News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಡಿ.9: ಕೋಟ ಶಾಂತಮೂರ್ತಿ ಶ್ರೀ ಶನೀಶ್ವರ ಸ್ವಾಮಿ ದೇಗುಲದ ದೀಪೋತ್ಸವ

ಕೋಟ :  ಉಡುಪಿ ಜಿಲ್ಲೆಯ ಕೋಟದ ಹಾಡಿಕೆರೆಬೆಟ್ಟುವಿನಲ್ಲಿ ಪ್ರತಿಷ್ಠಾಪನೆಗೊಂಡ ಶಾಂತಮೂರ್ತಿ ಶ್ರೀ ಶನೀಶ್ವರ ಸ್ವಾಮಿ ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆಯುವ ಕಾರ್ತಿಕ ಮಾಸದ 28 ನೇ ವರ್ಷದ ದೀಪೋತ್ಸವವು ಡಿ.9 ರಂದು ಶನಿವಾರ ಜರಗಲಿರುವುದು.

ಈ ಪ್ರಯುಕ್ತ ಬೆಳಿಗೆ 9.30ಕ್ಕೆ
ಸಾಮೂಹಿಕ “ಶನಿಶಾಂತಿ ಹೋಮ”, ಅಲಂಕಾರ ಪೂಜೆ, ಮಧ್ಯಾಹ್ನ  12.30ಕ್ಕೆ‌ “ಮಹಾ ಪೂಜೆ”, ಮಂಗಳಾರತಿ, ‌ತೀರ್ಥ ಪ್ರಸಾದ ವಿತರಣೆ. ಬಳಿಕ 1 ಗಂಟೆಗೆ ಸಾರ್ವಜನಿಕ‌  ಮಹಾ “ಅನ್ನಸಂತರ್ಪಣೆ” ಕಾರ್ಯಕ್ರಮ ನಡೆಯಲಿರುವುದು.
ಸಂಜೆ 5 ಗಂಟೆಗೆ ಸ್ಥಳೀಯ ಭಜನಾ ಮಂಡಳಿ ಅವರಿಂದ ಕುಣಿತಾ ಭಜನಾ ಕಾರ್ಯಕ್ರಮ.
ರಾತ್ರಿ 7 ಗಂಟೆಗೆ “ತುಳಸಿ ಪೂಜೆ”, 
ಬಳಿಕ ಶನೀಶ್ವರ ಸ್ವಾಮಿಯ “ದರ್ಶನ ಸೇವೆ”. ರಾತ್ರಿ 8 ಗಂಟೆಗೆ  *ದೀಪೋತ್ಸವ* ನಡೆಯಲಿದೆ ಎಂದು ದೇವಳದ ಅರ್ಚಕರಾದ ಜಯರಾಜ್ ಸಾಲಿಯಾನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *