ಕೋಟ: ಗ್ರಾಮಕ್ಷೇಮ ಚಾರಿಟೇಬಲ್ ಟ್ರಸ್ಟ್, ಅಷ್ಟಾಂಗ ಯೋಗ ಗುರುಕುಲ ಪಾಂಡೇಶ್ವರ ವತಿಯಿಂದ ಪಾಂಡೇಶ್ವರ ರಸ್ತೆಯ ಇಕ್ಕೆಲಗಳನ್ನು ಸ್ವಚ್ಛಗೊಳಿಸುವ ಅಭಿಯಾನ ಭಾನುವಾರ ನಡೆಯಿತು. ಪ್ರಸಿದ್ಧ ಯೋಗ ಗುರು ವಿದ್ವಾನ್ ವಿಜಯ್ ಮಂಜರ್ ಇವರ ಬಳಿ ನಾರ್ವೆ ದೇಶದಿಂದ ಆಗಮಿಸಿ ಅಷ್ಟಾಂಗ ಯೋಗ ಗುರುಕುಲ ಪಾಂಡೇಶ್ವರ ಇಲ್ಲಿ ಯೋಗ ಶಿಕ್ಷಣ ಪಡೆಯುತ್ತಿರುವ ಅವರ ಶಿಷ್ಯ ವರ್ಗ ಈ ಅಭಿಯಾನದಲ್ಲಿ ಭಾಗಿಯಾದರು.
ವಿದೇಶದ ಪ್ರಜೆಗಳು ರಸ್ತೆಯ ಅಕ್ಕ ಪಕ್ಕದಲ್ಲಿ ಬೆಳೆದ ಹುಲ್ಲು ಹಾಗೂ ತಾಜ್ಯ ವಸ್ತುಗಳನ್ನು ಸ್ವಚ್ಛಗೊಳಿಸುವ ದೃಶ್ಯ ಸ್ಥಳೀಯರನ್ನು ನಿಬ್ಬೆರಗಾಗುವಂತೆ ಮಾಡಿತು. ಸ್ವಚ್ಛತೆ ನಡೆಯುವಾಗ ಕೇವಲ ಒಂದು ಕಿಮೀ ರಸ್ತೆಯಲ್ಲಿ 2 ಟೆಂಪೋ ಪ್ಲಾಸ್ಟಿಕ್ ಸಂಗ್ರಹವಾಗಿದೆ. ಗ್ರಾಮಕ್ಷೇಮ ಚಾರಿಟೇಬಲ್ ಟ್ರಸ್ಟ್ ನವರ ಈ ಸಾಮಾಜಿಕ ಕಳಕಳಿಯ ಕಾರ್ಯಕ್ರಮಕ್ಕೆ ವಿಜಯ್ ಮಂಜರ್, ಪ್ರತಾಪ್ ಶೆಟ್ಟಿ ಹಾಗೂ ವಿಶ್ವನಾಥ್ ಆಚಾರ್ ಮುಂತಾದವರು ಸಾಕ್ಷಿಯಾದರು.
ಗ್ರಾಮಕ್ಷೇಮ ಚಾರಿಟೇಬಲ್ ಟ್ರಸ್ಟ್, ಅಷ್ಟಾಂಗ ಯೋಗ ಗುರುಕುಲ ಪಾಂಡೇಶ್ವರ ವತಿಯಿಂದ ಪಾಂಡೇಶ್ವರ ರಸ್ತೆಯ ಇಕ್ಕೆಲಗಳನ್ನು ಸ್ವಚ್ಛಗೊಳಿಸುವ ಅಭಿಯಾನ ಭಾನುವಾರ ನಡೆಯಿತು. ಯೋಗ ಗುರು ವಿದ್ವಾನ್ ವಿಜಯ್ ಮಂಜರ್, ಪ್ರತಾಪ್ ಶೆಟ್ಟಿ ಹಾಗೂ ವಿಶ್ವನಾಥ್ ಆಚಾರ್ ಮುಂತಾದವರು ಸಾಕ್ಷಿಯಾದರು.