ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಉಡುಪಿ ತಾಲೂಕು ಘಟಕ ವತಿಯಿಂದ ಡಿಸೆ೦ಬರ್ 30, ಶನಿವಾರದಂದು ನಡೆಯಲಿರುವ ಉಡುಪಿ ತಾಲೂಕು 14ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಗೃಹಣಿಯರಿಗಾಗಿ ಕಥಾ ಗೋಷ್ಠಿ ಆಯೋಜಿಸಿದ್ದು ,ಆಸಕ್ತ ಗೃಹಿಣಿಯರು ಪೋಸ್ಟ್ ಕಾರ್ಡ್ ಮೂಲಕ ತಮ್ಮ ಅಡುಗೆಮನೆ ವಾರ್ತೆಯ ಕಥೆಗಳನ್ನು ಡಿಸೆಂಬರ್ ಎರಡರ ಒಳಗೆ ಈ ಕೆಳಗಿನ ವಿಳಾಸಕ್ಕೆ ಕಳುಸಬಹುದು. ಆಯ್ದ ಆರು ಕಥೆಗಳ ಲೇಖಕಿಯರಿಗೆ ಸಮ್ಮೇಳನದ ಕಥಾ ಗೋಷ್ಠಿಯಲ್ಲಿ ಭಾಗವಹಿಸಿ ಕಥೆಯನ್ನು ವಾಚಿಸಲು ವೇದಿಕೆಯಲ್ಲಿ ಅವಕಾಶ ನೀಡಲಾಗುವುದು.
ಕಳುಹಿಸಬೇಕಾದ ವಿಳಾಸ: ಜನಾದ೯ನ ಕೊಡವೂರು, ಗೌರವ ಕಾರ್ಯದರ್ಶಿಗಳು, ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕ ‘ಭಾಮಾ’, ಉಡುಪ ಲೇನ್, ಕೊಡವೂರು, ಕ್ರೋಡಾಶ್ರಮ , ಉಡುಪಿ 576106. ಹೆಚ್ಚಿನ ವಿವರಗಳಿಗೆ ರವಿರಾಜ್ ಎಚ್. ಪಿ., ಅಧ್ಯಕ್ಷರು 98452 40309 ಸಂಪರ್ಕಿಸಬಹುದು.