• Wed. Mar 19th, 2025

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ಆರೋಗ್ಯಕ್ಕೆ ಮೊದಲ ಆದ್ಯತೆ:- ಕೊಡವೂರು

ByKiran Poojary

Dec 20, 2023

ಕೊಡವೂರು ವಾರ್ಡಿನಲ್ಲಿ ಎಲ್ಲಾ ವಿಚಾರಕ್ಕಾಗಿ ಕೆಲಸ ಮಾಡುವಂತಹ ಒಂದು ಸಮಿತಿಗಳ ರಚನೆ ಮೂಲಕ ಕೆಲಸ ನಡೆಯುತ್ತಿದೆ ಕೊಡವೂರು ವಾರ್ಡಿನ ಸರ್ವೆ ಮಾಡಿ ಅದರಲ್ಲಿ ಒಟ್ಟು 79 ವಿಷಯವನ್ನು ಇಟ್ಟುಕೊಂಡು ಸರ್ವೆ ಮಾಡಲಾಗಿದೆ.

ಈ ಮುಖಾಂತರ ಆರೋಗ್ಯವನ್ನು ಕಣ್ಣಮುಂದೆ ಇಟ್ಟುಕೊಂಡು ಕೊಡವೂರಿನಲ್ಲಿ ಕುಡಿಯುವ ನೀರಿನ ಬಗ್ಗೆ ಪ್ರತಿ ವರ್ಷ ಪರೀಕ್ಷಿಸಲಾಗುತ್ತದೆ. ಆ ದೃಷ್ಟಿಯಿಂದ ಕೊಡವೂರಿನಲ್ಲಿ ಒಟ್ಟು ಇರುವಂತಹ ಬಾವಿಗಳ ಸಂಖ್ಯೆ 432 ಅದರಲ್ಲಿ ಕೊನೆಯ ವರ್ಷ ತಿಳಿದದ್ದು ನಿರುಪಯುಕ್ತ ಬಾವಿ ಕುಡಿಯಲು ನೀರು ಸರಿಯಿಲ್ಲ. ಕುಡಿಯಲು ಯೋಗ್ಯ ವಾಗದ ನೀರು 90 ಬಾವಿಗಳು ನಿರುಪಯುಕ್ತವಾಗಿತ್ತು.

ಆ ದೃಷ್ಟಿಯಿಂದ ಪ್ರತಿ ವರ್ಷ ಬಾವಿಯ ನೀರನ್ನು ಸರಕಾರದ ವ್ಯವಸ್ಥೆಯೊಂದಿಗೆ ಪರೀಕ್ಷಿಸಿ ಅದರಲ್ಲಿ ಬರುವಂತಹ ನಿರುಪಯುಕ್ತ ಬಾವಿ ಸಮಸ್ಯೆ ಏನು ಇದರಿಂದ ಮನುಷ್ಯನಿಗೆ ಬರುವಂತಹ ಸಮಸ್ಯೆಗಳೇನು ಅನ್ನುವ ಕೆಲಸ ಕೊಡವೂರಿನಲ್ಲಿ ನಿತ್ಯ ನಿರಂತರ ನಡೆಯುತ್ತಿದೆ. ಆದ್ದರಿಂದ ಕಳೆದ ಒಂದು ಅಧ್ಯಯನವನ್ನು ಮಾಡಿಕೊಂಡು ಬಾವಿಗಳ ನೀರು ಪರೀಕ್ಷೆ ಮಾಡುವಂತಹದ್ದು ಈಗಾಲೇ ಶುರುವಾಗಿದೆ. ಒಟ್ಟು 100 ಬಾವಿಗಳ ನೀರನ್ನು ಪರೀಕ್ಷೆ ಮಾಡಿ ಅದರಲ್ಲಿ ಬರುವಂತಹ ಫಲಿತಾಂಶವನ್ನು ಸರಕಾರದ ಮುಂಡಿದುವಂತಹದ್ದು ಆಗಬೇಕಾಗಿದೆ.

ಕೊಡವೂರಿನಲ್ಲಿ ಪವಿತ್ರವಾಗಿರುವಂತಹ ಇಂದ್ರಾಣಿ ನದಿಯು ಹರಿದು ಹೋಗುವ ಜಾಗ ಪವಿತ್ರವಾಗಿತ್ತು. ಕಾಲಕ್ರಮೇಣ ಇಂದ್ರಾಣಿ ನದಿಗೆ ಆದ ಘಟನೆ ಎಲ್ಲರಿಗೂ ತಿಳಿದ ಸಂಗತಿಯಾಗಿದೆ. ಇದರ ಅಪವಿತ್ರತೆಯಿಂದ ತ್ಯಾಜ್ಯ ನೀರಿನ ಪರಿಣಾಮ ಈ ಭಾಗದ ಎಲ್ಲಾ ಬಾವಿಗಳು ಶೇಕಡಾ 90ರಷ್ಟು ಹಾಳಾಗಿದ್ದು ಅದನ್ನು ಗುರತಿಸುವ ಕಾರ್ಯ ಕೊಡವೂರಿನಲ್ಲಿ ನಡೆಯುತ್ತಿದೆ. ಇದರಿಂದ ಬಾವಿಗಳ ಸಂಖ್ಯೆ ತುಂಬಾ ಹಾಳಾದರೆ ಇದಕ್ಕೆ ಸರಕಾರವೇ ಹೊಣೆಗಾರಿಕೆ ಎಂದು ಈ ಮೂಲಕ ವಿಜಯ ಕೊಡವೂರು ತಿಳಿಸಿದರು ಮತ್ತು ಬಾವಿಯ ನೀರಿನ ಪರೀಕ್ಷೆಯ ಕಾರ್ಯವು ಸ್ವತಃ ನಗರ ಸಭಾ ಸದಸ್ಯರು ಮನೆ ಮನೆಗೆ ತೆರಳಿ ಭೇಟಿ ನೀಡುವ ಕಾರ್ಯ ಆಗುತ್ತಿದೆ.

Leave a Reply

Your email address will not be published. Required fields are marked *