ಕೋಟ: ಶ್ರೀಮಠ ಬಾಳೆಕುದ್ರು ಹಂಗಾರಕಟ್ಟೆ ಇಲ್ಲಿ ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಶ್ರೀ ರಾಮಚಂದ್ರನ ಭವ್ಯ ಮೂರ್ತಿಯ ಪ್ರಾಣಪ್ರತಿಷ್ಠೆ ಹಿನ್ನಲ್ಲೆಯಲ್ಲಿ ಶ್ರೀಮಠದ ಶ್ರೀಶ್ರೀ ನೃಸಿಂಹಾಶ್ರಮ ಸ್ವಾಮೀಜಿಯವರ ಸಮ್ಮುಖದಲ್ಲಿ ಶ್ರೀಆಂಜನೇಯ ದೇವರ ಸಾನಿಧ್ಯದಲ್ಲಿ ವಿಶೇಷ ಸೇವೆಗಳು ಜರುಗಲಿದೆ.
ಇದರ ಅಂಗವಾಗಿ ಜ.22ರ ಸೋಮವಾರದಂದು ಶ್ರೀಮಠದಲ್ಲಿ ಶ್ರೀರಾಮತಾರಕ ಹೋಮ, ಹೂವಿನ ಅಲಂಕಾರ ಸೇವೆ, ಶ್ರೀತುಳಸಿ ಅಲಂಕಾರ ಸೇವೆ, ವಡೆಸರ ನೈವೇದ್ಯ ಸೇವೆ,ಪವಮಾನ ಅಭಿಷೇಕ ಸೇವೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ಸೇವೆಯು ಜರುಗಲಿದೆ.ಎಂದು ಶ್ರೀಮಠ ತಿಳಿಸಿದೆ














Leave a Reply