ಕೋಟ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಚಿತ್ರಪಾಡಿ (ಕನ್ನಡ ಮತ್ತು ಅನುಮತಿ ಪಡೆದ ಆಂಗ್ಲ ಮಾಧ್ಯಮ ಶಾಲೆಗೆ ದಾನಿಗಳಾದ ಬೆಳಕು ಕುಟುಂಬಿಕರು ಅಂಬಾಗಿಲುಕೆರೆ ಇವರು ನೀಡಿರುವ ಭೋಜನ ಶಾಲೆ, ಪ್ರಯೋಗಾಲಯ, ವಾಚನಾಲಯ ಕೊಠಡಿಗಳು ಮತ್ತು ಇಲಾಖೆಯ ವತಿಯಿಂದ ಮಂಜೂರಾದ ವಿವೇಕ ಕೊಠಡಿಯ ಶಿಲಾನ್ಯಾಸ ಬುಧವಾರ ಜರಗಿತು.
ಸಭಾಕಾರ್ಯಕ್ರಮವನ್ನು ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಉದ್ಘಾಟಿಸಿ ಮಾತನಾಡಿ ಸರಕಾರಿ ಕನ್ನಡ ಮಾಧ್ಯಮಗಳ ಅಭಿವೃದ್ಧಿಯಲ್ಲಿ ದಾನಿಗಳ ಕೊಡುಗೆ ಅನನ್ಯವಾಗಿದೆ ಈ ದಿಸೆಯಲ್ಲಿ ಎಲ್ಲಾ ಭಾಗಗಳಲ್ಲಿ ಸರಕಾರಿ ಶಾಲೆಗಳು ಉನ್ನತಿ ಕಾಣಲಿ ಎಂದು ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಹೇಳಿದರು.
ಸರಕಾರದ ಅನುದಾನ ನೋಡುವ ಬದಲು ಆಯಾ ವ್ಯಾಪ್ತಿಯ ದಾನಿಗಳ ಸಹಕಾರ ಪಡೆಯುವುದು ಸೂಕ್ತ ಈ ದಿಸೆಯಲ್ಲಿ ಚಿತ್ರಪಾಡಿ ಶಾಲೆ ಒಂದು ಹೆಜ್ಜೆಮುಂದಿರಿಸಿದ್ದು ಶ್ಲಾಘನೀಯ ಶಿಲಾನ್ಯಾಸವನ್ನು ದಾನಿಗಳಾದ ನ್ಯಾಯವಾದಿ ಯೋಗೀಶ್ ಪೂಜಾರಿ ಗೈದರು.
ಮುಖ್ಯ ಅಭ್ಯಾಗತರಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಶಬನಾ ಅಜಮ್,ಶಿಕ್ಷಣ ಇಲಾಖೆಯ ಸಂಯೋಜಕ ಪ್ರಕಾಶ್ ಪಿ.ಬಿ, ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್,ಉದ್ಯಮಿ ಕೃಷ್ಣ ಮರಕಾಲ, ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಕೆ.ಅನಂತಪದ್ಮನಾಭ ಐತಾಳ್,ಕಾರ್ತಟ್ಟು ಅಘೋರೇಶ್ವರ ದೇಗುಲದ ಅಧ್ಯಕ್ಷ ಚಂದ್ರಶೇಖರ ಕಾರಂತ್, ,ಸಾಲಿಗ್ರಾಮ ಪಂ.ಪ ಮುಖ್ಯಾಧಿಕಾರಿ ಶಿವ ನಾಯ್ಕ್ , ಪಂ.ಪA ಸದಸ್ಯರಾದ ರಾಜು ಪೂಜಾರಿ,ರತ್ನ ನಾಗರಾಜ್ ಗಾಣಿಗ,ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲ್,ಶಾಲಾ ಎಸ್ಡಿಎಂಸಿ ಅಧ್ಯಕ್ಷ ಶಂಕರ್ ದೇವಾಡಿಗ, ನೂತನ ಕಟ್ಡಡ ಸಮಿತಿ ಅಧ್ಯಕ್ಷ ನಾಗರಾಜ್ ಗಾಣಿಗ, ಕಾರ್ಯದರ್ಶಿ ಕೃಷ್ಣಮೂರ್ತಿ ಮರಕಾಲ,ಪಾಂಚಜನ್ಯ ಸಂಘ ಪಾರಂಪಳ್ಳಿ ಹಂದಟ್ಟು ಕಾರ್ಯದರ್ಶಿ ಕೃಷ್ಣ ಆಚಾರ್,ಉದ್ಯಮಿ ರಾಜೇಂದ್ರ ಸುವರ್ಣ,ಶಾಲಾ ಪ್ರೋತ್ಸಾಹಕ ನಾಗರಾಜ ಸೋಮಯಾಜಿ,ಚಿತ್ರಪಾಡಿ ಗ್ರಾಮ ಸಹಾಯಕ ಮಂಜುನಾಥ್ ನಾಯರಿ,ಗುತ್ತಿಗೆದಾರ ಸೀತಾರಾಮ ಆಚಾರ್, ಶಾಲಾ ಮುಖ್ಯ ಶಿಕ್ಷಕಿ ಶಾಲಿನಿ ,ಕಾರ್ಕಡ ಶಾಲಾ ಮುಖ್ಯ ಶಿಕ್ಷಕಿ ಜ್ಯೋತಿ, ಅಂಗನವಾಡಿ ಮೇಲ್ವಿಚಾರಕಿ ಲಕ್ಷ್ಮಿ, ಶಾಲಾ ಸಹಶಿಕ್ಷಕರು, ಕಟ್ಟಡ ನಿರ್ವಹಣಾ ಸಮಿತಿ ಪದಾಧಿಕಾರಿಗಳು, ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ದೈಹಿಕ ಶಿಕ್ಷಕ ಸತೀಶ್ಚಂದ್ರ ಶೆಟ್ಟಿ ಸ್ವಾಗತಿಸಿ ನಿರೂಪಿಸಿ ವಂದಿಸಿದರು.
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಚಿತ್ರಪಾಡಿ ಇದರ ಭೋಜನ ಶಾಲೆ, ಪ್ರಯೋಗಾಲಯ, ವಾಚನಾಲಯ ಕೊಠಡಿಗಳು ಮತ್ತು ಇಲಾಖೆಯ ವತಿಯಿಂದ ಮಂಜೂರಾದ ವಿವೇಕ ಕೊಠಡಿಯ ಶಿಲಾನ್ಯಾಸ ಕಾರ್ಯಕ್ರಮವನ್ನು ಶಾಸಕ ಕಿರಣ್ ಕುಮಾರ್ ಕೊಡ್ಗಿ ಉದ್ಘಾಟಿಸಿದರು. ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್,ಉದ್ಯಮಿ ಕೃಷ್ಣ ಮರಕಾಲ, ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಕೆ.ಅನಂತಪದ್ಮನಾಭ ಐತಾಳ್,ಕಾರ್ತಟ್ಟು ಅಘೋರೇಶ್ವರ ದೇಗುಲದ ಅಧ್ಯಕ್ಷ ಚಂದ್ರಶೇಖರ ಕಾರಂತ್ ಮತ್ತಿತರರು ಇದ್ದರು.














Leave a Reply