
ಕೋಟ: ಪ್ರಪಂಚವೇ ನಿರ್ಲಕ್ಷಿಸುವ ಕಾಲಘಟ್ಟದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಸರಕಾರ ದೇಶವನ್ನು ಸುಭದ್ರಗೊಳಿಸಿ ವಿಶ್ವದ ಮೂರನೆ ಶಕ್ತಿ ಶಾಲಿ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಕೋಟತಟ್ಟು ಪಂಚಾಯತ್ ಆಶ್ರಯದಲ್ಲಿ ಲೀಡ್ ಬ್ಯಾಂಕ್ ಉಡುಪಿ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಕೋಟತಟ್ಟು ಶಾಖೆ ವಿವಿಧ ಇಲಾಖೆಗಳ ಸಹಭಾಗಿತ್ವದಡಿ ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ವಿಕಸಿತ ಭಾರತ್ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿ ಕೇಂದ್ರದ ನರೇಂದ್ರ ಮೋದಿ ಸರಕಾರ ಸಾಕಷ್ಟು ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದು ಅದನ್ನು ಗ್ರಾಮ ಮಟ್ಟದಲ್ಲಿ ಅನುಷ್ಠಾನಕ್ಕೆ ಸ್ಥಳೀಯಾಡಳಿತಗಳ ಮೂಲಕ ಕಾರ್ಯನ್ಮೂಖಗೊಳಿಸಬೇಕಾಗಿದೆ.ಸುಮಾರು 70ಕ್ಕೂ ಮಿಕ್ಕಿ ಯೋಜನೆಗಳು ಜನರ ನಾಡಿಮಿಡಿತಕ್ಕೆ ಸ್ಪಂದಿಸುವ ಯೋಜನೆಗಳಾಗಿದ್ದು ಆ ಮೂಲಕ ಕೆಳ ಹಾಗೂ ಮಧ್ಯಮವರ್ಗದವರನ್ನು ಸ್ವಾವಲಂಬಿಯಾಗಿಸಲು ಸಹಕಾರಿಯಾಗಿದೆ ಎಂದರು.
ಕಾರ್ಯಕ್ರಮವನ್ನು ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಉದ್ಘಾಟಿಸಿದರು.
ಇದೇ ವೇಳೆ ವಿಕಸಿತ ಭಾರತ ಸಂಕಲ್ಪ ಪ್ರತಿಜ್ಞಾ ವಿಧಿಯನ್ನು ಪಂಚಾಯ್ ಸದಸ್ಯ ರವೀಂದ್ರ ತಿಂಗಳಾಯ ಭೋದಿಸಿದರು. ಫಲಾನುಭವಿಗಳಿಗೆ ಛಕ್ ವಿತರಿಸಿಲಾಯಿತು. ಅಧ್ಯಕ್ಷತೆಯನ್ನು ಕೋಟತಟ್ಟು ಗ್ರಾ.ಪಂ ಅಧ್ಯಕ್ಷ ಸತೀಶ್ ಕುಂದರ್ ವಹಿಸಿದ್ದರು. ಎಎಫ್‌ಎಲ್‌ಸಿ ಉಡುಪಿ ಇದರ ಆರ್ಥಿಕ ಸಮಾಲೋಚಕಿ ಮೀರಾ ಮಾಹಿತಿ ನೀಡಿ ಸಾಮಾನ್ಯ ಜನರು ಯಾವ ರೀತಿ ತಮ್ಮ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಗೊಳಿಸುವಲ್ಲಿ ಬ್ಯಾಂಕ್‌ಗಳಲ್ಲಿರುವ ಯೋಜನೆಗಳ ಬಗ್ಗೆ ತಿಳಿಸಿದರು.
ಮುಖ್ಯ ಅಭ್ಯಾಗತರಾಗಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಕೋಟತಟ್ಟು ಶಾಖಾ ಪ್ರಭಂಧಕ ನಿತೀನ್ ಕುಮಾರ್, ಕೆ.ವಿಕೆ ಬ್ರಹ್ಮಾವರ ಇದರ ವಿಜ್ಞಾನಿ ಡಾ.ಸದಾನಂದ ಆಚಾರ್ಯ,ಕುಂದಾಪುರ ಅಂಚೆ ಇಲಾಖೆಯ ನಂದೀಶ್ ಕುಮಾರ್,ಕೋಟ ಸಮಯದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಮಾಧವ್ ಪೈ,ಉಡುಪಿ ಆರೋಗ್ಯ ಮಿತ್ರ ಸಂಯೋಜಕಿ ಸುಜನ್‌ಮಾಲ, ,ಪಂಚಾಯತ್ ಉಪಾಧ್ಯಕ್ಷೆ ಸರಸ್ವತಿ,ಪಂಚಾಯತ್ ಸದಸ್ಯರು,ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು,ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು ಇದ್ದರು. ಉಡುಪಿ ಲೀಡ್ ಬ್ಯಾಂಕ್‌ನ ಪ್ರಬಂಧಕ ಪಿಂಜಾರ ಪ್ರಾಸ್ತಾವನೆ ಸಲ್ಲಿಸಿದರು, ಪಂಚಾಯತ್ ಸದಸ್ಯ ವಾಸು ಪೂಜಾರಿ ಸ್ವಾಗತಿಸಿದರು. ಕಾರ್ಯಕ್ರಮವನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್ ನಿರೂಪಿಸಿದರು.
ಕೋಟತಟ್ಟು ಪಂಚಾಯತ್ ಆಶ್ರಯದಲ್ಲಿ ಲೀಡ್ ಬ್ಯಾಂಕ್ ಉಡುಪಿ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಕೋಟತಟ್ಟು ಶಾಖೆ ವಿವಿಧ ಇಲಾಖೆಗಳ ಸಹಭಾಗಿತ್ವದಡಿ ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ವಿಕಸಿತ ಭಾರತ್ ಯಾತ್ರೆ ಕಾರ್ಯಕ್ರಮವನ್ನು ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಉದ್ಘಾಟಿಸಿದರು.ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕೋಟತಟ್ಟು ಗ್ರಾ.ಪಂ ಅಧ್ಯಕ್ಷ ಸತೀಶ್ ಕುಂದರ್ ಮತ್ತಿತರರು ಇದ್ದರು.
Leave a Reply