
ಕೋಟ: ಜೀವನದಲ್ಲಿ ಬದುಕಿದ್ದಷ್ಟಯ ದಿನ ಮಾನವೀಯತೆಯನ್ನು ಮೈಗೂಡಿಸಿಕೊಳ್ಳಿ ಆಗ ಬದುಕಿನಲ್ಲಿ ಸಾರ್ಥಕ್ಯ ಕಾಣಲು ಸಾಧ್ಯ ಎಂದು ಸಮಾಜಸೇವಕ ಈಶ್ವರ್ ಮಲ್ಪೆ ಹೇಳಿದರು.
ಭಾನುವಾರ ಫ್ರೆಂಡ್ಸ್ ಗುಂಡ್ಮಿ ಇದರ ಪಂಚಮ ವರ್ಷದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಫ್ರೆಂಡ್ಸ್ ಗುಂಡ್ಮಿ ಕನ್ನಡ ರಾಜ್ಯೋತ್ಸವ ಪುರಸ್ಕಾರ ಸ್ವೀಕರಿಸಿ ಮಾತನಾಡಿ ಜೀವನದಲ್ಲಿ ಏನಾದರೂ ಒಂದು ಸಾಧನೆ ಮಾಡಿ ಅದನ್ನು ಬಿಟ್ಟು ಕಷ್ಟ ಬಂತ್ತೆAದರೆ ಜೀವ ತೆಗೆದುಕೊಳ್ಳುವ ಅಥವಾ ಜೀವದ ಜೊತೆ ಚಲ್ಲಾಟ ಆಡುವ ವ್ಯವಸ್ಥೆಗೆ ಇಳಿಯದಿರಿ , ಪ್ರಸ್ತುತ ಕಾಲಘಟ್ಟದಲ್ಲಿ ಸೇಲ್ಫಿ ವ್ಯಾಮೂಹದಲ್ಲಿ ತಮ್ಮ ಅಮೂಲ್ಯ ಜೀವವನ್ನೆ ಕಳೆದುಕೊಳ್ಳುತ್ತಿದ್ದಾರೆ ಈ ರೀತಿಯ ಪ್ರಸಂಗ ಉದ್ಭವಿಸದಂತೆ ಪೋಷಕರು ಮಕ್ಕಳಿಗೆ ಕವಿಮಾತು ಹೇಳಿ ಎಂದರಲ್ಲದೆ ಸಮಾಜಸೇವೆಯಲ್ಲೆ ನಾನು ತೃಪ್ತಿ ಕಾಣುತ್ತಿದ್ದೇನೆ ಇಂಥಹ ಕಾರ್ಯಕ್ಕೆ ಸಮಾಜ ನನ್ನನ್ನು ಗೌರವಿಸುತ್ತಿದೆ ಇದಕ್ಕೆ ಆಭಾರಿಯಾಗಿದ್ದೇನೆ ಎಂದರು.
ಇದೇ ವೇಳೆ ಸ್ಥಳೀಯ ಕ್ರೀಡಾವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಶೈಕ್ಷಣಿಕ ಕ್ಷೇತ್ರದಲ್ಲಿ ವಿದ್ಯಾ ಸಾಧನೆಗೈದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಯಿತು. ಅಧ್ಯಕ್ಷತೆಯನ್ನು ಗುಂಡ್ಮಿ ಸರಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕ ಸತೀಶ್ ಐತಾಳ್ ವಹಿಸಿದ್ದರು.
ಮುಖ್ಯ ಅಭ್ಯಾಗತರಾಗಿ ಬ್ರಹ್ಮಾವ ತಾ.ಪಂ ಮಾಜಿ ಅಧ್ಯಕ್ಷೆ ಜ್ಯೋತಿ ಉದಯ್ ಪೂಜಾರಿ,ನ್ಯಾಯವಾದಿ ಗುಂಡ್ಮಿ ಸುಹಾನ್,ಫ್ರೆಂಡ್ಸ್ ಗುಂಡ್ಮಿ ಅಧ್ಯಕ್ಷ ಶಿವರಾಮ್ ಗುಂಡ್ಮಿ ಉಪಸ್ಥಿತರಿದ್ದರು.ಸದಸ್ಯೆ ವಿದ್ಯಾ ಸ್ವಾಗತಿಸಿದರು.ಸನ್ಮಾನ ಪತ್ರವನ್ನು ಸಿಂಚನಾ,ಸೌಮ್ಯ ಶ್ರೀಧರ್,ರಾಘವೇಂದ್ರ ಗುಂಡ್ಮಿ,ಶಶಿಕಲಾ ವಾಚಿಸಿದರು. ಕಾರ್ಯಕ್ರಮವನ್ನು ಪ್ರವೀಣ್ ಶೆಟ್ಟಿಗಾರ್ ನಿರೂಪಿಸಿದರು, ದೀಪಾ ವಂದಿಸಿದರು. ಫ್ರೆAಡ್ಸ್ ಗುಂಡ್ಮಿಯ ಸಂದೀಪ್ ಪೂಜಾರಿ,ಕಾರ್ಯದರ್ಶಿ ಪುನಿತ್ ಪೂಜಾರಿ ಸಹಕರಿಸಿದರು.
ಕನ್ನಡದ ಬಗ್ಗೆ ನೈಜ ಕಳಕಳಿ ಪ್ರದರ್ಶಿಸುವ ಅಗತ್ಯತೆ ಇದೆ,ತೊರುವಿಕೆ ಕನ್ನಡಾಭಿಮಾನ ಕನ್ನಡ ಅವತಿಗೆ ಮೂಲ ಕಾರಣ,ಮಕ್ಕಳ ಮೆಲೆ ಭಾಷಾಭಿಮಾನ ಬೀರಬೇಕಾದರೆ ಪೋಷಕರು ಕನ್ನಡ ಮಾಧ್ಯಮ ಶಾಲೆಗೆ ಕಳುಹಿಸುವ ಜತೆಗೆ ಮನೆಯಲ್ಲಿ ಮಾತೃ ಭಾಷೆಗೆ ಹೆಚ್ಚಿನ ಆದ್ಯತೆ ನೀಡಿ,ನಮ್ಮ ಮಕ್ಕಳಿಗೆ ಬೇಕಾಗಿರುವುದು ದೇಶ ಭಕ್ತಿ,ಮಾತೃ ಭಾಷಾಭಿಮಾನ ಹೆಚ್ಚಿಸಿ,ಎಲ್ಲಾ ಭಾಷೆ ಗೌರವಿಸಿ ಆದರೆ ಆಂಗ್ಲ ಮಾಧ್ಯಮ ನಶೆಯಿಂದ ಹೊರಬನ್ನಿ,ನೈಜ ಸಂಸ್ಕಾರ ಭರಿತ ಶಿಕ್ಷಣ ನೀಡಿ ಎಂದು ಸಾಮಾಜಿಕ ಹೋರಾಟಗಾರ ಪ್ರಕಾಶ್ ಮಲ್ಪೆ ಮುಖ್ಯ ಅಭ್ಯಾಗತರಾಗಿ ಮಾತನಾಡಿದರು.
ಭಾನುವಾರ ಫ್ರೆಂಡ್ಸ್ ಗುಂಡ್ಮಿ ಇದರ ಪಂಚಮ ವರ್ಷದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಫ್ರೆಂಡ್ಸ್ ಗುಂಡ್ಮಿ ಕನ್ನಡ ರಾಜ್ಯೋತ್ಸವ ಪುರಸ್ಕಾರವನ್ನು ಸಮಾಜಸೇವಕ ಈಶ್ವರ್ ಮಲ್ಪೆ ಸ್ವೀಕರಿಸಿದರು. ಗುಂಡ್ಮಿ ಸರಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕ ಸತೀಶ್ ಐತಾಳ್, ಬ್ರಹ್ಮಾವ ತಾ.ಪಂ ಮಾಜಿ ಅಧ್ಯಕ್ಷೆ ಜ್ಯೋತಿ ಉದಯ್ ಪೂಜಾರಿ,ನ್ಯಾಯವಾದಿ ಗುಂಡ್ಮಿ ಸುಹಾನ್,ಫ್ರೆಂಡ್ಸ್ ಗುಂಡ್ಮಿ ಅಧ್ಯಕ್ಷ ಶಿವರಾಮ್ ಗುಂಡ್ಮಿ ಉಪಸ್ಥಿತರಿದ್ದರು.
Leave a Reply