ಕೋಟ: ಸಮಾಜದ ಅಭಿವೃದ್ಧಿಗೆ ಹಿರಿಯರ ಕೊಡುಗೆ ಎಷ್ಟಿದೆಯೋ ಯುವ ಸಮುದಾಯ ಕೂಡಾ ಅದೇ ರೀತಿಯಲ್ಲಿ ಕಾರ್ಯೋನ್ಮುಖವಾಗಬೇಕು ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಅಶೋಕ್ ಹಾರ್ನಳ್ಳಿ ಹೇಳಿದರು.
ಗುರುವಾರ ಸಾಲಿಗ್ರಾಮ ಜಾತ್ರೆಯ ಪ್ರಯುಕ್ತ ಯುವ ವೇದಿಕೆ ಕೂಟ ಮಹಾಜಗತ್ತುಅಂಗಸAಸ್ಥೆ ಸಾಲಿಗ್ರಾಮ ಇದರ ಆಶ್ರಯದಲ್ಲಿ 7ನೇ ವರ್ಷದ ವಾರ್ಷಿಕೋತ್ಸವದ ಸ್ವಯಂಭೂ 75 ಸಮಾಜರತ್ನ ಡಾ.ಪಿ ವಿಷ್ಣುಮೂರ್ತಿ ಮತ್ತು ಐತಾಳ್ ಇವರನ್ನು ಸನ್ಮಾನಿಸಿ ಮಾತನಾಡಿ ಬ್ರಾಹ್ಮಣ ಸಮುದಾಯ ತನ್ನದೆ ಆದ ತಳಹದಿಯಲ್ಲಿ ಬೆಳೆದು ನಿಂತಿದೆ.ವಿವಿಧ ಕ್ಷೇತ್ರದಲ್ಲಿ ಸಾಧನೆ ಮಂಚೂಣಿ, ಯಾವುದೇ ಸಮುದಾಯದ ಬಗ್ಗೆ ಕೆಟ್ಟದಾಗಿ ಯೋಚಿಸದೆ ಎಲ್ಲಾ ಸಮುದಾಯದ ಶ್ರೇಯಸ್ಸು ಲೋಕ ಕ್ಷೇಮ ಬಯಸುತ್ತಾರೆ.
ಅಯೋಧ್ಯಾ ಭವ್ಯ ಶ್ರೀಯಾಮ ದೇಗುಲದ ಹೋರಾಟದ ವಿಚಾರದಲ್ಲೂ ಬ್ರಾಹ್ಮಣ ಸಮುದಾಯದ ಕೊಡುಗೆ ಅನನ್ಯವಾಗಿದೆ. ಪ್ರಜಾಪ್ರಭುತ್ವ ಬಾಹ್ಮಣ ಸಮುದಾಯವನ್ನು ಮೂಲೆಗುಂಪಾಗಿಸುವ ವ್ಯವಸ್ಥೆ ನಡೆಯುತ್ತಿದೆ. ಅದಕ್ಕಾಗಿ ಪಾಶ್ಚಾತ್ಯ ಸಂಸ್ಕöÈತಿ ಬಿತ್ತುವ ಕೆಲಸ ನಡೆಯುತ್ತಿದೆ.ಇದು ಈ ಭರತ ಖಂಡದಲ್ಲಿ ಕೈಗೂಡದು.ಯಾವ ಪಿತೂರಿಗಳು ಕಾರ್ಯನಿರ್ವಹಿಸದು.
ದೇಶದ ಸಂಸ್ಕೃತಿ ಸಂಸ್ಕಾರ ಉಳಿಸಿ ಬೆಳೆಸುವ ಕಾರ್ಯ ನಾವೆಲ್ಲರೂ ಮಾಡೋಣ ಇದಕ್ಕಾಗಿ ಸಂಘಟನೆ ಸದೃಢಗೊಳಿಸಿ ಬ್ರಾಹ್ಮಣ ಸಮುದಾಯವನ್ನು ಮುನ್ನೆಡೆಸುವ ಎಂದರಲ್ಲದೆ ಇಂದು ಸಮುದಾಯದ ಸಾಮಾಜಿಕ ಕಾರ್ಯದ ಹರಿಕಾರ ಡಾ.ಐತಾಳರಿಗೆ ಸನ್ಮಾನಿಸುವ ಕಾರ್ಯ ನಿಜಕ್ಕೂ ಪ್ರಶಂಸನೀಯ ಎಂದರು.
ಕಾರ್ಯಕ್ರಮವನ್ನು ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಕೆ.ಎಸ್ ಕಾರಂತ ಉದ್ಘಾಟಿಸಿ ಶುಭಹಾರೈಸಿದರು.
ಇದೇ ವೇಳೆ ಬೆಂಗಳೂರಿನ ಪ್ರಸಿದ್ಧ ವೈದ್ಯ ಡಾ.ಪಿ ವಿಷ್ಣುಮೂರ್ತಿ ಐತಾಳ್ ಇವರಿಗೆ 75ರ ಸ್ವಯಂಭೂ ಶೀರ್ಷಿಕೆಯಡಿ ಗೌರವಿಸಿ ಸನ್ಮಾನಿಸಲಾಯಿತು.
ಅಧ್ಯಕ್ಷತೆಯನ್ನು ಯುವ ವೇದಿಕೆಯ ಅಧ್ಯಕ್ಷ ಗಿರೀಶ್ ಕುಮಾರ್ ಮಯ್ಯ ವಹಿಸಿ ಸ್ವಾಗತಿಸಿದರು.
ಸಮುದಾಯದ ಪ್ರತಿಭಾನ್ವಿತ ವಿಧ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು.
ಮುಖ್ಯ ಅತಿಥಿಗಳಾಗಿ ಕೂಟ ಮಹಾಜಗತ್ತು ಕೇಂದ್ರ ಸಂಸ್ಥೆಯ ಅಧ್ಯಕ್ಷ ಎಚ್ ಸತೀಶ್ ಹಂದೆ, ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದ ಟ್ರಸ್ಟಿ ಕೆ.ಅನಂತಪದ್ಮನಾಭ ಐತಾಳ್,ಕೂಟ ಮಹಾಜಗತ್ತು ಕೇಂದ್ರ ಸಂಸ್ಥೆ ಮಾಜಿ ಉಪಾಧ್ಯಕ್ಷ ಕೆ.ತಾರಾನಾಥ ಹೊಳ್ಳ,ಕೂಟಮಹಾಜಗತ್ತು ಅಂಗಸAಸ್ಥೆ ಕಾರ್ಯದರ್ಶಿ ಪಿ.ಮಂಜುನಾಥ್ ಉಪಾಧ್ಯಾ, ಅಘೋರೇಶ್ವರ ದೇಗುಲದ ಆಡಳಿತ ಮಂಡಳಿ ಅಧ್ಯಕ್ಷ ಚಂದ್ರಶೇಖರ ಕಾರಂತ್,ಕೂಟಮಹಾಜಗತ್ತು ಅಂಗಸAಸ್ಥೆ ಸಾಲಿಗ್ರಾಮ ಅಧ್ಯಕ್ಷ ಶ್ರೀಪತಿ ಅಧಿಕಾರಿ,ಹಿರಿಯ ಕೃಷಿಕ ರಘು ಮಧ್ಯಸ್ಥ,ಕೂಟ ಬಂಧು ಇದರ ಮುಖ್ಯಕಾರ್ಯನಿರ್ವಹಣಾಧಿಕಾರಿ ಉಮೇಶ್ ಕಾರಂತ್, ಉಪನ್ಯಾಸಕ ಬಾಲಕೃಷ್ಣ ನಕ್ಷತ್ರಿ ಉಪಸ್ಥಿತರಿದ್ದರು. ಯುವ ವೇದಿಕೆ ಕಾರ್ಯದರ್ಶಿ ಶ್ರೀಕಾಂತ್ ಐತಾಳ್ ವರದಿ ವಾಚಿಸಿದರು.
ಕಾರ್ಯಕ್ರಮವನ್ನು ಯುವ ವೇದಿಕೆಯ ಗೌರವ ಸಲಹೆಗಾರ ಶಶಿಧರ ಮಯ್ಯ ನಿರೂಪಿಸಿದರು.ಯುವ ವೇದಿಕೆ ಗೌರವಾಧ್ಯಕ್ಷ ಕೃಷ್ಣಪ್ರಸಾದ್ ಪಿ ವೈ ವಂದಿಸಿದರು. ನಂತರ ಸಂಗೀತ ರಸಮಂಜರಿ ಕಾರ್ಯಕ್ರಮ ನೆರವೆರಿತು.
ಭವ್ಯ ಮೆರವಣಿಗೆ ಮೂಲಕ ಡಾ.ವಿಷ್ಣುಮೂರ್ತಿ ಐತಾಳ್ ಇವರನ್ನು ಚಂಡೆಯ ಕರತಾಳನದ ಮೂಲಕ ಶ್ರೀ ದೇಗುಲದಿಂದ ಕರೆತರಲಾಯಿತು.
ಸಾಲಿಗ್ರಾಮ ಜಾತ್ರೆಯ ಪ್ರಯುಕ್ತ ಯುವ ವೇದಿಕೆ ಕೂಟ ಮಹಾಜಗತ್ತುಅಂಗಸAಸ್ಥೆ ಸಾಲಿಗ್ರಾಮ ಇದರ ಆಶ್ರಯದಲ್ಲಿ 7ನೇ ವರ್ಷದ ವಾರ್ಷಿಕೋತ್ಸವದ ಸ್ವಯಂಭೂ 75 ಸಮಾಜರತ್ನ ಡಾ.ಪಿ ವಿಷ್ಣುಮೂರ್ತಿ ಮತ್ತು ಐತಾಳ್ ಇವರನ್ನು ಸನ್ಮಾನಿಸಲಾಯಿತು. ಯುವ ವೇದಿಕೆಯ ಅಧ್ಯಕ್ಷ ಗಿರೀಶ್ ಕುಮಾರ್ ಮಯ್ಯ, ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಕೆ.ಎಸ್ ಕಾರಂತ,
ಕೂಟ ಮಹಾಜಗತ್ತು ಕೇಂದ್ರ ಸಂಸ್ಥೆಯ ಅಧ್ಯಕ್ಷ ಎಚ್ ಸತೀಶ್ ಹಂದೆ, ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದ ಟ್ರಸ್ಟಿ ಕೆ.ಅನಂತಪದ್ಮನಾಭ ಐತಾಳ್ ಮತ್ತಿತರರು ಇದ್ದರು.
















Leave a Reply