
ಕೋಟ: ಪರಿವರ್ತನಾ ಪುನರ್ವಸತಿ ಕೇಂದ್ರ ಮತ್ತು ಮನಸ್ಮಿತ ಫೌಂಡೇಶನ್, ಕೋಟ ಇವರ ಆಶ್ರಯದಲ್ಲಿ ಉಚಿತ ಮಾಸಿಕ ಮಾನಸಿಕ ಆರೋಗ್ಯ ತಪಾಸಣಾ ಶಿಬಿರ ಕೋಟ ಪರಿವರ್ತನಾ ಪುನರ್ವಸತಿ ಕೇಂದ್ರದಲ್ಲಿ ಇತ್ತೀಚಿಗೆ ಜರುಗಿತು.
ಕಾರ್ಯಕ್ರಮವನ್ನು ಖ್ಯಾತ ಹಿನ್ನೆಲೆ ಗಾಯಕರಾದ ರಮೇಶ್ಚಂದ್ರ ಇವರು ದೀಪ ಬೆಳಗುವುದರೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ,ಪ್ರತಿಯೊಬ್ಬ ರೋಗಿಯು ಶಿಬಿರದ ಪ್ರಯೋಜನವನ್ನು ಪಡೆದು ಉತ್ತಮ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಬೇಕು ಎಂದು ಹಿತನುಡಿಗಳನ್ನು ಹೇಳಿದರು.
ಹಾಗೆಯೇ ಮತ್ತೋರ್ವ ಮುಖ್ಯ ಅತಿಥಿಯಾಗಿ ಭಾಗವಹಿಸಿದಂತಹ ಶ್ರೀ ಮಾತಾ ಆಸ್ಪತ್ರೆಯ ಫಿಸಿಷಿಯನ್ ಡಾ. ಪುಷ್ವಿಂಧರ್ ಧುನ್ ಪುತ್ , ಇವರು ಮಾತನಾಡಿ ಎಲ್ಲಾ ರೋಗಿಗಳು ಈ ಶಿಬಿರದ ಪ್ರಯೋಜನವನ್ನು ಪಡೆಯಬೇಕೆಂದು ತಿಳಿಸಿದರು .
ಪರಿವರ್ತನಾ ಕೇಂದ್ರದ ವೈದ್ಯಕೀಯ ನಿರ್ದೇಶಕ ಡಾ.ಪ್ರಕಾಶ್ ಸಿ ತೋಳಾರ್ ಈ ಶಿಬಿರವು ಪುನಾರಂಭಗೊAಡು ಆರ್ಥಿಕವಾಗಿ ಹಿಂದುಳಿದ, ಮಾನಸಿಕ ರೋಗಗಳಿಂದ ಬಳಲುತಿರುವವರಿಗೆ ಪ್ರಯೋಜನಕಾರಿ ಆಗಬೇಕೆಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪರಿವರ್ತನಾ ಕೇಂದ್ರದ ನಿರ್ದೇಶಕರಾದ ಡಾ.ಸತೀಶ್ ಪೂಜಾರಿ,ಉಚಿತ ಔಷಧ ವಿತರಣಾ ಶಿಬಿರವು ಬಡ ಜನರಿಗೆ ಹೆಚ್ಚು ಸದುಪಯೋಗ ಆಗಬೇಕು ಮತ್ತು ಯುವಜನತೆ ಸ್ರಜನಶೀಲ ಚಟುವಟಿಕೆಗಳಾದ ಸಂಗೀತ, ಸಾಹಿತ್ಯದಲ್ಲಿ ತಮ್ಮ ಮನಸ್ಸನ್ನು ತೊಡಗಿಸಿಕೊಳ್ಳಬೇಕು ಎಂದು ಹೇಳಿದರು
ಮನಸ್ಮಿತಾ ಫೌಂಡೇಶನ್ ನಿರ್ದೇಶಕರಾದ ಸವಿತಾ ಪಿ ತೋಳಾರ್ ಮತ್ತು ನೇಹಾ ಎಸ್ ಪೂಜಾರಿ ಉಪಸ್ಥಿತರಿದ್ದರು. ಆಪ್ತಸಮಾಲೋಚಕಿ ಭೂಮಿಕಾ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು , ವ್ಯವಸ್ಥಾಪಕಿ ರಂಜಿತಾ ಇವರು ಕಾರ್ಯಕ್ರಮವನ್ನು ಸ್ವಾಗತಿಸಿ ವಂದಿಸಿದರು.
ಪರಿವರ್ತನಾ ಪುನರ್ವಸತಿ ಕೇಂದ್ರ ಮತ್ತು ಮನಸ್ಮಿತ ಫೌಂಡೇಶನ್, ಕೋಟ ಇವರ ಆಶ್ರಯದಲ್ಲಿ ಉಚಿತ ಮಾಸಿಕ ಮಾನಸಿಕ ಆರೋಗ್ಯ ತಪಾಸಣಾ ಶಿಬಿರ ಖ್ಯಾತ ಹಿನ್ನೆಲೆ ಗಾಯಕರಾದ ರಮೇಶ್ಚಂದ್ರ ಇವರು ದೀಪ ಬೆಳಗುವುದರೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪರಿವರ್ತನಾ ಕೇಂದ್ರದ ವೈದ್ಯಕೀಯ ನಿರ್ದೇಶಕ ಡಾ.ಪ್ರಕಾಶ್ ಸಿ ತೋಳಾರ್, ಶ್ರೀ ಮಾತಾ ಆಸ್ಪತ್ರೆಯ ಫಿಸಿಷಿಯನ್ ಡಾ. ಪುಷ್ವಿಂಧರ್ ಧುನ್ ಪುತ್ ಮತ್ತಿತರರು ಇದ್ದರು.
Leave a Reply