Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ವಿದ್ಯಾರಂಗ ಮಿತ್ರ ಮಂಡಳಿ 54ನೇ ವಾರ್ಷಿಕೋತ್ಸವ ಸಮಾರಂಭ ಹಾಗೂ ವಿದ್ಯಾನಿಧಿ ಯೋಜನೆಯ 45ವರ್ಷದ ಕಾರ್ಯಕ್ರಮ

ಸಮಾರಂಭ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಶ್ರೀಯುತ ದಾಮೋದರ ಖಾರ್ವಿಯವರು ಸ್ವಾಗತಿಸಿದರು
ಬೈಂದೂರು ಪಟ್ಟಣ ಪಂಚಾಯತ್ ನ ಮುಖ್ಯಾಧಿಕಾರಿ ಶ್ರೀಯುತ ಸೂರ್ಯಕಾಂತ ಖಾರ್ವಿ ಶುಭಾಶಂಸನೆಗೈದರು.

ಮುಖ್ಯ ಅತಿಥಿಗಳಾಗಿ ಶ್ರೀ ಮಹಾಕಾಳಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಯುತ ಜಯಾನಂದ ಖಾರ್ವಿ, ಶ್ರೀಯುತ ಪ್ರಸಾದ ಪ್ರಭು, ಉದ್ಯಮಿಗಳು,ಅಧ್ಯಕ್ಷರು ರೋಟರಿ ಕ್ಲಬ್ ಬೈಂದೂರು,ಪೇಪರ್ ಅಸೋಸಿಯೇಷನ್ ಆಫ್ ಇಂಡಿಯಾ ರಾಜ್ಯಾಧ್ಯಕ್ಷರಾದ ಅಮ್ಮ ರವಿಯವರು ಸಂಸ್ಥೆಯ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಸರ್ವೋತಮುಖ ಅಭಿವೃದ್ಧಿ ಕಾಣಲಿ ಎಂದು ಹಾರೈಸಿದರು.

ಕುಮಾರಿ ಸೌಮ್ಯ ಎಸ್.ಖಾರ್ವಿ ಮುಖ್ಯ ಅತಿಥಿಗಳಾಗಿ ತನ್ನನ್ನು ಗುರುತಿಸಿದಕ್ಕಾಗಿ ಸಂತೋಷ ವ್ಯಕ್ತಪಡಿಸಿ ತಾನು ಕೂಡ ವಿದ್ಯಾನಿಧಿ ಯೋಜನೆಯ ವಿದ್ಯಾರ್ಥಿ ವೇತನ ಪಡೆದಿರುವುದನ್ನು ಸ್ಮರಿಸಿಕೊಂಡು, ಮುಂದಕ್ಕೆ ತಾವು ಕೂಡ ನನ್ನಂತೆ ಒಳ್ಳೆಯ ಉದ್ಯೋಗ ಪಡೆದು ನಮ್ಮ ಹೆಮ್ಮೆಯ ಸಂಸ್ಥೆಯಿಂದ ಗುರುತಿಸುವಂತೆ ಆಗಬೇಕು ಎಂದು ಮನದಾಳದ ಮಾತುಗಳಿಂದ ಸ್ಕಾಲರ್ ಶಿಪ್ ಪಡೆಯುವ ವಿದ್ಯಾರ್ಥಿ -ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ವಿದ್ಯಾನಿಧಿ ಯೋಜನೆಯ ಅಧ್ಯಕ್ಷ ರಾದ ದಿನಕರ ಖಾರ್ವಿ ಅಧ್ಯಕ್ಷೀಯ ನುಡಿಗಳನ್ನು ಆಡಿದರು. ಶೈಕ್ಷಣಿಕ ಕ್ಷೇತ್ರದಲ್ಲಿ ದ್ವಿತೀಯ ಪಿಯುಸಿಯಲ್ಲಿ ರಾಜ್ಯಕ್ಕೆ,6ನೇ (rank)ಸ್ಥಾನಿಯಾಗಿದ್ದ ಕುಮಾರಿ ಐಶ್ವರ್ಯ ಖಾರ್ವಿಯವರನ್ನು ಸನ್ಮಾನಿಸಲಾಯಿತು. 116 ವಿದ್ಯಾರ್ಥಿ -ವಿದ್ಯಾರ್ಥಿನಿಯರಿಗೆ 2,25,000 (ಎರಡು ಲಕ್ಷದ ಇಪ್ಪತ್ತೈದು ಸಾವಿರ) ವಿದ್ಯಾರ್ಥಿ ವೇತನ ವಿತರಿಸಲಾಯಿತು. ಫಲಾನುಭವಿಗಳ ಪಟ್ಟಿಯನ್ನು ನಾಮದೇವ ಖಾರ್ವಿ, ಲಕ್ಷ್ಮೀ ಚಂದ್ರಕಾಂತ,ಮೋಹನ ಖಾರ್ವಿ, ಗಣಪತಿ ಖಾರ್ವಿ, ದಯಾನಂದ ಖಾರ್ವಿ ಓದಿದರು. ಆಟೋಟ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಸಂಸ್ಥೆಯ ಜನಪದ ಕಲಾತಂಡದ ಮುಖ್ಯಸ್ಥರಾದ ಶ್ರೀ ಮುಕುಂದ ಖಾರ್ವಿ ಪ್ರಾರ್ಥಿಸಿದರು. ನಾಮದೇವ ಖಾರ್ವಿ ಮತ್ತು ಮುಕುಂದ ಖಾರ್ವಿ ಸಂಸ್ಥೆಯ ಉದಯಗೀತೆ” ವಿದ್ಯಾರಂಗ ಉದಯತರಂಗ” ಹಾಡಿದರು. ಸಂಸ್ಥೆಯ ವಾರ್ಷಿಕ ವರದಿಯನ್ನು ಸಂದೀಪ್ ಎಸ್. ಖಾರ್ವಿ ವಾಚಿಸಿದರು.ಚಂದ್ರಶೇಖರ ಖಾರ್ವಿ ನಿರೂಪಿಸಿ, ಸತೀಶ್ ಎಸ್ ಖಾರ್ವಿ ವಂದಿಸಿದರು.

Leave a Reply

Your email address will not be published. Required fields are marked *