Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಧ್ಯಕ್ಷರಾದ ಟಿ.ಎ ನಾರಾಯಣ ಗೌಡರನ್ನು ಮತ್ತು ಕಾರ್ಯಕರ್ತರನ್ನು ಬಂಧನಕೆ ಗೊಳಪಟ್ಟ ಕಾರಣದಿಂದ ಜಿಲ್ಲಾಧ್ಯಕ್ಷ ಸುಜಯ್ ಪೂಜಾರಿ ರವರ ನೇತೃತ್ವದಲ್ಲಿ ಹಣೆಗೆ ಕಪ್ಪು ಪಟ್ಟಿ ಧರಿಸಿ ಕರಾಳ ದಿನಾಚರಣೆ ಹಾಗೂ ದೇವರ ಪೂಜೆ

ದಿನಾಂಕ 03-01-2024 ರಂದು ನಡೆದ ಕನ್ನಡ ನಾಮ ಫಲಕ ಚಳುವಳಿಯಲ್ಲಿ ನಮ್ಮ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ, ನೆಲ ಜಲ ಕನ್ನಡಿಗರಿಗಾಗಿ ಹೋರಾಡುವ ಸನ್ಮಾನ್ಯ ಶ್ರೀ ಟಿ. ಎ ನಾರಾಯಣ ಗೌಡರನ್ನು ರಾಜ್ಯ ಸರ್ಕಾರ ಕೂಡಲೇ ಬಿಡುಗಡೆ ಮಾಡಬೇಕು. ಇಲ್ಲವಾದರೆ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಕೂಡಿಕೊಂಡು ಉಗ್ರ ಹೋರಾಟ ಮಾಡಲಾಗುವುದು ಎಂದು ರಾಜ್ಯ ಸರ್ಕಾರ ಕೂಡಲೇ ನಮ್ಮ ಕನ್ನಡ ವರ ಪುತ್ರರಾದ ಟಿ. ಎ ನಾರಾಯಣ ಗೌಡರನ್ನು ಮತ್ತು ಕಾರ್ಯಕರ್ತರನ್ನು ಬಿಡುಗಡೆ ಮಾಡಬೇಕು ಎಂದು ಉಡುಪಿ ಜಿಲ್ಲಾ ಘಟಕ ವತಿಯಿಂದ ಭಗವಾನ್ ಶ್ರೀ ಬಬ್ಬು ಸ್ವಾಮಿ ದೇವಸ್ಥಾನ ಶ್ರೀ ಸ್ವಾಮಿ ಕೊರಗಜ್ಜ ಸನ್ನಿಧಿ ಶ್ರೀ ಕ್ಷೇತ್ರ ಪೇಟೆಬೆಟ್ಟು ಕಟಪಾಡಿ ಉಡುಪಿ ಜಿಲ್ಲೆಯ ಟಿ.ಎ ನಾರಾಯಣಗೌಡ ಹಾಗೂ ಕಾರ್ಯಕರ್ತರಿಗೆ ಅವರಿಗೆ ಅವರ ಹೆಸರಲ್ಲಿ ಪೂಜೆ ಸಲ್ಲಿಸಲಾಯಿತು . ತದನಂತರ ಜಿಲ್ಲಾ ಕೇಂದ್ರದಿಂದ ಎಲ್ಲಾ ಕಾರ್ಯಕರ್ತರ ಹಣೆಗೆ ಕಪ್ಪು ಪಟ್ಟಿ ಧರಿಸಿ ಕರಾಳ ದಿನವನ್ನಾಗಿ ಆಚರಿಸಲಾಯಿತು

ಈ ಸಂದರ್ಭದಲ್ಲಿಜಿಲ್ಲಾಧ್ಯಕ್ಷರು ಸುಜಯ್ ಪೂಜಾರಿ. ಗೌರವಧ್ಯಕ್ಷರು ಸುಂದರ ಎ ಬಂಗೇರ.ಗೀತಾ ಪಂಗಾಳ ಮಹಿಳಾ ಜಿಲ್ಲಾಧ್ಯಕ್ಷರು. ಜಿಲ್ಲಾ ಉಪಾಧ್ಯಕ್ಷರು.ಸಂತೋಷ್ ಕುಲಾಲ್ ಜಿಲ್ಲಾ ಕಾರ್ಯದರ್ಶಿ ಸಿದ್ದಣ್ಣ ಎಸ್ ಪೂಜಾರಿ ಪೂಜಾರಿ. ಜಿಲ್ಲಾ ಸಾಂಸ್ಕೃತಿಕ ಕಾರ್ಯದರ್ಶಿ ಎಸ್ ಕೃಷ್ಣಕುಮಾರ್. ಜಿಲ್ಲಾ ಸದಸ್ಯರು ಅಶೋಕ್ ರಾವ್ . ಜಿಲ್ಲಾ ಮಹಿಳಾ ಉಪಾಧ್ಯಕ್ಷರು ದೇವಕಿ ಬಾರ್ಕೂರು. ಜಿಲ್ಲಾ ಮಹಿಳಾ ಪ್ರಧಾನ ಕಾರ್ಯದರ್ಶಿ ಜ್ಯೋತಿ.ಜಿಲ್ಲಾ ಮಹಿಳಾ ಕಾರ್ಯದರ್ಶಿ ಚಂದ್ರಕಲಾ. ಜಿಲ್ಲಾ ಮಹಿಳಾ ಸಾಂಸ್ಕೃತ ಸಹ ಕಾರ್ಯದರ್ಶಿ ಜ್ಯೋತಿಆರ್ ಕಾರ್ಯಕರ್ತರು ಭಾಗಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *