ಕೋಟ:ಯಕ್ಷಗಾನ ಪೋಷಕ,ಸಮಾಜಿಕ ಕಾರ್ಯಕರ್ತ, ಕಲಾಕೇಂದ್ರದ ಸದಸ್ಯರಾಗಿದ್ದ ದಿವಂಗತ ಗುಂಡ್ಮಿ ಶಂಕರನಾರಯಣ ಉಪಾಧ್ಯರ ಸಂಸ್ಮರಣಾ ಕಾರ್ಯಕ್ರಮವು ಡಿ. 15 ರಂದು ಶುಕ್ರವಾರ ಸಂಜೆ ಗಂಟೆ 6ಕ್ಕೆ ಸಾಲಿಗ್ರಾಮದ ಗುಂಡ್ಮಿಯಲ್ಲಿರುವ ಸದಾನಂದ ರಂಗಮಂಟಪದಲ್ಲಿ ನಡೆಯಲಿದೆ.
ಹಿರಿಯ ಯಕ್ಷಗಾನ ಕಲಾವಿದ ಶ್ರೀ ಆನಂದ ರಾವ್ ಉಪ್ಪಿನಕುದ್ರು ಅವರಿಗೆ ಈ ಸಂದAರ್ಭದಲ್ಲಿ ಅವರ ವೈದ್ಯಕೀಯ ವೆಚ್ಚಕ್ಕಾಗಿ ಸಹಾಯಧನವನ್ನು ನೀಡಿ ಗೌರವಿಸಲಾಗುವುದು. ಸಭಾ ಕಾರ್ಯಕ್ರಮದ ನಂತರ ಹಿರಿಯ ಕಲಾವಿದರಿಂದ ಮೂರೂರು ದೇವರು ಹೆಗಡೆ ರಚಿತ ಪ್ರಚಂಡ ಲಂಕೇಶ್ವರ ಯಕ್ಷಗಾನ ಪ್ರದರ್ಶನವಿದೆ, ಪರಮೇಶ್ವರ ನಾÊಕ್, ರಾಘವೇಂದ್ರ ಹೆಗಡೆ,ರಾಕೇಶ ಮಲ್ಯ,ಕೊಂಡದಕುಳಿ ರಾಮಚಂದ್ರ ಹೆಗಡೆ, ಕೋಟ ಸುರೇಶ, ಅಶೋಕ ಆಚಾರ್, ಯೋಗೀಂದ್ರ ಮರವಂತೆ, ಸತೀಶ್ ಹಾಲಾಡಿ, ಆದಿತ್ಯ ಹೆಗಡೆ, ಬೇಳಂಜೆ ಸತೀಶ್ ನಾಯಕ್, ಪಂಜು ಪೂಜಾರಿ,ಹಾಲಾಡಿ ಸತೀಶ್ ಕಲಾವಿದರು ಭಾಗವಹಿಸಲಿದ್ದಾರೆ ಎಂದು ಕಲಾಕೇಂದ್ರದ ಕಾರ್ಯದರ್ಶಿ ಐರೋಡಿ ರಾಜಶೇಖರ ಹೆಬ್ಬಾರ ತಿಳಿಸಿರುತ್ತಾರೆ.