
ಕೋಟ; ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ .ಸಿ ಟ್ರಸ್ಟ್ , ಕುಂದಾಪುರ ತಾಲೂಕು ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಒಕ್ಕೂಟ ತೆಕ್ಕಟ್ಟೆ ವಲಯದ ಸಾಧನಾ ಸಮಾವೇಶ ಕಾರ್ಯಕ್ರಮ ದೇಲಟ್ಟು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಚಾರ್ಮಕ್ಕಿ ನಾರಾಯಣ ಶೆಟ್ಟಿ ಸಭಾಂಗಣದಲ್ಲಿ ಭಾನುವಾರ ಜರುಗಿತು.
ಕಾರ್ಯಕ್ರಮವನ್ನು ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ತೆಂಗಿನ ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿದರು. ಗ್ರಾಮಾಭಿವೃದ್ಧಿ ಯೋಜನೆ ಗ್ರಾಮ ಮಟ್ಟದಲ್ಲಿ ಅನುಷ್ಠಾನ ಆದ ನಂತರದ ಸಾಮಾಜಿಕವಾಗಿ ಆರ್ಥಿಕವಾಗಿ ಸಾರ್ವಜನಿಕರ ಬದಲಾವಣೆ ಜನರ ಆರ್ಥಿಕ ಸಬಲೀಕರಣಕ್ಕೆ ಮೂಲವಾಗಿದೆ .ದೇವಸ್ಥಾನಗಳ ಅಭಿವೃದ್ಧಿ ಕೆರೆ ಅಭಿವೃದ್ಧಿ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ ರಟ್ಟಾಡಿ ಗ್ರಾಮಾಭಿವೃದ್ಧಿ ಯೋಜನೆ ಅನುಷ್ಠಾನಗೊಂಡ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು.
ಕುಂದಾಪುರ ತಾಲೂಕಿನ ಯೋಜನಾಧಿಕಾರಿ ನಾರಾಯಣ ಪಾಲನ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ತೆಕ್ಕಟ್ಟೆ ಮಲ್ಯಾಡಿಯ ಧಾರ್ಮಿಕ ಮುಖಂಡರಾದ ಶಿವರಾಮ್ ಶೆಟ್ಟಿ . ಬೇಳೂರು ಗ್ರಾ.ಪಂ ಅಧ್ಯಕ್ಷ ಬಿ.ಕರುಣಾಕರ ಶೆಟ್ಟಿ ಬೇಳೂರು.,ದೇಲಟ್ಟು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ,ತೆಕ್ಕಟ್ಟೆ ವಲಯದ ವಲಯ ಅಧ್ಯಕ್ಷ ಸುಕುಮಾರ ಶೆಟ್ಟಿ ದೇಲಟ್ಟು, ಬೇಳೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಉಷಾ ನಿತ್ಯಾನಂದ ಕೊಠಾರಿ ವಲಯದ ಸೇವಾ ಪ್ರತಿನಿಧಿಯವರು ಎಲ್ಲಾ ತಂಡಗಳ ಸದಸ್ಯರು ಪದಾಧಿಕಾರಿಗಳು. ಸಾರ್ವಜನಿಕರು ಉಪಸ್ಥಿತರಿದ್ದರು.
ವಲಯದ ಮೇಲ್ವಿಚಾರಕರಾದ ರಾಧಿಕಾ ಸತೀಶ್ ವಲಯದ ಸಾಧನೆಯ ವರದಿ ಮಂಡಿಸಿದರು.ನAತರ ವಲಯದ ಒಂಭತ್ತು ಒಕ್ಕೂಟದ ಆಯ್ದ ಉತ್ತಮ ತಂಡದ ಸದಸ್ಯರನ್ನು ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರನ್ನು,ಮಿನಿ ಬ್ಯಾಂಕ್ ಆಫ್ ಬರೋಡ ಸೇವಾ ಕೇಂದ್ರದ ಸಿಬ್ಬಂದಿಯವರನ್ನು, ಎಲ್ಲಾ ಒಕ್ಕೂಟದ ಪದಾಧಿಕಾರಿಗಳನ್ನು ,ವಲಯದ ಒಂಭತ್ತು ಒಕ್ಕೂಟ ಸೇವಾ ಪ್ರತಿನಿಧಿಯವರನ್ನು ಗೌರವಿಸಲಾಯಿತು. ವಲಯದ ಮೇಲ್ವಿಚಾರಕಿ ರಾಧಿಕಾ ಕಾರ್ಯಕ್ರಮ ನಿರೂಪಿಸಿ ನಿರ್ವಹಿಸಿದರು. ಕುಂಭಾಶಿ ಸೇವಾಪ್ರತಿನಿಧಿ ಪ್ರಭಾವತಿ ಸ್ವಾಗತಿಸಿದರು. ಸ್ಥಳೀಯ ಸೇವಾ ಪ್ರತಿನಿಧಿ ಉಷಾ ವಂದಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಒಕ್ಕೂಟ ತೆಕ್ಕಟ್ಟೆ ವಲಯದ ಸಾಧನಾ ಸಮಾವೇಶವನ್ನು ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ತೆಂಗಿನ ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿದರು. ತೆಕ್ಕಟ್ಟೆ ಮಲ್ಯಾಡಿಯ ಧಾರ್ಮಿಕ ಮುಖಂಡರಾದ ಶಿವರಾಮ್ ಶೆಟ್ಟಿ . ಬೇಳೂರು ಗ್ರಾ.ಪಂ ಅಧ್ಯಕ್ಷ ಬಿ.ಕರುಣಾಕರ ಶೆಟ್ಟಿ ಬೇಳೂರು.,ದೇಲಟ್ಟು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಮತ್ತಿತರರು ಇದ್ದರು.
Leave a Reply