ಕೋಟ: ಬ್ರಹ್ಮಲಿಂಗೇಶ್ಚರ ಆಟೋ ಟ್ಯಾಕ್ಸಿ ಮತ್ತು ಗೂಡ್ಸ್ ಚಾಲಕ ಮಾಲಕ ಸಂಘ ಹದ್ದಿನಬೆಟ್ಟು ಯಡಬೆಟ್ಟು ಸಾಸ್ತಾನ ಇವರು ಅನಾರೋಗ್ಯ ಪೀಡಿತರಿಗಾಗಿ ಪ್ರತಿವರ್ಷ ದೀಪಾವಳಿ ಹಬ್ಬದಂದು ಲಕ್ಕಿಡಿಪ್ ಆಯೋಜಿಸಿದ್ದು ಅದರ ಮಿಗತೆ ಹಣದಿಂದ ಅನಾರೋಗ್ಯಕ್ಕಿಡಾದವರಿಗೆ ನೆರವು ಚಾಚುತ್ತಿದ್ದು ಈ ಹಿನ್ನಲ್ಲೆಯಲ್ಲಿ ಬುಧವಾರ ಕುಂದಾಪುರ ಚರ್ಚ ರೋಡ್ ಸನಿಹದ ಎಎನ್ಸ್ ಕಾಲೋನಿಯ ಸುಮಿತ್ ಎನ್ನುವ 12ವರ್ಷದ ಅನಾರೋಗ್ಯಕ್ಕಿಡಾದ ಬಾಲಕನಿಗೆ ಸುಮಾರು 50ಸಾವಿರ ರೂ ಗಳ ನೆರವು ಚಾಚಿದ್ದಾರೆ.
ಇದರ ಛಕ್ ನ್ನು ಬುಧವಾರ ಅವರ ತಾಯಿಗೆ ಬ್ರಹ್ಮಲಿಂಗೇಶ್ವರ ಚಾಲಕ ಸಂಘದ ಅಧ್ಯಕ್ಷ ಅನಿಲ್ ಮರಕಾಲ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಮಂದಾರ ಪೂಜಾರಿ,ಕಾರ್ಯದರ್ಶಿ ಸುಧೀಂದ್ರ ಪೂಜಾರಿ, ಸ್ಥಳೀಯರಾದ ಚಂದ್ರ ಮರಕಾಲ, ಸದಸ್ಯರಾದ ನಾಗೇಶ್ ದೇವಾಡಿಗ, ಪದಾಧಿಕಾರಿಗಳು , ಸದಸ್ಯರು ಉಪಸ್ಥಿತರಿದ್ದರು.
ಬ್ರಹ್ಮಲಿಂಗೇಶ್ಚರ ಆಟೋ ಟ್ಯಾಕ್ಸಿ ಮತ್ತು ಗೂಡ್ಸ್ ಚಾಲಕ ಮಾಲಕ ಸಂಘ ಹದ್ದಿನಬೆಟ್ಟು ಯಡಬೆಟ್ಟು ಸಾಸ್ತಾನ ಇವರು ಬುಧವಾರ ಕುಂದಾಪುರ ಚರ್ಚ ರೋಡ್ ಸನಿಹದ ಎಎನ್ಸ್ ಕಾಲೋನಿಯ ಸುಮಿತ್ ಎನ್ನುವ 12ವರ್ಷದ ಅನಾರೋಗ್ಯಕ್ಕಿಡಾದ ಬಾಲಕನಿಗೆ ಸುಮಾರು 50ಸಾವಿರ ರೂ ಗಳ ನೆರವು ಚಾಚಿದ್ದಾರೆ.