ಕೋಟ: ಗೋ ಕರುಗಳ ಪ್ರದರ್ಶನ ಸಮಿತಿ ರಚನೆಯ ಕುರಿತು ಶುಕ್ರವಾರ ಸಭೆ ಕೋಟ. ಸಿ ಎ ಬ್ಯಾಂಕ್ ಸಭಾಂಗಣದಲ್ಲಿ ಏರ್ಪಡಿಸಲಾಯಿತು. ಇದೇ ಬರುವ ಫೆ.20ರಂದು ಕೋಟದ ಶಾಂಭವೀ ಶಾಲೆಯ ಮೈದಾನದಲ್ಲಿ ಸಮಾಜ ಸೇವಕ ಆನಂದ್ ಸಿ ಕುಂದರ್ ಅಮೃತಮಹೋತ್ಸವ ವರ್ಷಾಚರಣೆಯ ಹಿನ್ನಲೆಯಲ್ಲಿ ಕೋಟದ ಪಂಚವರ್ಣ ಯುವಕ ಮಂಡಲ ಹಾಗೂ ಮಹಿಳಾ ಮಂಡಲ, ಕೋಟ ಸಹಕಾರಿ ವ್ಯವಸಾಯಕ ಸಂಘ, ಪಶುಸAಗೋಪನಾ ಇಲಾಖೆ ಬ್ರಹ್ಮಾವರ,ಸಹಕಾರ ಯೂನಿಯನ್ ಉಡುಪಿ ಜಿಲ್ಲೆ ,ಕೆ.ಎಂ.ಎಫ್, ಗೀತಾನAದ ಫೌಂಡೇಶನ್ ಮಣೂರು ಇವರುಗಳ ಜಂಟಿ ಆಶ್ರಯದಲ್ಲಿ ಈ ಕಾರ್ಯಕ್ರಮ ಜರಗಲಿದ್ದು ಇದರ ಪೂರ್ವಭಾವಿ ಸಮಿತಿ ರಚನಾ ಸಭೆಯ ಅಧ್ಯಕ್ಷತೆಯನ್ನು ಗೌರವಾಧ್ಯಕ್ಷ ಆನಂದ್ ಸಿ ಕುಂದರ್ ವಹಿಸಿದ್ದರು.
ಇದೇ ವೇಳೆ ವಿವಿಧ ರೀತಿಯ ಸಮಿತಿಗಳನ್ನು ರಚಿಸಲಾಯಿತು. ಕಾರ್ಯಕ್ರಮಗಳ ರೂಪುರೇಖೆಗಳ ಬಗ್ಗೆ ಸಭೆ ತಿರ್ಮಾನ ಕೈಗೊಂಡಿತು. ಕಾರ್ಯಕ್ರಮದಲ್ಲಿ ಸಮಿತಿ ಪ್ರಮುಖರಾದ ಕೋಟ ಸಿ ಎ ಬ್ಯಾಂಕ್ ಅಧ್ಯಕ್ಷ ಜಿ.ತಿಮ್ಮ ಪೂಜಾರಿ,ಬ್ರಹ್ಮಾವರ ಪಶುಸಂಗೋಪನಾ ಇಲಾಖೆಯ ಮುಖ್ಯ ವೈದ್ಯಾಧಿಕಾರಿ ಡಾ ಪ್ರದೀಪ್ ಕುಮಾರ್, ಕೆ.ಎಂ.ಎಫ್ ವಿಸ್ತರ್ಣಾಧಿಕಾರಿ ಸ್ವರಸ್ವತಿ,ಉಡುಪಿ ಸಹಕಾರಿ ಯೂನಿಯನ್ ನಿರ್ದೇಶಕ ಶ್ರೀಧರ್ ಪಿ.ಎಸ್, ಪಂಚವರ್ಣ ಯುವಕ ಮಂಡಲದ ಸ್ಥಾಪಾಕಾಧ್ಯಕ್ಷ ಸುರೇಶ್ ಗಾಣಿಗ, ಅಧ್ಯಕ್ಷ ಅಜಿತ್ ಆಚಾರ್ ಕಾರ್ಯಾಧ್ಯಕ್ಷ ರವೀಂದ್ರ ಕೋಟ,ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ,ಕೋಟ ಸಿಎ ಬ್ಯಾಂಕ್ ನಿರ್ದೇಶಕ ಭಾಸ್ಕರ್ ಶೆಟ್ಟಿ,ಹಿರಿಯ ಕೃಷಿಕರಾದ ರಘು ಮಧ್ಯಸ್ಥ ಪಾರಂಪಳ್ಳಿ,ಶಿವಮೂರ್ತಿ ಕೆ,ಗೀತಾನಂದ ಫೌಂಡೇಶನ್ ಸಮಾಜಕಾರ್ಯವಿಭಾಗದ ರವಿಕಿರಣ್ ಕಾಂಚನ್,ಕೋಟ ಸಿ ಎ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶರತ್ ಕುಮಾರ್ ಶೆಟ್ಟಿ,ವಿವಿಧ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪಂಚವರ್ಣ ಮಹಿಳಾ ಮಂಡಲದ ಸಂಚಾಲಕಿ ಸುಜಾತ ಬಾಯರಿ ಸ್ವಾಗತಿಸಿ ನಿರೂಪಿಸಿ ವಂದಿಸಿದರು.
ಗೋ ಕರುಗಳ ಪ್ರದರ್ಶನ ಸಮಿತಿ ರಚನೆಯ ಕುರಿತು ಶುಕ್ರವಾರ ಸಭೆ ಕೋಟ. ಸಿ ಎ ಬ್ಯಾಂಕ್ ಸಭಾಂಗಣದಲ್ಲಿ ಏರ್ಪಡಿಸಲಾಯಿತು. ಗೌರವಾಧ್ಯಕ್ಷ ಆನಂದ್ ಸಿ ಕುಂದರ್, ಸಮಿತಿ ಪ್ರಮುಖರಾದ ಕೋಟ ಸಿ ಎ ಬ್ಯಾಂಕ್ ಅಧ್ಯಕ್ಷ ಜಿ.ತಿಮ್ಮ ಪೂಜಾರಿ,ಬ್ರಹ್ಮಾವರ ಪಶುಸಂಗೋಪನಾ ಇಲಾಖೆಯ ಮುಖ್ಯ ವೈದ್ಯಾಧಿಕಾರಿ ಡಾ ಪ್ರದೀಪ್ ಕುಮಾರ್ ಮತ್ತಿತರರು ಇದ್ದರು.
















Leave a Reply