ಕೋಟ: ಹಂದೆ ಶ್ರೀ ವಿಷ್ಣುಮೂರ್ತಿ ಶ್ರೀ ವಿನಾಯಕ ದೇವಸ್ಥಾನದ ಪುರಾತನ ಪುಷ್ಕರಣಿಗಳಲ್ಲಿ ಒಂದಾಗಿರುವ ದೇವಸ್ಥಾನದ ಕಲ್ಯಾಣಿಯಲ್ಲಿ ಕೋಟ ಹದಿನಾಲ್ಕು ಗ್ರಾಮಗಳ ಗುರುಪೀಠವೆನಿಸಿದ ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದ ರಥೋತ್ಸವದ ಅವಭೃತವು ನಡೆಯುತ್ತದೆ, ಈ ಪುಷ್ಕರಣಿಯಲ್ಲಿ 18ರಂದು ಶ್ರೀ ದೇವರು ಬರುವ ಸಂದರ್ಭ ಶ್ರೀ ವಿಶ್ವವಿನಾಯಕ ವಿವಿಧೋದ್ದೇಶ ಸಹಕಾರಿ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ಸಂಜೆ 5.00ಕ್ಕೆ ಸುದರ್ಶನ ಉರಾಳರ ಸಂಯೋಜನೆಯಲ್ಲಿ “ಭೀಷ್ಮೊತ್ಪತ್ತಿ” ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಕಲಾವಿದರಾಗಿ ವಿದ್ವಾಂಸ ಸುಜಯೀಂದ್ರ ಹಂದೆ, ಸೃಜನ್ ಹೆಗಡೆ, ಆದಿತ್ಯ ಭಟ್, ರಾಘವೇಂದ್ರ ಹೆಗಡೆ, ಸತೀಶ್ ಹಾಲಾಡಿ, ನಾಗರಾಜ ಕುಂಕಿಪಾಲ್, ಶಿವಾನಂದ ಕೋಟ, ಸುದೀಪ ಉರಾಳ್, ನವೀನ, ಉದಯ, ರಾಜು ಪೂಜಾರಿ ಇನ್ನಿತರರು ಕಲಾವಿದರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಕಾರ್ಯಕ್ರಮಕ್ಕೆ ಯಕ್ಷದೇಗುಲ ಬೆಂಗಳೂರು, ಗುರು ಕಟ್ಟೆ ಬಳಗ, ಕಟ್ಟೆ ಗೆಳೆಯರು ಹಂದಟ್ಟು, ದೇವಸ್ಥಾನದ ಆಡಳಿತ ಮಂಡಳಿಯವರು ಸಹಕಾರ ನೀಡಲಿದ್ದಾರೆ.
















Leave a Reply