Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕೋಟ ಅಮೃತೇಶ್ವರೀ ದೇಗುಲಕ್ಕೆ ದುಬೈ ಉದ್ಯಮಿ ಡಾ.ಬಿ.ಆರ್ ಶೆಟ್ಟಿ ಭೇಟಿ

ಕೋಟ: ಪುರಾಣಪ್ರಸಿದ್ಧ ಕೋಟದ ಅಮೃತೇಶ್ವರೀ ಹಲವು ಮಕ್ಕಳ ತಾಯಿ ದೇಗುಲಕ್ಕೆ ದುಬೈನ ಪ್ರಸಿದ್ಧ ಉದ್ಯಮಿ ಡಾ.ಬಿ.ಆರ್ ಶೆಟ್ಟಿ ಭೇಟಿ ನೀಡಿ ಶ್ರೀದೇವಿಯ ದರ್ಶನ ಪಡೆದರು. ಈ ಸಂದರ್ಭದಲ್ಲಿ ದೇಗುಲದ ವ್ಯವಸ್ಥಾಪಕ ಗಣೇಶ್ ಹೊಳ್ಳ ಶಾಲು ಹೋದಿಸಿ ಶ್ರೀಕ್ಷೇತ್ರದ ಮಹತ್ವವನ್ನು ತಿಳಿ ಪಡಿಸಿ ಪ್ರಸಾದ ವಿತರಿಸಿದರು.

ವಿಶ್ವದಲ್ಲೇ ಈ ರೀತಿಯ ದೇಗುಲವನ್ನು ಸಂದರ್ಶಿಸಲ್ಲಿಲ್ಲ ನೋಡಿಯೂ ಇಲ್ಲ ಇದೊಂದು ಅತೀ ಸಂತೋಷದ ಕ್ಷಣವಾಗಿದೆ ಕೋಟ ಎಂಬ ಪರಿಸರ ಹಲವು ಮಕ್ಕಳನ್ನು ಒಡಲಲ್ಲಿ ಇರಿಸಿಕೊಂಡು ದೃಶ್ಯದ ಬಗ್ಗೆ ಮಾಧ್ಯಮಕ್ಕೆ ವಿವರಿಸಿದರು.

ಈ ವೇಳೆ ರಾಜ್ಯ ಕರಕುಶಲ ನಿಗಮದ ಮಾಜಿ ಅಧ್ಯಕ್ಷ ಡಾ.ಬಿ.ರಾಘವೇಂದ್ರ ಶೆಟ್ಟಿ , ದೇಗುಲದ ಆಡಳಿತ ಮಂಡಳಿಯ ಮಾಜಿ ಟ್ರಸ್ಟಿ ಚಂದ್ರ ಪೂಜಾರಿ ಚಂದ್ರ ಆಚಾರ್ ,ರಾಷ್ಟಿçಯ ಮಾನವ ಹಕ್ಕು ರಾಜ್ಯ ಸಮಿತಿ ಕಾರ್ಯದರ್ಶಿ ದಿನೇಶ್ ಗಾಣಿಗ, ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್,ಅರ್ಚಕ ಕೃಷ್ಣ ಜೋಗಿ, ದೇವರಾಜ್ ಜೋಗಿ, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷ ಲಲಿತಾ ಪೂಜಾರಿ, ಕಾರ್ಯದರ್ಶಿ ವಸಂತಿ ಹಂದಟ್ಟು, ಕಾರ್ಯಾಧ್ಯಕ್ಷ ರವೀಂದ್ರ ಕೋಟ, ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ಕೊಠಾರಿ ಮತ್ತಿತರರು ಉಪಸ್ಥಿತರಿದ್ದರು.

ಪುರಾಣ ಪ್ರಸಿದ್ಧ ಕೋಟದ ಅಮೃತೇಶ್ವರೀ ಹಲವು ಮಕ್ಕಳ ತಾಯಿ ದೇಗುಲಕ್ಕೆ ದುಬೈನ ಪ್ರಸಿದ್ಧ ಉದ್ಯಮಿ ಡಾ.ಬಿ.ಆರ್ ಶೆಟ್ಟಿ ಭೇಟಿ ನೀಡಿ ಶ್ರೀದೇವಿಯ ದರ್ಶನ ಪಡೆದರು. ರಾಜ್ಯ ಕರಕುಶಲ ನಿಗಮದ ಮಾಜಿ ಅಧ್ಯಕ್ಷ ಡಾ.ಬಿ.ರಾಘವೇಂದ್ರ ಶೆಟ್ಟಿ ,ರಾಷ್ಟಿçಯ ಮಾನವ ಹಕ್ಕು ರಾಜ್ಯ ಸಮಿತಿ ಕಾರ್ಯದರ್ಶಿ ದಿನೇಶ್ ಗಾಣಿಗ, ದೇಗುಲದ ವ್ಯವಸ್ಥಾಪಕ ಗಣೇಶ್ ಹೊಳ್ಳ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *