• Fri. May 9th, 2025

News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ.....

ಕೋಟತಟ್ಟು- ಪರಿಸರಸ್ನೇಹಿ ಸಂಘಟನೆ ಉದ್ಘಾಟನೆ

ByKiran Poojary

Nov 25, 2023

ಕೋಟ: ಕೋಟತಟ್ಟು ಬಾರಿಕೆರೆ ಇಲ್ಲಿ ನೂತನವಾಗಿ ಪರಿಸರಸ್ನೇಹಿ ಸಂಘ ಕಾರ್ಯಾರಂಭಗೊAಡಿದ್ದು ಇದನ್ನು ಕೋಟದ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ಉದ್ಘಾಟಿಸಿದರು. ಈ ವೇಳೆ ಮಾತನಾಡಿ ಒಣ ಕಸ ವಿಲೇವಾರಿ ಸಾಮಾನ್ಯವಾಗಿ ವಿಲೇವಾರಿಗೊಳ್ಳುತ್ತಿದೆ, ಆದರೆ ಹಸಿ ಕಸವನ್ನು ವಿಲೇವಾಗಿ ಕ್ಲಿಷ್ಟಕರವಾಗಿದೆ ಆದರೆ ಪರಿಸರಸ್ನೇಹಿ ಸಂಘದ ಮೂಲಕ ಹಸಿ ಕಸವನ್ನು ಸಾವಯವ ಗೊಬ್ಬರ ಮಾಡಿ ಒಂದಿಷ್ಟು ಜನರಿಗೆ ಸ್ವ ಉದ್ಯೋಗ ನೀಡುವ ಈ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು.

ಕೋಟತಟ್ಟು ಗ್ರಾ.ಪಂ ಅಧ್ಯಕ್ಷ ಸತೀಶ್ ಕುಂದರ್ ಸಭಾಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೋಟತಟ್ಟು ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್ ,ಕೋಟ ಪೋಲಿಸ್ ಠಾಣಾಧಿಕಾರಿ ತೇಜಸ್ವಿ, ಕೋಟ ಗ್ರಾ.ಪಂ ಉಪಾಧ್ಯಕ್ಷ ಪಾಂಡು ಪೂಜಾರಿ,ಜೀವನ್ ಮಿತ್ರ ಸೇವಾ ಟ್ರಸ್ಟ್ ಮುಖ್ಯಸ್ಥ ನಾಗರಾಜ ಪುತ್ರನ್,ಕೋಟ ಪಂಚವರ್ಣ ಯುವಕಮಂಡಲ ಅಧ್ಯಕ್ಷ ಅಜಿತ್ ಆಚಾರ್ಯ,ಕೋಟತಟ್ಟು ಗ್ರಾಮಪಂಚಾಯತ್ ಸದಸ್ಯರಾದ ವಾಸು ಪೂಜಾರಿ,ಪ್ರಕಾಶ್ ಹಂದಟ್ಟು,ವಿದ್ಯಾ ಸಾಲಿಯಾನ್ ಮತ್ತಿತರರು ಉಪಸ್ಥಿತರಿದ್ದರು.ಸಂಘದ ಲೋಗೋ ಹಾಗೂ ಟೀ ಶರ್ಟ್ ಅನ್ನು ಕೋಟ ಪೋಲಿಸ್ ಠಾಣಾಧಿಕಾರಿ ತೇಜಸ್ವಿ ಅನಾವರಣಗೊಳಿಸಿದರು.
ಪರಿಸರಸ್ನೇಹಿ ಸಂಘದ ಮುಖ್ಯಸ್ಥೆ ಲೋಲಾಕ್ಷಿ ಕೊತ್ವಾಲ್ ಪ್ರಾಸ್ತಾವನೆ ಸಲ್ಲಿಸಿದರು. ಸಂಘದ ಆಡಳಿತ ಮಂಡಳಿಯ ಸದಸ್ಯೆ ಸ್ವಾತಿ ಸ್ವಾಗತಿಸಿದರು.ಸದಸ್ಯರಾದ ಚಂದ್ರಿಕಾ ನಿರೂಪಿಸಿದರು. ಸದಸ್ಯೆ ಚೈತ್ರ ವಂದಿಸಿದರು.

ಕೋಟತಟ್ಟು ಬಾರಿಕೆರೆ ಇಲ್ಲಿ ನೂತನವಾಗಿ ಪರಿಸರಸ್ನೇಹಿ ಸಂಘವನ್ನು ಕೋಟದ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ಉದ್ಘಾಟಿಸಿದರು. ಕೋಟತಟ್ಟು ಗ್ರಾ.ಪಂ ಅಧ್ಯಕ್ಷ ಸತೀಶ್ ಕುಂದರ್, ಕೋಟತಟ್ಟು ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್ ,ಕೋಟ ಪೋಲಿಸ್ ಠಾಣಾಧಿಕಾರಿ ತೇಜಸ್ವಿ, ಕೋಟ ಗ್ರಾ.ಪಂ ಉಪಾಧ್ಯಕ್ಷ ಪಾಂಡು ಪೂಜಾರಿ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *