
ದಿನಾಂಕ 01/12/2023 ಶುಕ್ರವಾರದಂದು ಗ್ರಾಮ ಪಂಚಾಯತ್ ಅಂಬಲಪಾಡಿ ಯಲ್ಲಿ ಪಂಚಾಯತ್ ಅಧ್ಯಕ್ಷರಾದ ಸುಜಾತ ಯೋಗೀಶ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ವಿಮಾ ನೋಂದಣಿ ಮೇಳ ನಢೆಯಿತು.
ಗ್ರಾಮ ಪಂಚಾಯತ್ ನ ಪ್ರತಿಯೊಬ್ಬ ಅರ್ಹ ನಾಗರೀಕರಿಗೆ ಸಾಮಾಜಿಕ ಭದ್ರತೆ ಯೋಜನೆಯಡಿ ನೋಂದಣಿ ಮಾಡುವ ಉದ್ದೇಶದಿಂದ ಯೂನಿಯನ್ ಭ್ಯಾಂಕ್ ಆಪ್ ಇಂಡಿಯಾ ಅಂಬಲಪಾಡಿ ಇವರ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಿತು. ಅಂಬಲಪಾಡಿ ಕಿದಿಯೂರು & ಮೂಡನಿಡಂಬೂರು ಗ್ರಾಮ ವ್ಯಾಪ್ತಿಯ ಎಲ್ಲಾ ನಾಗರೀಕರು ಕೂಡಾ ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆ (PMSBY) 18 ರಿಂದ 70 ವರ್ಷ & ಪ್ರಧಾನಮಂತ್ರಿ ಜೀವನ್ ಜ್ಯೋತಿ ಭೀಮಾ ಯೋಜನೆಯಡಿ (PMJJBY) 18 ರಿಂದ 50 ವರ್ಷ ವಯಸ್ಸಿನ ವರೆಗಿನ ನಾಗರೀಕರು ರೂ 436 ಪ್ರೀಮಿಯಮ್ ವಾರ್ಷಿಕವಾಗಿ ಪಾವತಿಸಿದರೆ ಪ್ರತಿ ಯೋಜನೆಯ ರೂಪಾಯಿ 2 ಲಕ್ಷ ವರೆಗೆ ವಿಮೆ ಸೌಲಭ್ಯ ದೊರೆಯುತ್ತದೆ. ಈ ಎಲ್ಲದರ ಬಗ್ಗೆ ಕೆನರಾ ಭ್ಯಾಂಕ್ ಅಧಿಕಾರಿ ಮೀರಾ ಅವರು ಮಾಹಿತಿ ನೀಡಿದರು & ವಿಮೆ ಮಾಡುವ ಅವಕಾಶ ಕೂಡಾ ಸ್ಥಳದಲ್ಲಿಯೇ ಅವಕಾಶ ಕಲ್ಪಿಸಲಾಯಿತು. ಅಲ್ಲದೆ ಅಂಚೆ ಕಚೇರಿಯ ವಿಮಾ ಸೌಲಭ್ಯ (396 ವಾರ್ಷಿಕ) ಬಗ್ಗೆ ಅಶ್ವತ್ ಅವರು ಮಾಹಿತಿ ನೀಡಿದರು & ವಿಮೆ ಮಾಡುವ ಅವಕಾಶವೂ ಕಲ್ಪಿಸಲಾಯಿತು.
ಈ ಸಂಧರ್ಭದಲ್ಲಿ ಯೂನಿಯನ್ ಬ್ಯಾಂಕ್ ಅಂಬಲಪಾಡಿ ಸೀನಿಯರ್ ಮ್ಯಾನೇಜರ್ ಗೌರವ್ ಸಿಂಗ್, ಅ.ಮ್ಯಾನೇಜರ್ ಅನಿಲ್ ಪಟೇಲ್, ಮ್ಯಾನೇಜರ್ ಆರ್ಯ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು. & ಅಂಬಲಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಸುಜಾತ ಸುಧಾಕರ್, ಗ್ರಾಮ ಪಂಚಾಯತ್ ಸದಸ್ಯರಾದ ರಾಜೇಶ್ ಸುವರ್ಣ, ಹರೀಶ್ ಪಾಲನ್, ರೋಹಿಣಿ ಎಸ್ ಪೂಜಾರಿ, ಶಶಿಧರ್ ಸುವರ್ಣ, ಉಷಾ ಶೆಟ್ಟಿ , ಲಕ್ಷ್ಮಣ ಪೂಜಾರಿ & ಅಂಬಲಪಾಡಿ ಗ್ರಾಮ ಪಂಚಾಯತ್ ಉಜ್ವಲ ಸಂಜೀವಿನಿ ಒಕ್ಕೂಟದ ಅಧ್ಯಕ್ಷರಾದ ಸವಿತಾ ಸಂತೋಷ್ & LCRP ಇಂದಿರಾ, LCRP ಶಮಿತಾ, BRPVP ಪ್ರಮೀಳಾ & ಪಂಚಾಯತ್ ಸಿಬ್ಬಂದಿಗಳು & ಗ್ರಾಮಸ್ಥರು ಉಪಸ್ಥಿತರಿದ್ದರು.
ಪಂಚಾಯತ್ ಅಭಿವೃದ್ದಿ ಅಧಿಕಾರಿ ಶ್ರೀಮತಿ ವಸಂತಿ ಕಾರ್ಯಕ್ರಮ ನಿರೂಪಿಸಿದರು. & ಉಪಸ್ಥಿತರಿದ್ದ ಎಲ್ಲರಿಗೂ ಧನ್ಯವಾದ ಸಲ್ಲಿಸಿದರು.
Leave a Reply