ಕೋಟ: ಕೋಡಿ ಕನ್ಯಾಣ ಶ್ರೀ ಮಹಾಸತೀಶ್ವರಿ ದೇಗುಲದ ವಾರ್ಷಿಕ ಜಾತ್ರೋತ್ಸವ ಕಾರ್ಯಕ್ರಮ 18ರಿಂದ ಮೊದಲ್ಗೊಂಡು 22ರ ವರೆಗೆ ನಡೆಯಲಿದೆ.
ಶ್ರೀ ದೇಗುಲದಲ್ಲಿ ವಾರ್ಷಿಕ ಗೆಂಡೋತ್ಸವ ಶುಕ್ರವಾರ ರಾತ್ರಿ ನೆರವೆರಿದರೆ ಶನಿವಾರ ಪೂರ್ವಾಹ್ನ ಮಂಡಲ ಪೂಜೆ, ತುಲಾಭಾರ, ಮಹಾಮಂಗಳಾರತಿ, ಹಣ್ಣುಕಾಯಿ, ಮಹಾಬಲಿಪೂಜೆ, ಶೆಡಿ ಪೂಜೆ (ಮುಳ್ಳು ಹಾವಿಗೆ ದರ್ಶನ), ಬೆನಗಲ್ಲು ಪೂಜೆ, ಜೋಗಿ ಪುರುಷನ ದರ್ಶನ, ಬಾಗಿಲು ಬೊಬ್ಬರ್ಯನ ದರ್ಶನ, ಅಜ್ಜಮ್ಮ ದೇವರಿಗೆ ಪುಷ್ಪಾರ್ಚನೆ , ಮಹಾಅನ್ನಸಂತರ್ಪಣೆ ಕಾರ್ಯಕ್ರಮಗಳು ಸಂಪನ್ನಗೊಂಡಿತು.
ಅದೇ ರೀತಿ ಜ. 21 ಬೆಳಿಗ್ಗೆ ಗಂಟೆ 10:00ಕ್ಕೆ ಶುದ್ಧ ಪೂಜೆ, ಮಧ್ಯಾಹ್ನ ಗಂಟೆ 12:30ಕ್ಕೆ ಹಸಲ ದೈವಕ್ಕೆ ಹರಕೆ ಸಲ್ಲಿಕೆ ರಾತ್ರಿ 9:30ಕ್ಕೆ ಕೋಳೆಯರಮಾವನ ಹರಕೆ ಸಲ್ಲಿಸುವ ಸೇವೆ, ಮಲೆಸಾವರಿ ಮತ್ತು ಪರಿವಾರ ದೈವಗಳ ಕೋಲ ಸೇವೆ, 22ನೇ ಸೋಮವಾರ ಪ್ರಾತಃಕಾಲ 6:00ಕ್ಕೆ ಮಲೆಸಾವರಿ ದೈವ ದರ್ಶನ ,ಹರಕೆ ಸೇವೆಗಳ ಕೇಳಿಕೆ, ಸಂಜೆ ಮಹಾಪ್ರಸಾದ ವಿತರಣೆ, ಯಕ್ಷಗಾನ ಬಯಲಾಟ ಕಾರ್ಯಕ್ರಮಗಳು ನಡೆಯಲಿದೆ ಎಂದು ಶ್ರೀ ದೇವಳ ತಿಳಿಸಿದೆ.
ಈ ಜಾತ್ರಾ ಕಾರ್ಯಕ್ರಮದಲ್ಲಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಆನಂದ್ ಸಿ ಕುಂದರ್, ಉಪಾಧ್ಯಕ್ಷ ಶಿವ ಎಸ್ ಕರ್ಕೆರ, ಆಡಳಿತ ಮಂಡಳಿಯ ಅಧ್ಯಕ್ಷ ದೇವದಾಸ್ ಸಾಲಿಯಾನ್, ಪ್ರಮುಖರಾದ ಶಂಕರ್ ಕುಂದರ್, ಶಂಕರ್ ಬಂಗೇರ , ಪ್ರಭಾಕರ್ ಮೆಂಡನ್, ಉದಯ್ ಕಾಂಚನ್, ಜಗನಾಥ್ ಅಮೀನ್, ಸತೀಶ್ ತಿಂಗಳಾಯ, ಜಯಂತ್ ಅಮೀನ್, ರಾಜು ಬಂಗೇರ ಮತ್ತಿತರರ ಗಣ್ಯರು ಉಪಸ್ಥಿತರಿದ್ದರು.
ಕೋಡಿ ಕನ್ಯಾಣ ಶ್ರೀ ಮಹಾಸತೀಶ್ವರಿ ದೇಗುಲದ ವಾರ್ಷಿಕ ಜಾತ್ರೋತ್ಸವ ಕಾರ್ಯಕ್ರಮ 18ರಿಂದ ಮೊದಲ್ಗೊಂಡು 22ರ ವರೆಗೆ ನಡೆಯಲಿದೆ. ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಆನಂದ್ ಸಿ ಕುಂದರ್, ಉಪಾಧ್ಯಕ್ಷ ಶಿವ ಎಸ್ ಕರ್ಕೆರ, ಆಡಳಿತ ಮಂಡಳಿಯ ಅಧ್ಯಕ್ಷ ದೇವದಾಸ್ ಸಾಲಿಯಾನ್, ,ಪ್ರಭಾಕರ್ ಮೆಂಡನ್ ಮತ್ತಿತರರು ಇದ್ದರು.















Leave a Reply