭಿನಂದನೆ/ಸನ್ಮಾನ ಸಮಿತಿ: ಗಣೇಶ್ ಪಾಟೀಲ್ ಪರ್ಕಳ, ಪೂರ್ಣಿಮಾ ಜನಾರ್ದನ್, ಚೈತನ್ಯ ಎಂ.ಜಿ., ಮೆರವಣಿಗೆ ಸಮಿತಿ: ಉಮೇಶ್ ಶಾನುಭೋಗ, ಸರಳಬೆಟ್ಟು. ನಿತ್ಯಾನಂದ ಶೆಣೈ ಸರಳಬೆಟ್ಟು. ಪ್ರಮೋದ್ ಪರ್ಕಳ, ಸಿದ್ಧಬಸಯ್ಯ ಸ್ವಾಮಿ ಚಿಕ್ಕಮಠ ಉಡುಪಿ, ಕೃಷ್ಣ ಶೆಟ್ಟಿಬೆಟ್ಟು ಪರ್ಕಳ, ಸಚಿನ್ ದೇವಾಡಿಗ, ಪರ್ಕಳ.

ಸಮಿತಿ ಸದಸ್ಯರು: ಸಂದೀಪ್ ಪರ್ಕಳ, ಸಂದೇಶ್ ಪ್ರಭು ಸರಳಬೆಟ್ಟು. ನಿತ್ಯಾನಂದ ಶೆಣೈ ಸರಳಬೆಟ್ಟು, ವಿಕ್ರಂ ಶಾನುಭೋಗ್ ಸರಳಬೆಟ್ಟು, ನಟರಾಜ ಕಾಮತ್ ಸರಳೆಬೆಟ್ಟು, ಗುರುಪ್ರಸಾದ್ ಮಡಿವಾಳ ಸರಳಬೆಟ್ಟು, ಪ್ರಕಾಶ್ ಕೊಡಂಕೂರು, ಸಂತೋಷ್ ಕೊರಂಗ್ರಪಾಡಿ, ಸುಕೇಶ್ ಕೆ. ಅಮೀನ್. 9845240309

Leave a Reply

Your email address will not be published. Required fields are marked *