
ಕೋಟ: ಲಕ್ಷ್ಮಿ ಸೋಮ ಬಂಗೇರ ಸರಕಾರಿ ಪ್ರಥಮ ದರ್ಜೆ ಕಾಲೇಜು ಕೋಟ ಪಡುಕರೆ ಇಲ್ಲಿನ ಐ.ಕ್ಯೂ.ಎ.ಸಿ. ಮತ್ತು ಮಹಿಳಾ ವೇದಿಕೆ ಹಾಗೂ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಜಂಟಿ ಆಶ್ರಯದಲ್ಲಿ ಅರಿವಿನ ಪಯಣ ಎಂಬ ಶೀರ್ಷಿಕೆಯ ಅಡಿ ಮಹಿಳಾ ದೌರ್ಜನ್ಯಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಮಂಗಳೂರಿನ ವಾಣಿ ಪೆರಿಯೋಡಿ ಮಾನತಾಡಿ ಈ ಒಕ್ಕೂಟವು ಹನ್ನೊಂದು ಜಿಲ್ಲೆಗಳ ಮಹಿಳಾ ಸಂಘಟನೆ ಸಂಘಗಳ ವೇದಿಕೆಯಾಗಿದ್ದು ಇದು ಕಳೆದ ಒಂದು ದಶಕದಿಂದ ಮಹಿಳೆಯರ ಮೇಲೆ ನಡೆಯುವ ವಿವಿಧ ಬಗೆಗಳ ಹಿಂಸೆ ಹಾಗೂ ಮಹಿಳೆಯರ ಹಕ್ಕುಗಳನ್ನು ಸಕಲ ಮಹಿಳೆಯರ ಅರಿವಿಗೆ ತರುವ ಜಾಗೃತಿ ಕಾರ್ಯಕ್ರಮವನ್ನು ಕ್ರೀಯಾಶೀಲವಾಗಿ ಮಾಡಿಕೊಂಡು ಬರುತ್ತಿರುವ ಸಂಸ್ಥೆಯಾಗಿದ್ದು ಎಂದರು.
ಈ ಸಂಸ್ಥೆಯ ರೇಖಾಂಬ ಶಿವಮೊಗ್ಗ, ನಸ್ರೀನಾ ಬಳ್ಳಾರಿ, ಲೀಲಾವತಿ, ಗೀತಾ ಸುರೇಶ, ಚೈತ್ರ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ನಾಟಕ, ಹಾಡುಗಳು ಮತ್ತು ಸಂವಾದೊAದಿಗೆ ಅರಿವನ್ನು ಮೂಡಿಸಿದರು. ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಪ್ರೊ. ಸುನೀತ ವಿ ವಹಿಸಿದ್ದರು. ವಕೀಲರಾದ ಮಂಜುನಾಥ ಗಿಳಿಯಾರು, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಶಂಕರ ನಾಯ್ಕ ಬಿ ಉಪಸ್ಥಿತರಿದ್ದರು. ಮಹಿಳಾ ವೇದಿಕೆ ಸಂಚಾಲಕರಾದ ರಾಜಣ್ಣ ಎಂ ಕಾರ್ಯಕ್ರಮ ನಡೆಸಿಕೊಟ್ಟರು.
ಲಕ್ಷ್ಮೀ ಸೋಮ ಬಂಗೇರ ಸರಕಾರಿ ಪ್ರಥಮ ದರ್ಜೆ ಕಾಲೇಜು ಕೋಟ ಪಡುಕರೆ ಇಲ್ಲಿನ ಐ.ಕ್ಯೂ.ಎ.ಸಿ. ಮತ್ತು ಮಹಿಳಾ ವೇದಿಕೆ ಹಾಗೂ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಜಂಟಿ ಆಶ್ರಯದಲ್ಲಿ ಅರಿವಿನ ಪಯಣ ಕಾರ್ಯಕ್ರಮ ಆಯೋಜಿತು. ವಕೀಲರಾದ ಮಂಜುನಾಥ ಗಿಳಿಯಾರು, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಶಂಕರ ನಾಯ್ಕ ಬಿ ಉಪಸ್ಥಿತರಿದ್ದರು.